ಎಂಎಸ್ ಧೋನಿಯ ಟಿ20ಐ ದಾಖಲೆ ಸರಿದೂಗಿಸಿದ ಅಸ್ಘರ್ ಅಫ್ಘಾನ್

ಕಾಬುಲ್: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕ ಅಸ್ಘರ್ ಅಫ್ಘಾನ್, ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಸರಿದೂಗಿಸಿಕೊಂಡಿದ್ದಾರೆ. ಶುಕ್ರವಾರ (ಮಾರ್ಚ್ 19) ನಡೆದ ಅಫ್ಘಾನಿಸ್ತಾನ-ಜಿಂಬಾಬ್ವೆ ದ್ವಿತೀಯ ಟಿ20ಐ ಪಂದ್ಯದಲ್ಲಿ ಅಸ್ಘರ್ ಈ ಅಪರೂಪದ ಸಾಧನೆ ಮೆರೆದಿದ್ದಾರೆ.
ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದಿದ್ದ ಜಿಂಬಾಬ್ವೆ-ಅಪ್ಘಾನ್ 2ನೇ ಟಿ20ಐನಲ್ಲಿ ಅಪ್ಘಾನಿಸ್ತಾನ 45 ರನ್ ಗೆಲುವು ಕಂಡಿತ್ತು. ಈ ಗೆಲುವಿನೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ನಾಯಕನಾಗಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆಗೆ ಅಸ್ಘರ್ ಅಫ್ಘಾನ್ ಕಾರಣರಾಗಿದ್ದಾರೆ.
ಟಿ20ಐನಲ್ಲಿ ತಂಡಕ್ಕೆ ನಾಯಕಾನಗಿದ್ದು ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ ವಿಶ್ವದಾಖಲೆ ಎಂಎಸ್‌ಡಿ ಹೆಸರಿನಲ್ಲಿತ್ತು. 72 ಟಿ20ಐ ಪಂದ್ಯಗಳಿಗೆ ನಾಯಕತ್ವ ವಹಿಸಿದ್ದ ಮಾಹಿ ಇದರಲ್ಲಿ 41 ಪಂದ್ಯಗಳನ್ನು ಗೆದ್ದಿದ್ದರು. ಈಗ 51 ಪಂದ್ಯಗಳಿಗೆ ನಾಯಕತ್ವ ವಹಿಸಿಕೊಂಡಿರುವ ಅಸ್ಘರ್ 41 ಪಂದ್ಯಗಳನ್ನು ಗೆದ್ದಿದ್ದಾರೆ. ಇಲ್ಲಿಗೆ ಧೋನಿ ದಾಖಲೆ ಸರಿದೂಗಿದಂತಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿರುವ ಎಂಎಸ್‌ಡಿ ಸದ್ಯ ಮುಂಬರುವ ಐಪಿಎಲ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ. ಏಪ್ರಿಲ್ 9ರಿಂದ 2021ರ ಐಪಿಎಲ್ ಆರಂಭವಾಗಲಿದೆ.
ಅಂತಾರಾಷ್ಟ್ರೀಯ ಟಿ20ಯಲ್ಲಿ ನಾಯಕರಾಗಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ ಆಟಗಾರರ ಪಟ್ಟಿ
* ಎಂಎಸ್ ಧೋನಿ, ಭಾರತ, 72 ಟಿ20ಐ ಪಂದ್ಯಗಳು, 41 ಗೆಲುವು
* ಅಸ್ಘರ್ ಅಫ್ಘಾನ್, ಅಫ್ಘಾನಿಸ್ತಾನ, 51 ಟಿ20ಐ ಪಂದ್ಯಗಳು, 41 ಗೆಲುವು
* ಇಯಾನ್ ಮಾರ್ಗನ್, ಇಂಗ್ಲೆಂಡ್, 58 ಟಿ20ಐ ಪಂದ್ಯಗಳು, 38 ಗೆಲುವು
* ಸರ್ಫರಾಜ್ ಅಹ್ಮದ್, ಪಾಕಿಸ್ತಾನ, 37 ಟಿ20ಐ ಪಂದ್ಯಗಳು, 29 ಗೆಲುವು
* ಡ್ಯಾರೆನ್ ಸ್ಯಾಮಿ, ವೆಸ್ಟ್ ಇಂಡೀಸ್, 47ಟಿ20ಐ ಪಂದ್ಯಗಳು, 27 ಗೆಲುವು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications