Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Emerging Asia Cup: ಚಾಂಪಿಯನ್ ಆದ ಸಂತಸದಲ್ಲಿ ತೇಲಾಡಿದ ಅಫ್ಘಾನ್ ಆಟಗಾರರು; ಸೆಲೆಬ್ರೇಷನ್ ವಿಡಿಯೋ ವೈರಲ್!

ಒಮಾನ್‌ನಲ್ಲಿ ನಡೆದ ಎಸಿಸಿ ಉದಯೋನ್ಮುಖ ಏಷ್ಯಾಕಪ್‌ 2024ರ ಟೂರ್ನಿಯಲ್ಲಿ ಅಫ್ಘಾನಿಸ್ತಾನ ಎ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಅಫ್ಘಾನಿಸ್ತಾನ 7 ವಿಕೆಟ್‌ಗಳಿಂದ ಸೋಲಿಸಿ ಉದಯೋನ್ಮುಖ ಏಷ್ಯಾಕಪ್‌ ಪ್ರಶಸ್ತಿಯನ್ನು ಗೆದ್ದು ಬೀಗಿದೆ.

ಅಫ್ಘಾನಿಸ್ತಾನ ಎ ತಂಡ ಟೂರ್ನಿಯುದಕ್ಕೂ ಅದ್ಭುತ ಪ್ರದರ್ಶನ ನೀಡಿತ್ತು. ಸೆಮಿಫೈನಲ್‌ ಪಂದ್ಯದಲ್ಲಿ ಆಫ್ಘಾನ್ ಎದುರು ಬಲಿಷ್ಠ ಯಂಗ್ ಟೀಮ್ ಇಂಡಿಯಾ ಮಗ್ಗರಿಸಿತ್ತು. ಭಾರತವನ್ನು ಸೋಲಿಸಿದ ಆಫ್ಘಾನ್ ಫೈನಲ್‌ಗೆ ಮುನ್ನಡೆದಿತ್ತು. ಫೈನಲ್‌ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ಆಫ್ಘಾನ್ ಚೊಚ್ಚಲ ಪ್ರಶಸ್ತಿಯನ್ನು ಮಡಿಗೇರಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಆಫ್ಘಾನ್ ಆಟಗಾರರು ಸಂತಸ ಕಡಲಲ್ಲಿ ತೇಲಾಡಿದರು. ಚಾಂಪಿಯನ್ ಆಟಗಾರರ ಸಂತಸಕ್ಕೆ ಮಿತಿಯೇ ಇರಲಿಲ್ಲ. ಅಷ್ಟರ ಮಟ್ಟಿಗೆ ಮೈದಾನದಲ್ಲಿ ಕುಣಿದು ಕುಪ್ಪಳಿಸಿದರು.

Afghanistan celebrate after winning the Emerging Asia Cup title video viral

ಶ್ರೀಲಂಕಾ ನೀಡಿದ 134 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ 7 ವಿಕೆಟ್‌ಗಳಿಂದ
ಪಂದ್ಯವನ್ನು ಗೆದ್ದು ಬೀಗಿತ್ತು. 19 ನೇ ಓವರ್‌ನ ಮೊದಲ ಎಸೆತದಲ್ಲಿ ಮೊಹಮ್ಮದ್ ಇಶಾಕ್ ವಿನ್ನಿಂಗ್ ಶಾಟ್ ಹೊಡೆಯುತ್ತದ್ದಂತೆ ಅಫ್ಘಾನಿಸ್ತಾನ ಆಟಗಾರರು ಮೈದಾನದೊಳಗೆ ಗುಳಿಗಳಂತೆ ಓಡಿ ಬಂದರು. ಮೊಹಮ್ಮದ್ ಇಶಾಕ್ ಅಪ್ಪಿಕೊಂಡು ಗೆಲುವಿನ ಸಂಭ್ರಮಾಚರಣೆ ಮಾಡಿದರು. ಮತ್ತೊಂದೆಡೆ ಬೌಂಡರಿ ಹೊಡೆದ ಮೊಹಮ್ಮದ್ ಇಶಾಕ್ ಕೂಡ ತಮ್ಮದೆ ಆದ ಶೈಲಿಯಲ್ಲಿ ಸಂತಸವನ್ನು ವ್ಯಕ್ತಪಡಿಸಿದರು.

ಡ್ರೆಸಿಂಗ್ ರೂಮ್‌ನಲ್ಲಿಯೂ ಅಫ್ಘಾನ್ ಹಾಡಿಗೆ ಆಟಗಾರರು ಹೆಜ್ಜೆ ಹಾಕಿರುವುದು ಎಲ್ಲರ ಗಮನ ಸೆಳೆದಿದೆ. ಆಟಗಾರರ ಜೊತೆ ಕೋಚಿಂಗ್ ಸ್ಟಾಪ್ ಕೂಡ ಸಂತಸ ಕ್ಷಣದಲ್ಲಿ ಪಾಲ್ಗೊಂಡಿದ್ದಾರೆ. ಅಫ್ಘಾನಿಸ್ತಾನ ಅಭಿಮಾನಿಗಳು ಸಹ ತಮ್ಮ ರಾಷ್ಟ್ರ ಧ್ವಜಗಳನ್ನು ಮೈದಾನದಲ್ಲಿ ಹಾರಿಸಿ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಹಲವು ಆಟಗಾರರು ಚಾಂಪಿಯನ್ ಆದ ಸಂತೋಷದಲ್ಲಿ ಆನಂದಭಾಷ್ಪ ಸುರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಫ್ಘಾನಿಸ್ತಾನ ವಿಶ್ವಕ್ರಿಕೆಟ್‌ನಲ್ಲಿ ಬಲಿಷ್ಠ ತಂಡಗಳಿಗೆ ಸೋಲಿನ ಟಕ್ಕರ್‌ ಕೊಟ್ಟಿದೆ.

Story first published: Tuesday, October 29, 2024, 17:56 [IST]
Other articles published on Oct 29, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+