Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊರೊನಾ ವೈರಸ್‌ ಭೀತಿ ಮಧ್ಯೆ ಪ್ರಮುಖ ಕ್ರಿಕೆಟ್ ಲೀಗ್ ಟೂರ್ನಿಯ ದಿನಾಂಕ ಘೋಷಣೆ!

Abu Dhabi T10 League To Be Held From November 19-28

ಕೊರೊನಾ ವೈರಸ್‌ ಕಾರಣದಿಂದಾಗಿ ಜಗತ್ತಿನಾದ್ಯಂತ ಕ್ರೀಡಾ ವೇಳಾಪಟ್ಟಿಗಳು ಅಲ್ಲೋಲ ಕಲ್ಲೋಲವಾಗಿದೆ. ನಿಗದಿಯಾಗಿದ್ದ ಎಲ್ಲಾ ಕ್ರೀಡಾಕೂಟಗಳೂ ರದ್ದಾಗಿದೆ. ಈ ಮಧ್ಯೆ ಕ್ರೀಡಾಕೂಟವೊಂದರೆ ದಿನಾಂಕ ಪ್ರಕಟಣೆಯಾಗಿದೆ. ಇದು ಅಚ್ಚರಿಯೆನಿಸಿದರೂ ನಿಜ.

ಈ ಕ್ರೀಡಾ ಕೂಟ ಕ್ರಿಕೆಟ್‌ಗೆ ಸಂಬಂಧಿಸಿದ್ದು ಎಂಬುದು ಮತ್ತೊಂದು ಮಾಹಿತಿ. ಅದು ಕೂಡ ಇದೆ ವರ್ಷದಲ್ಲಿ ಈ ಕ್ರೀಡಾಕೂಟ ನಡೆಯಲಿದೆ. ಹಾಗಾದರೆ ಆ ಕ್ರಿಕೆಟ್ ಟೂರ್ನಮೆಂಟ್ ಯಾವುದು ಎಂಬ ಕುರಿತು ನಿಮ್ಮಲ್ಲಿ ಪ್ರಶ್ನೆಗಳು ಸಹಜವಾಗಿಯೇ ಮೂಡಿರುತ್ತದೆ. ಅದರ ಸಂಪೂರ್ಣ ಮಾಹಿತಿಯನ್ನು ನಿಮ್ಮ ಮುಂದಿಡುತ್ತೇವೆ

ಇದೇ ನವೆಂಬರ್ ತಿಂಗಳಲ್ಲಿ ನಡೆಯಲಿರುವ ವಿಶ್ವ ಕ್ರಿಕೆಟ್‌ನ ದಿಗ್ಗಜರು ಭಾಗವಹಿಸುವ ಕ್ರಿಕೆಟ್ ಟೂರ್ನಿ ನಡೆಯಲಿದೆ. ಮತ್ತಷ್ಟು ಮಾಹಿತಿಗೆ ಮುಂದೆ ಓದಿ

ಟಿ10 ಕ್ರಿಕೆಟ್ ಟೂರ್ನಿಗೆ ದಿನಾಂಕ ಫಿಕ್ಸ್

ಟಿ10 ಕ್ರಿಕೆಟ್ ಟೂರ್ನಿಗೆ ದಿನಾಂಕ ಫಿಕ್ಸ್

ಕೊರೊನಾ ವೈರಸ್‌ನ ಆತಂಕದ ಮಧ್ಯೆಯೇ ಕ್ರಿಕೆಟ್ ಟೂರ್ನಿ ನಡೆಸುವ ದಿನಾಂಕ ಪ್ರಕಟವಾಗಿದೆ. ಆ ಟೂರ್ನಿ ಬೇರೆ ಯಾವುದೂ ಅಲ್ಲ. ಅದು ಅಬುದಾಬಿ ಟಿ10 ಟೂರ್ನಮೆಂಟ್. 2017ರಿಂದ ಆರಂಭವಾದ ಟೂರ್ನಮೆಂಟ್‌ನ ನಾಲ್ಕನೇ ಆವೃತ್ತಿಯ ದಿನಾಂಕವನ್ನು ಪ್ರಕಟಿಸಲಾಗಿದೆ.

ನವೆಂಬರ್‌ನಲ್ಲಿ ನಡೆಯಲಿದೆ ಟೂರ್ನಿ

ನವೆಂಬರ್‌ನಲ್ಲಿ ನಡೆಯಲಿದೆ ಟೂರ್ನಿ

ಈ ಟಿ10 ಕ್ರಿಕೆಟ್ ಟೂರ್ನಿ ನವೆಂಬರ್ ತಿಂಗಳಿನಲ್ಲಿ ನಡೆಯಲಿದೆ. ನವೆಂಬರ್ 19 ರಿಂದ ಆರಂಭವಾಗಲಿರುವ ವಿಶಿಷ್ಟ ಕ್ರಿಕೆಟ್ ಲೀಗ್ ಅದೇ ತಿಂಗಳ 28ಕ್ಕೆ ಅಂತ್ಯವಾಗಲಿದೆ. ಒಟ್ಟು 9 ದಿನ ಈ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗುತ್ತದೆ.

ಹತ್ತು ಓವರ್‌ಗಳ ಪಂದ್ಯ

ಹತ್ತು ಓವರ್‌ಗಳ ಪಂದ್ಯ

ಬೇರೆ ಕ್ರಿಕೆಟ್ ಟೂರ್ನಿಗಳಿಗಿಂತ ದು ಭಿನ್ನ ಇದೇ ಕಾರಣಕ್ಕೆ. ಇದು ಕೇವಲ 10 ಓವರ್‌ಗಳ ಟೂರ್ನಿಯಾಗಿದೆ. ಎರಡೂ ತಂಡಗಳು ತಲಾ ಹತ್ತು ಓವರ್‌ಗಳ ಬ್ಯಾಟಿಂಗ್ ನಡೆಸಬೇಕಾಗುತ್ತದೆ. ಪ್ರತೀ ಪಂದ್ಯವೂ 90 ನಿಮಿಷಗಳಲ್ಲಿ ಫಲಿತಾಂಶವನ್ನು ಪಡೆಯುತ್ತದೆ. ಯುಎಇ ನಲ್ಲೇ ಎಲ್ಲಾ ಪಂದ್ಯಗಳೂ ನಡೆಯುತ್ತದೆ.

ದಿಗ್ಗಜ ಕ್ರಿಕೆಟಿಗರು ಟೂರ್ನಿಯಲ್ಲಿ ಭಾಗಿ

ದಿಗ್ಗಜ ಕ್ರಿಕೆಟಿಗರು ಟೂರ್ನಿಯಲ್ಲಿ ಭಾಗಿ

ಈ ಟೂರ್ನಿಯಲ್ಲಿ ದಿಗ್ಗಜ ಕ್ರಿಕೆಟಿಗರು ಭಾಗಿಯಾಗುತ್ತಾರೆ. ಭಾರತದ ಯುವರಾಜ್ ಸಿಂಗ್, ಜಹೀರ್ ಖಾನ್ ಕೂಡ ಈ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ವಿಶ್ವಕಪ್ ವಿಜೇತ ಇಂಗ್ಲೆಂಟ್ ತಂಡದ ನಾಯಕ ಇಯಾನ್ ಮಾರ್ಗನ್, ಆಸ್ಟ್ರೇಲಿಯಾದ ಕ್ರಿಸ್ ಲಿನ್, ಶೇನ್ ವಾಟ್ಸನ್, ಶ್ರೀಲಂಕಾದ ಲಸಿತ್ ಮಲಿಂಗ, ವೆಸ್ಟ್‌ ಇಂಡೀಸ್‌ನ ಡ್ವೇಯ್ನ್ ಬ್ರಾವೋ ಸೇರಿದಂತೆ ಹಲವಾರು ಹೆಸರಾಂತ ಕ್ರಿಕೆಟಿಗರು ಕಾಣಿಸಿಕೊಳ್ಳಲಿದ್ದಾರೆ.

ಯಶಸ್ಸು ಪಡೆದ ಮೊದಲ ಆವೃತ್ತಿ

ಯಶಸ್ಸು ಪಡೆದ ಮೊದಲ ಆವೃತ್ತಿ

ಕಳೆದ ವರ್ಷ ಮೊದಲ ಬಾರಿಗೆ ಈ ಟೂರ್ನಿ ಆಯೋಜನೆಯಾಗಿತ್ತು. ಅಬುದಾಬಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ, ಅದುದಾಬಿ ಕ್ರೀಡಾ ಮಂಡಳಿ ಮತ್ತು ಅಬುದಾಬಿ ಕ್ರಿಕೆಟ್ ಒಟ್ಟಾಗಿ ಈ ಟೂರ್ಇಯನ್ನು ಆಯೋಜನೆ ಮಾಡುತ್ತಿದೆ. ಶೇಖ್ ಜಾಯೇದ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ 10 ದಿನ ನಡೆದ ಟೂರ್ನಿಯನ್ನು 1,20,000 ಜನ ನೇರವಾಗಿ ವೀಕ್ಷಿಸಿದ್ದರು. ಡ್ವೇಯ್ನ್ ಬ್ರಾವೋ ನೇತೃತ್ವದ ಮರಾಠಾ ಅರೇಬಿಯನ್ಸ್ ತಂಡ ಕಳೆದ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

Story first published: Tuesday, May 5, 2020, 17:08 [IST]
Other articles published on May 5, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+