AFG vs ENG: ಇಂಗ್ಲೆಂಡ್ ವಿರುದ್ಧದ ಐತಿಹಾಸಿಕ ಗೆಲುವನ್ನು ಭೂಕಂಪ ಪೀಡಿತ ಅಫ್ಘಾನಿಸ್ತಾನ ಜನರಿಗೆ ಅರ್ಪಿಸಿದ ಮುಜೀಬ್
ಭಾನುವಾರ, ಅಕ್ಟೋಬರ್ 15ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 13ನೇ ಪಂದ್ಯದಲ್ಲಿ ಕ್ರಿಕೆಟ್ ಜನಕ ಹಾಗೂ ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ ತಂಡ 69 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಈ ಐತಿಹಾಸಿಕ ಗೆಲುವನ್ನು ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದ ಸಂತ್ರಸ್ತರಿಗೆ ಅಫ್ಘಾನಿಸ್ತಾನದ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಮುಜೀಬ್-ಉರ್-ರೆಹಮಾನ್ ಅವರು ತಮ್ಮ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಅರ್ಪಿಸಿದರು.

ಪಂದ್ಯದ ನಂತರ ಮಾತನಾಡಿದ ಮುಜೀಬ್-ಉರ್-ರೆಹಮಾನ್, ಅಫ್ಘಾನಿಸ್ತಾನದ ಭೂಕಂಪ ಸಂತ್ರಸ್ತರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಅರ್ಪಿಸಿದ ವೇಳೆ, ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ತಂಡವನ್ನು ಸೋಲಿಸಿರುವುದು ಹೆಮ್ಮೆಯ ಭಾವನೆಯಾಗಿದೆ ಎಂದರು.
ಮುಜೀಬ್-ಉರ್-ರೆಹಮಾನ್ ಬ್ಯಾಟಿಂಗ್‌ನಲ್ಲಿ 28 ರನ್ ಗಳಿಸಿದ್ದಲ್ಲದೆ, ಇಂಗ್ಲೆಂಡ್ ತಂಡದ ನಿರ್ಣಾಯಕ ಮೂರು ವಿಕೆಟ್ ಪಡೆಯುವ ಮೂಲಕ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ತಮ್ಮ ತಂಡ ಕೇವಲ ಎರಡನೇ ಗೆಲುವು ಸಾಧಿಸಲು ನೆರವಾದರು.
"ವಿಶ್ವಕಪ್‌ನಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿರುವುದು ಮತ್ತು ಹಾಲಿ ಚಾಂಪಿಯನ್‌ಗಳನ್ನು ಸೋಲಿಸಿರುವುದು ಹೆಮ್ಮೆಯ ಭಾವನೆ. ಈ ರೀತಿಯ ಅವಕಾಶಕ್ಕಾಗಿ ನಾವು ಶ್ರಮಿಸಿದ್ದೇವೆ ಮತ್ತು ಆಟಗಾರರ ಬಗ್ಗೆ ನಿಜವಾಗಿಯೂ ಹೆಮ್ಮೆಪಡುತ್ತೇವೆ. ನಾನು ಈ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ನನ್ನ ದೇಶದ ಭೂಕಂಪ ಸಂತ್ರಸ್ತರಿಗೆ ಅರ್ಪಿಸಲು ಬಯಸುತ್ತೇನೆ," ಎಂದು ಮುಜೀಬ್-ಉರ್-ರೆಹಮಾನ್ ಹೇಳಿದರು.

ಎರಡನೇ ಇನ್ನಿಂಗ್ಸ್ ವೇಳೆ ಇಬ್ಬನಿ ಬೀಳುವುದು ತಮಗೆ ತಿಳಿದಿತ್ತು. ಆದರೆ ಅವರ ಲೈನ್ ಅಂಡ್ ಲೆಂಗ್ತ್‌ಗಳೊಂದಿಗೆ ಸ್ಥಿರವಾಗಿರಲು ಪ್ರಯತ್ನಿಸಿದೆವು ಎಂದು ಮುಜೀಬ್-ಉರ್-ರೆಹಮಾನ್ ತಿಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅಫ್ಘಾನಿಸ್ತಾನ 284 ರನ್ ಗಳಿಸಿದ ನಂತರ, ಇಂಗ್ಲೆಂಡ್ ತಂಡವನ್ನು 215 ರನ್‌ಗಳಿಗೆ ಆಲೌಟ್ ಮಾಡಿತು.
"ಒಬ್ಬ ಸ್ಪಿನ್ನರ್ ಆಗಿ, ಕೇವಲ ಇಬ್ಬರು ಫೀಲ್ಡರ್‌ಗಳನ್ನು ಬೌಂಡರಿ ಗೆರೆ ಬಳಿ ನಿಲ್ಲಿಸುವ ಮೂಲಕ ಪವರ್‌ಪ್ಲೇನಲ್ಲಿ ಬೌಲಿಂಗ್ ಮಾಡುವುದು ಯಾವಾಗಲೂ ಕಷ್ಟ. ಆದರೆ ನಾನು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ ಮತ್ತು ನನ್ನ ಲೈನ್ ಮತ್ತು ಲೆಂಗ್ತ್‌ಗಳೊಂದಿಗೆ ಸ್ಥಿರವಾಗಿರಲು ಪ್ರಯತ್ನಿಸುತ್ತಿದ್ದೇನೆ," ಎಂದರು.
"ನಾನು ಸ್ಟಂಪ್‌ಗಳ ಮೇಲೆ ಬೌಲಿಂಗ್ ಮಾಡಲು ಪ್ರಯತ್ನಿಸುತ್ತೇನೆ. ಎರಡನೇ ಇನ್ನಿಂಗ್ಸ್ ವೇಳೆ ಇಬ್ಬನಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಮಗೆ ತಿಳಿದಿತ್ತು. ವಿಕೆಟ್ ಉತ್ತಮವಾಗಿತ್ತು ಮತ್ತು ಚೆಂಡು ಮೇಲ್ಮೈಯಲ್ಲಿ ಸ್ವಲ್ಪ ಹಿಡಿದಿತ್ತು. ಇಬ್ಬನಿ ಇದ್ದರೂ ಸರಿಯಾದ ಪ್ರದೇಶಗಳಲ್ಲಿ ಹೊಡೆಯುವ ಮನಸ್ಸು ಇತ್ತು," ಎಂದು ಮುಜೀಬ್-ಉರ್-ರೆಹಮಾನ್ ವಿವರಿಸಿದರು.
ತಮ್ಮ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾತನಾಡಿದ ಮುಜೀಬ್-ಉರ್-ರೆಹಮಾನ್, ತಂಡದ ಮ್ಯಾನೇಜ್‌ಮೆಂಟ್ ನೆಟ್ಸ್‌ನಲ್ಲಿ ಆತ್ಮವಿಶ್ವಾಸವನ್ನು ನೀಡುತ್ತದೆ ಮತ್ತು ಪಂದ್ಯಗಳಲ್ಲಿ ಪ್ರದರ್ಶನ ನೀಡಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಇಂಗ್ಲೆಂಡ್ ವಿರುದ್ಧ ಮುಜೀಬ್-ಉರ್-ರೆಹಮಾನ್ 16 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಮೇತ 28 ರನ್ ಗಳಿಸಿದರು.
ನಾನು ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಚೆಂಡನ್ನು ಬಾರಿಸಲು ಪ್ರಯತ್ನಿಸುತ್ತೇನೆ ಮತ್ತು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ನಾನು ಕೊಡುಗೆ ನೀಡಲು ಬಯಸುತ್ತೇನೆ. ಆ 20-25 ರನ್‌ಗಳು ನಿರ್ಣಾಯಕ ಎಂದು ಸಾಬೀತುಪಡಿಸುತ್ತದೆ ಎಂದು ಹೇಳಿದರು.
ಇಂಗ್ಲೆಂಡ್ ವಿರುದ್ಧದ ಗೆಲುವಿನ ನಂತರ, ಅಫ್ಘಾನಿಸ್ತಾನ ತಂಡವು ಉತ್ತಮ ನೆಟ್ ರನ್-ರೇಟ್ ಆಧಾರದ ಮೇಲೆ ಆಸ್ಟ್ರೇಲಿಯಾ, ಶ್ರೀಲಂಕಾ ತಂಡಗಳಿಗಿಂತ ಮೇಲೆ 2023ರ ವಿಶ್ವಕಪ್ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಏರಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications