Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Emerging Asia Cup: ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡ ಅಫ್ಘಾನಿಸ್ತಾನ

2024ರ ಎಸಿಸಿ ಉದಯೋನ್ಮುಖ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದು ಅಫ್ಘಾನಿಸ್ತಾನ ಎ ಇತಿಹಾಸ ನಿರ್ಮಿಸಿದೆ. ಒಮಾನ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಅಫ್ಘಾನಿಸ್ತಾನ 7 ವಿಕೆಟ್‌ಗಳಿಂದ ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದೆ.

ಉದಯೋನ್ಮುಖ ಏಷ್ಯಾ ಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ಎ ತಂಡ ಸೆಮಿಫೈನಲ್‌ನಲ್ಲಿ ಭಾರತ ಎ ತಂಡವನ್ನು ಸೋಲಿಸುವ ಮೂಲಕ ಸಂಚಲನ ಮೂಡಿಸಿತ್ತು. ಇದೀಗ ಅಫ್ಘಾನಿಸ್ತಾನ ಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸಿ ಚೊಚ್ಚಲ ಪ್ರಶಸ್ತಿಯನ್ನು ಗೆದ್ದು ಬೀಗಿದೆ.

Afghanistan A team that won the 2024 Emerging Asia Cup title

ಬಿಗಿ ಬೌಲಿಂಗ್ ದಾಳಿ

ಟಾಸ್‌ ಗೆದ್ದು ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಶ್ರೀಲಂಕಾ ತಂಡದ ಟಾರ್ಪ್ ಆರ್ಡರ್ ಅಫ್ಘಾನಿಸ್ತಾನ ಬಿಗಿ ಬೌಲಿಂಗ್ ತತ್ತರಿಸಿತು. ಕುಸಿದ ಲಂಕಾ ಪರ ಸಹನ್ ಅರಚ್ಚಿಗೆ 47 ಎಸೆತಗಳಲ್ಲಿ 6 ಬೌಂಡರಿ ಮೂಲಕ 64 ರನ್ ಕಲೆ ಹಾಕಿ ನೆರವವಾದರು. ಅಂತಿಮವಾಗಿ ಲಂಕಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 133 ರನ್ ಗಳಿಸಿತು. ಅಫ್ಘಾನಿಸ್ತಾನ ಪರ ಬಿಲಾಲ್ ಸಮಿ 3 ವಿಕೆಟ್‌ ಕಬಳಿಸಿ ಮಿಂಚಿದರೆ, ಅಲ್ಲಾ ಗಂಜಾನಿಫರ್ 2 ವಿಕೆಟ್‌ ಪಡೆದು ಶ್ರೀಲಂಕಾವನ್ನು ಕಟ್ಟಿ ಹಾಕಿದರು.

ಜವಾಬ್ದಾರಿಯುತ ಇನ್ನಿಂಗ್ಸ್

ಅಫ್ಘಾನಿಸ್ತಾನಕ್ಕೆ ಗೆಲುವಿಗೆ 134 ರನ್‌ಗಳ ಗುರಿಯನ್ನು ನೀಡಿತ್ತು. ಅಫ್ಘಾನಿಸ್ತಾನ ತಂಡ 18.1 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಅಫ್ಘಾನಿಸ್ತಾನ ಪರ ಆರಂಭಿಕ ಬ್ಯಾಟರ್ ಸೇಡಿಕುಲ್ಲಾ ಅಟಲ್ 55 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 55 ರನ್ ಗಳಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು. ಕರೀಂ ಜನ್ನತ್ 27 ಎಸೆತಗಳಲ್ಲಿ 3 ಸಿಕ್ಸರ್‌ಗಳ ಸಹಾಯದಿಂದ 33 ರನ್ ಗಳಿಸಿದರು. ದರ್ವೇಶ್ ರಸೂಲಿ 20 ಎಸೆತಗಳಲ್ಲಿ 24 ರನ್ ಕೊಡುಗೆ ನೀಡಿದರು.

ಇದಲ್ಲದೇ ಮೊಹಮ್ಮದ್ ಇಶಾಕ್ 6 ಎಸೆತಗಳಲ್ಲಿ 16 ರನ್ ಗಳಿಸಿ ಅಜೇಯರಾಗಿ ಉಳಿದರು. ಆದರೆ, ಇದಕ್ಕೂ ಮುನ್ನ ಅಫ್ಘಾನಿಸ್ತಾನ ಉತ್ತಮ ಆರಂಭ ಪಡೆದಿರಲಿಲ್ಲ. ಅಫ್ಘಾನಿಸ್ತಾನದ ಆರಂಭಿಕ ಆಟಗಾರ ಜುಬೈದ್ ಅಕ್ಬರಿ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು. ಆದರೆ ನಂತರ ಕ್ರೀಸ್‌ಗೆ ಬಂದ ಬ್ಯಾಟರ್‌ಗಳು ಅದ್ಭುತ ಇನ್ನಿಂಗ್ಸ್ ಆಡಿದರು.

ಭಾರತ ಎ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನದ ಬೌಲರ್‌ಗಳು ತಮ್ಮ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿದ್ದರು. ಇದೀಗ ಪ್ರಶಸ್ತಿ ಗೆಲುವಿನಲ್ಲಿ ಅದೇ ಅಫ್ಘಾನಿಸ್ತಾನದ ಬೌಲರ್‌ಗಳು
ಪ್ರಮುಖ ಪಾತ್ರವಹಿಸಿರುವುದು ಎಲ್ಲರ ಚಿತ್ತ ಗೆದ್ದಿದೆ. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಬಿಲಾಲ್ ಸಮಿ ಮತ್ತು ಅಲ್ಲಾ ಗಂಜಾನಿಫರ್ ಫೈನಲ್ ನಲ್ಲಿ ಮತ್ತೊಮ್ಮೆ ಫೈನಲ್‌ನಲ್ಲಿ ತಮ್ಮ ಬೌಲಿಂಗ್ ಮೂಲಕ ಕಮಾಲ್ ಮಾಡಿದರು.

Story first published: Monday, October 28, 2024, 8:51 [IST]
Other articles published on Oct 28, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+