ರನ್ ಔಟ್ ಮಾಡಿ ಪಾಕ್ ಬ್ಯಾಟ್ಸ್ಮನ್ ದಂಗುಬಡಿಸಿದ ಆದಿಲ್ ರಶೀದ್-ವಿಡಿಯೋ

ಲೀಡ್ಸ್, ಮೇ 20: ಪಾಕಿಸ್ತಾನದ ಇಂಗ್ಲೆಂಡ್ ಪ್ರವಾಸ ಸರಣಿಯ ಅಂತಿಮ ಏಕದಿನ (ಮೇ 19) ಪಂದ್ಯದಲ್ಲಿ ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್ 54 ರನ್‌ಗೆ ಬರೋಬ್ಬರಿ 5 ವಿಕೆಟ್ ಉರುಳಿಸಿ ಇಂಗ್ಲೆಂಡ್ ಗೆಲುವಿನ ರುವಾರಿ ಅನ್ನಿಸಿದ್ದರು. ಆದರೆ ಇಂಗ್ಲೆಂಡ್ ಮತ್ತೊಬ್ಬ ಆಟಗಾರ ಆದಿಲ್ ರಶೀದ್ ಕೂಡ ಅದ್ಭುತ ರನ್ ಔಟ್‌ಗಾಗಿ ಪಂದ್ಯದ ವೇಳೆ ಗಮನ ಸೆಳೆದರು.
ಪಾಕಿಸ್ತಾನ ಇನ್ನಿಂಗ್ಸ್‌ನ 27ನೇ ಓವರ್‌ನಲ್ಲಿ ಬಾಬರ್ ಅಝಮ್ ಅವರನ್ನು ಆದಿಲ್ ರಶೀದ್ ಅಪರೂಪ ರೀತಿಯಲ್ಲಿ ರನ್ ಔಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಜೋಸ್ ಬಟ್ಲರ್ ಮತ್ತು ರಶೀದ್ ಅದ್ಭುತ ಪೀಲ್ಡಿಂಗ್‌ಗೆ ಬಲಿಯಾದ ಬಾಬರ್ 80 ರನ್ನಿಗೆ ನಿರ್ಗಮಿಸುವಂತಾಯ್ತು.
ಇದು ನಡೆದಿದ್ದು 26.2ನೇ ಓವರ್‌ನಲ್ಲಿ. ರಶೀದ್ ಚೆಂಡು ಎಸೆಯುವಾಗ ಸ್ಟ್ರೈಕ್‌ನಲ್ಲಿ ಸರ್ಫರಾಝ್ ಅಹ್ಮದ್ ಇದ್ದರು. ಅಹ್ಮದ್ ಬ್ಯಾಟ್ ತಾಗಿದ ಚೆಂಡು ಶಾರ್ಟ್ ಸ್ಕ್ವೇರ್ ಲೆಗ್‌ನತ್ತ ಚಿಮ್ಮಿತು. ಬಾಬರ್ ರನ್‌ಗೆ ಯತ್ನಿಸಿದರು. ಆಗ ವಿಕೆಟ್ ಕೀಪರ್ ಜೋಸ್ ಬಟ್ಲರ್ ಚೆಂಡು ಎತ್ತಿಕೊಂಡವರೇ ರಶೀದ್ ಅವರತ್ತ ಎಸೆದರು. ಚೆಂಡು ಕೈಗೆ ಬರುತ್ತಲೇ ರಶೀದ್, ವಿಕೆಟ್ ದಿಟ್ಟಿಸದೆಯೇ ವಿಕೆಟ್‌ನತ್ತ ಎಸೆದಿದ್ದರಾದರೂ ಚೆಂಡು ವಿಕೆಟ್‌ಗೆ ತಗುಲಿತ್ತು.
ಪಂದ್ಯವನ್ನು ಇಂಗ್ಲೆಂಡ್ 54 ರನ್‌ಗಳಿಂದ ಗೆದ್ದುಕೊಳ್ಳುವುದರೊಂದಿಗೆ ಐದು ಪಂದ್ಯಗಳ ಏಕದಿನ ಸರಣಿಯನ್ನು 4-0ಯಿಂದ ಜಯಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 351 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಪಾಕ್, 297 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications