ಹರ್ಲೀನ್ ಡಿಯೋಲ್ ಅದ್ಭುತ ಕ್ಯಾಚ್‌ಗೆ ಕಿಚ್ಚ ಸುದೀಪ್ ಮೆಚ್ಚುಗೆ: ವಿಡಿಯೋ

ಬೆಂಗಳೂರು: ಭಾರತದ ಮಹಿಳಾ ಕ್ರಿಕೆಟರ್ ಹರ್ಲೀನ್ ಡಿಯೋಲ್ ಅವರ ಅದ್ಭುತ ಕ್ಯಾಚ್‌ಗೆ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20ಐ ಪಂದ್ಯದಲ್ಲಿ ಡಿಯೋಲ್ ಅವರ ಕ್ಯಾಚ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ನಾರ್ಥಾಂಪ್ಟನ್‌ನ ಕೌಂಟಿ ಗ್ರೌಂಡ್‌ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಮಹಿಳಾ ಟಿ20 ಪಂದ್ಯದಲ್ಲಿ ಹರ್ಲೀನ್ ಡಿಯೋಲ್ 18.5ನೇ ಓವರ್‌ನಲ್ಲಿ ಶಿಖಾ ಪಾಂಡೆ ಎಸೆತಕ್ಕೆ ಆಮಿ ಎಲ್ಲೆನ್ ಜೋನ್ಸ್ ಅವರ ಕ್ಯಾಚ್ ಅನ್ನು ಬೌಂಡರಿ ಲೈನ್ ಸಮೀಪ ಅಚ್ಚರಿ ರೀತಿಯಲ್ಲಿ ಪಡೆದು ಜೋನ್ಸ್ ಅವರನ್ನು 43 ರನ್‌ಗೆ ಪೆವಿಲಿಯನ್ ಕಡೆಗೆ ನಡೆಯುವಂತೆ ಮಾಡಿದ್ದರು.
ಡಿಯೋಲ್ ಕ್ಯಾಚ್ ಪಡೆದಿರುವ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿರುವ ಅಭಿನಯ ಚಕ್ರವರ್ತಿ ಸುದೀಪ್, 'ಎಪಿಕ್' ಎಂದು ಬರೆದುಕೊಂಡಿದ್ದಾರೆ. ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿರುವ ಸುದೀಪ್ ಕ್ರಿಕೆಟ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುತ್ತಾರೆ.
ಪಂದ್ಯದಲ್ಲಿ ಭಾರತೀಯ ತಂಡ ಸೋತಿದೆ. ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 177 ರನ್ ಗಳಿಸಿತ್ತು. ಭಾರತದ ಇನ್ನಿಂಗ್ಸ್ ವೇಳೆ ಮಳೆ ಸುರಿದಿದ್ದರಿಂದ ಭಾರತಕ್ಕೆ 8.4 ಓವರ್‌ಗೆ 73 ರನ್ ಗುರಿ ನೀಡಲಾಗಿತ್ತು. ಆದರೆ ಭಾರತೀಯ ಮಹಿಳೆಯರು 8.4 ಓವರ್‌ಗೆ 3 ವಿಕೆಟ್ ಕಳೆದು 54 ರನ್ ಬಾರಿಸಿ 18 ರನ್‌ನಿಂದ ಪಂದ್ಯ ಸೋತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications