Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Adam Gilchrist: ಎಂಎಸ್ ಧೋನಿ ನಿವೃತ್ತಿ ಹೊಂದಲು ಮಾಜಿ ದಿಗ್ಗಜ ವಿಕೆಟ್‌ಕೀಪರ್ ಮನವಿ

ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳಪೆ ಪ್ರದರ್ಶನದಿಂದಾಗಿ ಹಲವು ಟೀಕೆಗಳನ್ನು ಎದುರಿಸುವಂತಾಗಿದೆ. ಚೆನ್ನೈ ತಂಡದಿಂದ ಅಭಿಮಾನಿಗಳು ನಿರೀಕ್ಷಿಸಿದಂತೆ ಐಪಿಎಲ್ 18ನೇ ಸೀಸನ್‌ನಲ್ಲಿ ಇಲ್ಲಿವರೆಗೂ ಉತ್ತಮ ಪ್ರದರ್ಶನ ಬಂದಿಲ್ಲ. ನಿಯಮಿತ ನಾಯಕ ರುತುರಾಜ್ ಗಾಯಕ್ವಾಡ್ ಗಾಯಗೊಂಡ ನಂತರ, ಎಂಎಸ್ ಧೋನಿ ಮತ್ತೊಮ್ಮೆ ಐಪಿಎಲ್‌ನಲ್ಲಿ ನಾಯಕತ್ವ ವಹಿಸಿಕೊಂಡಿದ್ದಾರೆ. ಎಂಎಸ್ ಧೋನಿ ನಾಯಕತ್ವದಲ್ಲಿಯೂ ಚೆನ್ನೈ ತಂಡ ಗೆಲುವಿನ ಲಯ ಕಂಡುಕೊಂಡಿಲ್ಲ.

ಐಪಿಎಲ್ 2025 ರಲ್ಲಿ ಚೆನ್ನೈ ತಂಡ ಸತತ ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಚೆನ್ನೈ ಆಡಿರುವ 9 ಪಂದ್ಯಗಳಲ್ಲಿ ಏಳರಲ್ಲಿ ಸೋಲನ್ನು ಎದುರಿಸಿದ್ದು, ಕೇವಲ 4 ಅಂಕಗಳನ್ನು ಹೊಂದಿದೆ. ಇಂತಹ ಸಂದರ್ಭದಲ್ಲಿ 43 ವರ್ಷದ ಧೋನಿ ಅವರಿಗೆ ಐಪಿಎಲ್‌ನಿಂದ ನಿವೃತ್ತಿ ತೆಗೆದುಕೊಳ್ಳುವಂತೆ ಎಲ್ಲೆಡೆಯಿಂದ ನಿರಂತರವಾಗಿ ಸಲಹೆ ಬರುತ್ತಿವೆ. ಆದರೆ ಅವರು ಇನ್ನೂ ಚೆನ್ನೈ ತಂಡದಲ್ಲಿದ್ದಾರೆ. ಈಗ ಧೋನಿ ಅವರಿಗೆ ವಿಶ್ವದ ದಿಗ್ಗಜ ವಿಕೆಟ್ ಕೀಪರ್ ಆಡಮ್ ಗಿಲ್‌ಕ್ರಿಸ್ಟ್ ನಿವೃತ್ತಿ ಹೊಂದಲು ಕೇಳಿಕೊಂಡಿದ್ದಾರೆ.

Adam Gilchrist requests MS Dhoni to retire from IPL

ಗಿಲ್‌ಕ್ರಿಸ್ಟ್ ಹೇಳಿದ್ದೇನು?

ಸಂದರ್ಶನವೊಂದರಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ಆಡಮ್ ಗಿಲ್‌ಕ್ರಿಸ್ಟ್ ಅವರು ಧೋನಿ ಐಪಿಎಲ್ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. ಐಪಿಎಲ್ 2025 ರ ನಂತರ ಧೋನಿ ನಿವೃತ್ತಿ ಹೊಂದಬೇಕು ಎಂದು ಹೇಳಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಸಿಎಸ್‌ಕೆ ಪಂದ್ಯಕ್ಕೂ ಮುನ್ನ ಮಾತನಾಡಿದ ಗಿಲ್‌ಕ್ರಿಸ್ಟ್, ಧೋನಿ ಐಪಿಎಲ್ ಮತ್ತು ವಿಶ್ವ ಕ್ರಿಕೆಟ್‌ನ ಐಕಾನ್. ಅವರು ಇನ್ನು ಮುಂದೆ ಆಟದಲ್ಲಿ ಯಾರಿಗೂ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ. ಅವರಿಗೆ ಏನು ಮಾಡಬೇಕೆಂದು ತಿಳಿದಿರಬಹುದು, ಆದರೆ ಭವಿಷ್ಯಕ್ಕಾಗಿ ಅವರು ಮುಂದಿನ ವರ್ಷ ಐಪಿಎಲ್‌ನಲ್ಲಿ ಇರಬೇಕಾಗಿಲ್ಲ. ನಾನು ಅವರನ್ನು ಪ್ರೀತಿಸುತ್ತೇನೆ. ಎಂಎಸ್ ನೀವು ಒಬ್ಬ ಚಾಂಪಿಯನ್ ಮತ್ತು ಐಕಾನ್ ಎಂದು ತಿಳಿಸಿದ್ದಾರೆ.

ನಿವೃತ್ತಿ ಬಗ್ಗೆ ಧೋನಿ ಪ್ರತಿಕ್ರಿಯೆ

ಐಪಿಎಲ್ 2025 ರ ಆರಂಭಕ್ಕೂ ಮುನ್ನ, ಎಂಎಸ್ ಧೋನಿ ಕಾರ್ಯಕ್ರಮವೊಂದರಲ್ಲಿ ತಮ್ಮ ಕ್ರಿಕೆಟ್‌ನ ಕೊನೆಯ ಕೆಲವು ವರ್ಷಗಳನ್ನು ಆನಂದಿಸಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದರು. "ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2019 ರಿಂದ ನಿವೃತ್ತಿ ಹೊಂದಿದ್ದೇನೆ. ಆದ್ದರಿಂದ ಐಪಿಎಲ್‌ನಿಂದ ನಿವೃತ್ತಿ ಘೋಷಣೆ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಈ ಮಧ್ಯೆ ನಾನು ಕೆಲವು ವರ್ಷಗಳ ಕ್ರಿಕೆಟ್ ಅನ್ನು ಆನಂದಿಸಲು ಬಯಸಿದ್ದೇನೆ. ಹೀಗಾಗಿ ಎಷ್ಟು ವರ್ಷಗಳ ಕಾಲ ನಾನು ಆಡಲು ಸಾಧ್ಯವಾಗುತ್ತದೆಯೋ ಅಷ್ಟು ವರ್ಷಗಳವರೆಗೆ ಆಡುತ್ತೇನೆ ಎಂದು ಹೇಳಿದ್ದರು.

Story first published: Wednesday, April 30, 2025, 17:20 [IST]
Other articles published on Apr 30, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+