Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಅಫ್ಘಾನಿಸ್ತಾನ ತಂಡ ಪ್ರಕಟ

Afghanistan announce T20I squad for Bangladesh series

ಬೆಂಗಳೂರು, ಮೇ 29: ಭಾರತ ವಿರುದ್ಧದ ಏಕೈಕ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೂ ಮುನ್ನ ಪ್ರವಾಸಿ ಅಫ್ಘಾನಿಸ್ತಾನ ತಂಡವು, ಡೆಹ್ರಾಡೂನ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಸರಣಿ ಆಡಲಿದೆ.

ಬಾಂಗ್ಲಾ ವಿರುದ್ಧದ 3 ಟಿ20ಐ ಪಂದ್ಯಗಳ ಸರಣಿಗೆ 16 ಸದಸ್ಯರನ್ನುಳ್ಳ ಅಫ್ಘಾನಿಸ್ತಾನ ತಂಡವನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಪ್ರಕಟಿಸಿದೆ.

ಜೂನ್ 03ರ ನಂತರ ಡೆಹ್ರಾಡೂನಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ. ಮೊದಲಿಗೆ ಉಭಯ ತಂಡಗಳ ನಡುವೆ ಏಕದಿನ ಅಂತಾರಾಷ್ಟ್ರೀಯ ಸರಣಿ ಆಯೋಜಿಸುವ ಕುರಿತು ಚರ್ಚೆ ನಡೆದಿತ್ತು. ಆದರೆ, 2020ರ ವಿಶ್ವ ಟಿ20 ದೃಷ್ಟಿಯಿಂದ ಟಿ20ಐ ಸರಣಿ ಆಯೋಜಿಸಲಾಗಿದೆ.

ಅಫ್ಘಾನಿಸ್ತಾನ: ಅಸ್ಘರ್ ಸ್ಟಾನಿಕ್ಜಾಯಿ(ನಾಯಕ), ಮೊಹಮ್ಮದ್ ಶಹಜಾದ್(ವಿಕೆಟ್ ಕೀಪರ್), ನಜಿಬುಲ್ಲಾ ತರಕಾಯಿ, ಉಸ್ಮಾನ್ ಘನಿ, ನಜಿಬುಲ್ಲಾ ಜದ್ರಾನ್, ಸಮಿಯುಲ್ಲಾ ಶೆನ್ವಾರಿ, ಶಫಿಕುಲ್ಲಾ ಶಫಕ್, ದರ್ವಿಶ್ ರಸೂಲಿ, ಕರೀಂ ಜನತ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ರಷೀದ್ ಖಾನ್, ಶರಫುದ್ದೀನ್ ಅಸ್ರಫ್, ಮುಜೀಬ್ ಉರ್ ರೆಹ್ಮಾನ್, ಶಾಪೂರ್ ಜದ್ರಾನ್, ಅಫ್ತಾಬ್ ಆಲಂ.

ಬಾಂಗ್ಲಾದೇಶ ತಂಡ: ಶಕೀಬ್ ಅಲ್ ಹಸನ್ (ನಾಯಕ), ಲಿಟಾನ್ ದಾಸ್, ಅರಿಫುಲ್ ಹಕ್, ಮೆಹೆದಿ ಹಸನ್, ಅಬು ಹಿದರ್, ಮೊಸದೆಕ್ ಹೊಸೈನ್, ರುಬೆಲ್ ಹಾಸನ್, ತಮೀಮ್ ಇಕ್ಬಾಲ್, ನಜ್ಮುಲ್ ಇಸ್ಲಾಮ್, ಅಬು ಜಯದ್, ಮಹಮುದುಲ್ಲಾ, ಮುಷ್ಫಿಕುರ್ ರಹೀಂ(ವಿಕೆಟ್ ಕೀಪರ್), ಶಬೀರ್ ರಹ್ಮಾನ್, ಸೌಮ್ಯ ಸರ್ಕಾರ್.

ಬಾಂಗ್ಲಾದೇಶ ವಿರುದ್ಧ ಟಿ20ಐ ಸರಣಿಗೆ ಅಫ್ಘಾನಿಸ್ತಾನ ತಂಡ ಹೀಗಿದೆ. ಡೆಹ್ರಾಡೂನ್ ನಲ್ಲಿ ಆಡಲಿರುವ ಈ ಸರಣಿಗೆ ಎಡಗೈ ವೇಗಿ ಶಾಪೂರ್ ಜದ್ರಾನ್ ಅವರು ಅಫ್ಘನ್ ತಂಡ ಸೇರಲಿದ್ದಾರೆ

Story first published: Tuesday, May 29, 2018, 19:56 [IST]
Other articles published on May 29, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+