ದ್ರಾವಿಡ್ ಮತ್ತು ನಾನು ಒಂದೇ ಕುಟುಂಬದವರು ಎಂದ ನಟಿ; ದ್ರಾವಿಡ್‌ಗೂ ಆ ನಟಿಗೂ ಇರುವ ನಂಟೇನು?

ಕ್ರಿಕೆಟ್ ಹಾಗೂ ಸಿನಿಮಾ ಕ್ಷೇತ್ರಗಳಿಗೆ ಈ ಹಿಂದಿನಿಂದಲೂ ನಂಟಿದೆ. ಹಲವಾರು ಕ್ರಿಕೆಟಿಗರು ಸಿನಿಮಾ ಕ್ಷೇತ್ರದಲ್ಲಿ ಬಂಧುಗಳು ಹಾಗೂ ಸ್ನೇಹಿತರನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೇ ಕೆಲ ಕ್ರಿಕೆಟಿಗರು ಹಾಗೂ ನಟಿಯರ ನಡುವೆ ಲವ್ ಗಾಸಿಪ್ ಕೂಡ ಹರಿದಾಡಿದ್ದವು.
ಇನ್ನು ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಸಿನಿಮಾ ನಟಿ ಅನುಷ್ಕಾ ಶರ್ಮಾ ಮದುವೆಯಾಗಿ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿರುವ ಉದಾಹರಣೆಯೂ ಕೂಡಾ ಕಣ್ಮುಂದಿದೆ. ಹೀಗೆ ಹುಡುಕುತ್ತಾ ಹೋದರೆ ಕ್ರಿಕೆಟಿಗರಿಗೂ ಹಾಗೂ ಸಿನಿಮಾ ಮಂದಿಗೂ ಈ ಹಿಂದಿನಿಂದಲೂ ನಂಟಿರುವ ಹಲವಾರು ಉದಾಹರಣೆಗಳು ನಮಗೆ ಕಾಣಸಿಗಲಿವೆ.
ಇದೀಗ ಹೆಮ್ಮೆಯ ಕನ್ನಡಿಗ, ಭಾರತದ ಮಾಜಿ ಕ್ರಿಕೆಟಿಗ ಹಾಗೂ ಪ್ರಸ್ತುತ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಕೆಲಸ ನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್ ಅವರಿಗೂ ಸಿನಿಮಾ ಪ್ರಪಂಚದಲ್ಲಿ ನಂಟಿರುವ ವ್ಯಕ್ತಿಯೋರ್ವರಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. ಹೆಚ್ಚಾಗಿ ಸಿನಿಮಾ ಕಡೆ ಆಸಕ್ತಿಯನ್ನು ತೋರಿಸದ ರಾಹುಲ್ ದ್ರಾವಿಡ್ ಕಳೆದ ವರ್ಷ ತಮ್ಮ ಆಪ್ತ ಗೆಳೆಯ ರಮೇಶ್ ಅರವಿಂದ್ ಅವರ ಶಿವಾಜಿ ಸುರತ್ಕಲ್ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದರು.
ಇದನ್ನು ಹೊರತುಪಡಿಸಿದರೆ ರಾಹುಲ್ ದ್ರಾವಿಡ್ ಅವರಿಗೂ ನಟನಾ ಜಗತ್ತಿಗೂ ಸಂಬಂಧಿಸಿದಂತಹ ಯಾವುದೇ ರೀತಿಯ ಹೆಚ್ಚಿನ ಸುದ್ದಿಗಳು ಹೊರ ಬಂದಿರಲಿಲ್ಲ. ಆದರೆ ಇದೀಗ ಈ ವರ್ಷ ರಾಹುಲ್ ದ್ರಾವಿಡ್ ಹುಟ್ಟುಹಬ್ಬದ ದಿನ ನಟಿಯೋರ್ವಳು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಿರುವ ಪೋಸ್ಟ್ ನೆಟ್ಟಿಗರನ್ನು ಕುತೂಹಲಕ್ಕೆ ಒಳಗಾಗುವಂತೆ ಮಾಡಿದೆ. ಜನವರಿ 11ರಂದು ರಾಹುಲ್ ದ್ರಾವಿಡ್ ಅವರ ಜನ್ಮದಿನವಿತ್ತು, ಈ ವಿಶೇಷ ದಿನದಂದು ಹಲವಾರು ಕ್ರಿಕೆಟಿಗರು ಹಾಗೂ ಸಿನಿ ತಾರೆಯರು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಅದರಂತೆ ಅದಿತಿ ವಿನಾಯಕ್ ದ್ರಾವಿಡ್ ಕೂಡಾ ರಾಹುಲ್ ದ್ರಾವಿಡ್ ಅವರಿಗೆ ಜನ್ಮದಿನದ ಶುಭಾಶಯವನ್ನು ಕೋರಿ ಪೋಸ್ಟ್ ಮಾಡಿದ್ದರು. ಅಷ್ಟಕ್ಕೂ ಅದಿತಿ ವಿನಾಯಕ್ ದ್ರಾವಿಡ್ ಯಾರು ಮತ್ತು ರಾಹುಲ್ ದ್ರಾವಿಡ್ ಅವರಿಗೂ, ಆಕೆಗೂ ಇರುವ ನಂಟೇನು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ದ್ರಾವಿಡ್ ಮತ್ತು ನಾನು ಒಂದೇ ಕುಟುಂಬಕ್ಕೆ ಸೇರಿದವರು ಎನ್ನಲು ಹೆಮ್ಮೆ ಇದೆ: ಅದಿತಿ
ರಾಹುಲ್ ದ್ರಾವಿಡ್ ಅವರ ಜನ್ಮದಿನದಂದು ಇನ್ ಸ್ಟಾಗ್ರಾಂ ಖಾತೆಯಲ್ಲಿ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿರುವ ಅದಿತಿ ವಿನಾಯಕ್ ದ್ರಾವಿಡ್ ನಾನು ದ್ರಾವಿಡ್ ಒಂದೇ ಕುಟುಂಬಕ್ಕೆ ಸೇರಿದವರು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ, ದ್ರಾವಿಡ್ ಎಂಬ ಉಪನಾಮದ ಬಗ್ಗೆ ನನಗೆ ಅಪಾರವಾದ ಪ್ರೀತಿ ಇದೆ ಹಾಗೂ ಅದನ್ನು ನಾನು ಎಂದಿಗೂ ಕೂಡ ಬದಲಾಯಿಸುವುದಿಲ್ಲ' ಎಂದು ಬರೆದುಕೊಂಡಿದ್ದಾಳೆ.

ಅದಿತಿಗೂ, ದ್ರಾವಿಡ್‌ಗೂ ಇರುವ ನಂಟೇನು?
ನಟಿ ಅದಿತಿ ವಿನಾಯಕ್ ದ್ರಾವಿಡ್ ರಾಹುಲ್ ದ್ರಾವಿಡ್ ಅವರಿಗೆ ಸೋದರಿಯ ಮಗಳಾಗಬೇಕು. ಆದರೆ ಅದಿತಿ ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಮಹಾರಾಷ್ಟ್ರದಲ್ಲಿ. ವಿದ್ಯಾಭ್ಯಾಸವನ್ನು ಕೂಡಾ ಮಹಾರಾಷ್ಟ್ರದಲ್ಲಿಯೇ ಮುಗಿಸಿರುವ ಅದಿತಿ ವಿನಾಯಕ್ ದ್ರಾವಿಡ್ ಸದ್ಯ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿ ಜನಮನ್ನಣೆ ಗಳಿಸಿದ್ದಾಳೆ.

ನಟನೆ ಜೊತೆ ಸಾಹಿತ್ಯದಲ್ಲಿಯೂ ಅದಿತಿಗಿದೆ ಆಸಕ್ತಿ
ಮರಾಠಿ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿರುವ ಅದಿತಿ ವಿನಾಯಕ್ ದ್ರಾವಿಡ್ ಸದ್ಯ ಜನಪ್ರಿಯ ಶೋ ಆದ ಸುಂದರ ಮನ ಮಧ್ಯ ಭಾರ್ತಿಯಲ್ಲಿ ನಂದಿನಿ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ. ನಟನೆಯ ಜತೆಗೆ ಚಿತ್ರಸಾಹಿತ್ಯದಲ್ಲಿಯೂ ಆಸಕ್ತಿಯನ್ನು ಹೊಂದಿರುವ ಅದಿತಿ ವಿನಾಯಕ್ ದ್ರಾವಿಡ್ ತನ್ನ ಆಲ್ಬಮ್ ಜಿಲ್ಮಿಲ್‌ಗೆ ಹಾಡನ್ನೂ ಬರೆದಿದ್ದಾಳೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications