IPL 2025: ಹರಾಜಿಗೂ ಮುನ್ನ ಅಮೋಘ ಪ್ರದರ್ಶನ ನೀಡಿದ ಅಫ್ಘಾನಿಸ್ತಾನ ಯುವ ಬೌಲರ್
ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಸದ್ಯ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರರಿಗೆ ಮಣೆ ಹಾಕಲಾಗುತ್ತದೆ. ಅಫ್ಘಾನಿಸ್ತಾನ ಪ್ಲೇಯರ್ ಒಬ್ಬರು ಅಮೋಘ ಪ್ರದರ್ಶನ ನೀಡಿದ್ದು, ಎಲ್ಲ ಮಾಲೀಕರ ಚಿತ್ತ ಕದ್ದಿದ್ದಾರೆ. ಶಾರ್ಜಾದಲ್ಲಿ ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳ ನಡುವಣ ಮೊದಲ ಏಕದಿನ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಅಬ್ಬರದ ಬೌಲಿಂಗ್ ಪ್ರದರ್ಶನ ನೀಡಿದ ಆಫ್ಘನ್ ಬೌಲರ್ ಮಿಂಚಿದರು.
ಈ ಪಂದ್ಯದಲ್ಲಿ ಆಫ್ಘನ್ ಮೊದಲು ಬ್ಯಾಟ್ ಮಾಡಿ 49.4 ಓವರ್‌ಗಳಲ್ಲಿ 235 ರನ್ ಸಿಡಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬಾಂಗ್ಲಾದೇಶ 34.3 ಓವರ್‌ಗಳಲ್ಲಿ 143 ರನ್‌ಗಳಿಗೆ ಸರ್ವಪತನ ಕಂಡಿತು. ಮೂರು ಸರಣಿಯ ಪಂದ್ಯದಲ್ಲಿ ಅಫ್ಘಾನಿಸ್ತಾನ 1-0 ಮುನ್ನಡೆ ಸಾಧಿಸಿದೆ.

ನಬಿ, ಹಶ್ಮತುಲ್ಲಾ ಉತ್ತಮ ಜೊತೆಯಾಟ
ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 35 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಇದೇ ವೇಳೆ ಸಮಯೋಚಿತ ಬ್ಯಾಟಿಂಗ್ ಮಾಡಿದ ನಾಯಕ ಹಶ್ಮತುಲ್ಲಾ ಶಾಹಿದಿ ಮತ್ತು ಅನುಭವಿ ಆಲ್‌ರೌಂಡರ್ ಮೊಹಮ್ಮದ್ ನಬಿ ತಂಡಕ್ಕೆ ಶತಕದ ಜೊತೆಯಾಟದ ಕಾಣಿಕೆಯನ್ನು ನೀಡಿದರು. ಹಶ್ಮತುಲ್ಲಾ ಶಾಹಿದಿ 52 ರನ್ ಸಿಡಿಸಿದರೆ, ನಬಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 82 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
6 ವಿಕೆಟ್ ಪಡೆದು ಬೀಗಿದ ಸ್ಪಿನ್ ಬೌಲರ್
ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಉತ್ತಮವಾಗಿ ಬ್ಯಾಟಿಂಗ್ ಮಾಡಿತು. ಈ ವೇಳೆ 26 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 120 ರನ್ ಗಳಿಸಿ ಗೆಲುವಿನ ಕನಸು ಕಾಣುತ್ತಿತ್ತು. ಆದರೆ ಬಳಿಕ ಬೌಲ್ ಮಾಡಿದ ಅಫ್ಘಾನಿಸ್ತಾನ್ ಬೌಲರ್ ಅಮೋಘ ದಾಳಿಯನ್ನು ಸಂಘಟಿಸಿ ಬಾಂಗ್ಲಾ ಬ್ಯಾಟರ್‌ಗಳನ್ನು ಕಾಡಿದರು. ಈ ಮೂಲಕ ಅಲ್ಲಾ ಮೊಹಮ್ಮದ್ ಘಜನ್ಫರ್ ಗೆಲುವಿನ ಹಿರೋ ಆದರು. ಇವರು ಕೇವಲ 6.3 ಓವರ್‌ಗಳಲ್ಲಿ 26 ರನ್ ನೀಡಿ 6 ವಿಕೆಟ್ ಪಡೆದರು. ಇದರೊಂದಿಗೆ 18 ವರ್ಷದ ಅಫ್ಘಾನ್ ಸ್ಪಿನ್ನರ್ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲಾ ಘಜನ್‌ಫರ್ ಏಕದಿನ ಕ್ರಿಕೆಟ್‌ನಲ್ಲಿ 6 ವಿಕೆಟ್ ಪಡೆದ ಮೂರನೇ ಕಿರಿಯ ಬೌಲರ್ ಎನಿಸಿಕೊಂಡಿದ್ದಾರೆ.

ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ ತಂಡದ ಪರ ನಾಯಕ ನಜ್ಮಲ್ ಹುಸೇನ್ ಶಾಂಟೋ 47, ಸೌಮ್ಯಾ ಸರ್ಕಾರ 33, ಮೆಹದಿ ಹಸನ್ ಮಿರ್ಜಾ 28, ಕೊಂಚ ಅಫ್ಘಾನಿಸ್ತಾನ್ ಬೌಲರ್‌ಗಳ ಸವಾಲು ಮೆಟ್ಟಿನಿಂತರು. ಬಾಂಗ್ಲಾ ಪರ ಎರಡನೇ ವಿಕೆಟ್‌ಗೆ 53 ರನ್‌ಗಳ ಜೊತೆಯಾಟ ಬಂದಿದ್ದು ಬಿಟ್ಟರೆ ಉಳಿದಂತೆ ದೊಡ್ಡ ಜೊತೆಯಾಟಗಳು ಬಾರಲಿಲ್ಲ.
ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಹರಾಜು ನಡೆಯಲಿದ್ದು, ಹಲವು ತಂಡಗಳು ಉತ್ತಮ ಸ್ಪಿನ್ ಬೌಲರ್ ಹುಡುಕಾಟದಲ್ಲಿವೆ. ಈ ವೇಳೆ ಅಫ್ಘಾನಿಸ್ತಾನ ಬೌಲರ್ ನೀಡಿರುವ ಪ್ರದರ್ಶನ ಹಲವು ಮಾಲೀಕರ ಚಿತ್ತ ಕದ್ದಿದೆ. ಐಪಿಎಲ್‌ನಲ್ಲಿ ಸ್ಪಿನ್ ಬೌಲರ್‌ಗಳಿಗೂ ಬೇಡಿಕೆ ಹೆಚ್ಚಿರುತ್ತದೆ. ಈ ವೇಳೆ ಈ ಅಫ್ಘಾನಿಸ್ತಾನದ ಯುವ ಆಟಗಾರನ ಮೇಲೆ ಮಾಲೀಕರು ಬಾಜಿ ಕಟ್ಟ ಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications