Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಫ್ಘಾನಿಸ್ತಾನ ಪ್ಲೇಯರ್‌ಗೆ ಬಿಗ್ ಆಫರ್ ನೀಡಿದ್ದ ಭಾರತ; ಏನದು?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಸದ್ಯ ಭಾರತದಲ್ಲಿ ನಡೆಯುತ್ತಿದೆ. ಈ ವೇಳೆ ಹಲವು ವಿದೇಶಿ ಆಟಗಾರರು ಈ ಲೀಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಅಫ್ಘಾನಿಸ್ತಾನ ತಂಡದ ಆಟಗಾರರು ಸಹ ಈ ಲೀಗ್‌ನಲ್ಲಿ ಆಡುತ್ತಿದ್ದಾರೆ. ಈ ಆಟಗಾರರ ಪಟ್ಟಿಯಲ್ಲಿ ಸ್ಪಿನ್ ಬೌಲರ್ ರಶೀದ್ ಖಾನ್‌ ಅವರಿಗೆ ಅಗ್ರ ಸ್ಥಾನ. ಈಗ ಇವರಿಗೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೊರ ಬಿದ್ದಿದೆ.

ರಶೀದ್ ಖಾನ್‌ ಅವರಿಗೆ ಸಂಬಂಧಿಸಿದಂತೆ ದೊಡ್ಡ ಸತ್ಯ ಬಹಿರಂಗವಾಗಿದೆ. ಇವರಿಗೆ ಭಾರತ ಹಾಗೂ ಆಸ್ಟ್ರೇಲಿಯಾ ದೇಶಗಳು ಪೌರತ್ವ ನೀಡಲು ಮುಂದಾಗಿದ್ದವು. ಆದರೆ ರಶೀದ್ ಖಾನ್‌ ತಮ್ಮ ತಾಯ್ನಾಡಿನ ಮೂಲಕವೇ ಕ್ರಿಕೆಟ್ ಆಡಲು ಇಚ್ಛಿಸಿದ್ದರು.

Rashid Khan

ಲೆಗ್ ಸ್ಪಿನ್ ಬೌಲರ್ ರಶೀದ್ ಖಾನ್ ಅವರ ಫ್ರಮ್ ಸ್ಟ್ರೀಟ್ಸ್ ಟು ಸ್ಟಾರ್‌ಡಮ್ ಪುಸ್ತಕದಲ್ಲಿ ಬಹಿರಂಗ ಪಡಿಸಲಾಗಿದೆ. 2023ರ ಐಪಿಎಲ್‌ ಆವೃತ್ತಿಯ ವೇಳೆ ಭಾರತೀಯ ಕ್ರಿಕೆಟ್‌ಗೆ ಸಂಬಂಧಿಸಿದಂತೆ ದೊಡ್ಡ ವ್ಯಕ್ತಿ ಭಾರತದ ಪೌರತ್ವ ನೀಡುವ ಬಗ್ಗೆ ಆಫರ್ ನೀಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

"ನಾನು ಆ ವ್ಯಕ್ತಿಯನ್ನು ಕಂಡು ನಮಸ್ಕರಿಸಿ, ಮಾತನಾಡಲು ಆರಂಭಿಸಿದೆ. ಆ ಬಳಿಕ ನನಗೆ ಭೇಟಿ ಆದವರು, ನಿಮ್ಮ ದೇಶದಲ್ಲಿ (ಅಫ್ಘಾನಿಸ್ತಾನ) ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ನೀವು ನಮ್ಮ ದೇಶಕ್ಕೆ ಬರುವುದಾದರೆ, ಅಗತ್ಯ ದಾಖಲೆಗಳನ್ನು ಮಾಡಿಸಿ, ಭಾರತದ ಪರ ಕ್ರಿಕೆಟ್‌ ಆಡಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು. ಅವರು ಹೇಳಿದ್ದನ್ನು ಕೇಳಿ ನಾನು ಏನು ಹೇಳಬೇಕು ಎಂದೇ ತೋಚಲಿಲ್ಲ. ನಾನು ನಗುತ್ತಾ ನಿಮ್ಮ ಆಫರ್‌ಗೆ ಧನ್ಯವಾದಗಳು. ನಾನು ನನ್ನ ದೇಶದ ಪರವೇ ಆಡುತ್ತೇನೆ ಎಂದು ಬಹಿರಂಗ ಪಡಿಸಿದ್ದಾರೆ.

ರಶೀದ್ ಖಾನ್ ಅವರು ಭಾರತದಿಂದ ಮಾತ್ರವಲ್ಲದೆ ಆಸ್ಟ್ರೇಲಿಯಾದಿಂದಲೂ ಪೌರತ್ವ ಆಫರ್‌ ಸಹ ಪಡೆದಿದ್ದಾರೆ ಎಂದು ಬಹಿರಂಗಪಡಿಸಿದರು. 27 ವರ್ಷದ ಆಟಗಾರ ಕೋಟ್ಯಂತರ ಮೌಲ್ಯದ ಕೊಡುಗೆಗಳು ಮತ್ತು ಸುರಕ್ಷಿತ ಭವಿಷ್ಯಕ್ಕಿಂತ ತನ್ನ ದೇಶ ತನಗೆ ಮುಖ್ಯ ಎಂದು ತಿಳಿಸಿದ್ದಾರೆ.

ಈ ದೇಶ ನನ್ನ ಹೃದಯಕ್ಕೆ ತುಂಬ ಹತ್ತಿರ

ರಶೀದ್ ಖಾನ್‌ ಅವರಿಗೆ ಭಾರತದಲ್ಲಿ ಅಪಾರ ಪ್ರೀತಿ ಲಭಿಸಿದೆ. ಅವರು ಈ ಪುಸ್ತಕದಲ್ಲಿ 2018ರಲ್ಲಿ ನಡೆದ ಘಟನೆಯನ್ನು ವಿವರಿಸಿದ್ದರೆ. ಇವರು ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾಗ, ಕೆಕೆಆರ್‌ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಬಳಿಕ ಇವರಿಗೆ ಭಾರತೀಯ ಪೌರತ್ವ ನೀಡಿ" ಎಂಬಂತಹ ಘೋಷಣೆಗಳು ಕೇಳಿ ಬಂದಿದ್ದವು. ಅಲ್ಲದೆ ಆಗ ಈ ವಿಷಯ ಸಾಮಾಜಿಕ ತಾಣದಲ್ಲಿ ಸಖತ್ ಟ್ರೆಂಡ್ ಆಗಿತ್ತು. ಭಾರತದಲ್ಲಿ ತನಗೆ ಸಿಗುವ ಗೌರವ ತನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ ಎಂದಿದ್ದಾರೆ.

ರಶೀದ್ ಸಾಧನೆ

ರಶೀದ್ ಖಾನ್‌ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರೆ. ಇವರು ಆಡಿದ 141 ಪಂದ್ಯಗಳಲ್ಲಿ 164 ವಿಕೆಟ್‌ ಪಡೆದಿದ್ದಾರೆ. ಅಲ್ಲದೆ ಇವರು ಅಫ್ಘಾನಿಸ್ತಾನ ಪರ ಆಡಿದ 115 ಟಿ20 ಪಂದ್ಯಗಳಲ್ಲಿ 193 ವಿಕೆಟ್‌ ಪಡೆದಿದ್ದಾರೆ.

Story first published: Monday, April 20, 2026, 15:42 [IST]
Other articles published on Apr 20, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+