Pak Vs Afg: ಅಫ್ಘಾನಿಸ್ತಾನ ಗೆಲುವಿಗೆ ತನ್ನೆಲ್ಲಾ ಅನುಭವ ಧಾರೆ ಎರೆದ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ
ಸೋಮವಾರ ವಿಶ್ವಕಪ್ ಕ್ರಿಕೆಟ್ ನಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಬಂದಿದೆ. ಲೀಗ್ ಹಂತದ ಪಂದ್ಯದಲ್ಲಿ ಪಾಕ್ ತಂಡ, ಅಫ್ಘಾನಿಸ್ತಾನ ವಿರುದ್ಧ ಸೋಲು ಕಂಡಿದೆ. ಈ ಮೂಲಕ ಪಾಕಿಸ್ತಾನ ತಂಡದ ಸೆಮಿಫೈನಲ್ ಆಸೆ ಬಹುತೇಕ ಕಮರಿದಂತೆ ಆಗಿದೆ. ಆಫ್ಘಾನ್ ತಂಡ ಐಸಿಸಿ ಆಯೋಜಿತ ಟೂರ್ನಿಯಲ್ಲಿ ಅಚ್ಚರಿಯ ಫಲಿತಾಂಶ ನೀಡಿದೆ.
ಅಲ್ಲದೆ ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನ, ಪಾಕಿಸ್ತಾನ ತಂಡವನ್ನು ಮಣಿಸಿದೆ. ಅಂದಹಾಗೆ ಈ ಗೆಲುವಿನ ಶ್ರೇಯ ನಿಜಕ್ಕೂ ಆಟಗಾರರಿಗೆ ಸಲ್ಲುತ್ತದೆ. ಇಷ್ಟೇ ಅಲ್ಲ ಇದರ ಶ್ರೇಯ ಕೋಚ್ ಸಿಬ್ಬಂದಿಗೂ ಸಲ್ಲುತ್ತದೆ. ಹೀಗಾಗಿ ಅಫ್ಘಾನಿಸ್ತಾನ ಗೆಲುವಿನಲ್ಲಿ ಭಾರತದ ಪಾತ್ರವೂ ದೊಡ್ಡದಿದೆ.

ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನ ಅಚ್ಚರಿಯ ಫಲಿತಾಂಶ ನೀಡುತ್ತಲೇ ಬಂದಿದೆ. ಇದಕ್ಕೂ ಮೊದಲು ಅಫ್ಘಾನಿಸ್ತಾನ್ ತಂಡ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು. ಈಗ ಪಾಕಿಸ್ತಾನ ತಂಡವನ್ನು ಮಣಿಸಿದೆ. ಈ ಮೂಲಕ ಒಂದೇ ವಿಶ್ವಕಪ್ ನಲ್ಲಿ ಎರಡು ಜಯ ಸಾಧಿಸಿದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಅಫ್ಘಾನಿಸ್ತಾನ ಈ ಗೆಲುವಿನ ಹಿಂದೆ ಟೀಮ್ ಇಂಡಿಯಾದ ಮಾಜಿ ಆಟಗಾರನ ಬೆವರ ಹನಿ ಎದ್ದು ಕಾಣುತ್ತಿದೆ. ಎಸ್... ಅವರೇ ಟೀಮ್ ಇಂಡಿಯಾ ಮಾಜಿ ಆಟಗಾರ ಅಜಯ್ ಜಡೇಜಾ.. ಅಜಯ್ ಜಡೇಜಾ ಅವರನ್ನು ಅಫ್ಘಾ ನಿಸ್ತಾನ ಕ್ರಿಕೆಟ್ ಮಂಡಳಿ ಮೆಂಟರ್ ಆಗಿ ಆಯ್ಕೆ ಮಾಡಿದೆ.
ಟೀಮ್ ಇಂಡಿಯಾ ಮಾಜಿ ಆಟಗಾರ ಅಜಯ್ ಜಡೇಜಾ
ಅಜಯ್ ಜಡೇಜಾ ಭಾರತದಲ್ಲಿ ಕ್ರಿಕೆಟ್ ಸಾಕಷ್ಟು ಆಡಿದ್ದರಿಂದ ಇಲ್ಲಿನ ಪಿಚ್ ಗಳ ಜ್ಞಾನ ಅವರಿಗೆ ಚೆನ್ನಾಗಿದೆ. ಅಲ್ಲದೆ ಪಿಚ್ ಕಂಡಿಷನ್ ಬಗ್ಗೆ ಜ್ಞಾನ ಇದೆ. ಈ ಅಂಶಗಳನ್ನು ಮನಗೊಂಡು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಇವರಿಗೆ ಮೆಂಟರ್ ಶಿಪ್ ನೀಡಿದೆ. ಅಜಯ್ ಜಡೇಜಾ ಬಳಿ ಹಲವು ವರ್ಷದ ಕ್ರಿಕೆಟ್ ಅನುಭವ ಇದೆ.
ಈ ಅನುಭವವನ್ನು ಅವರು ಅಫ್ಘಾನಿಸ್ತಾನ ತಂಡಕ್ಕೆ ಧಾರೆ ಎರೆಯುತ್ತಿದ್ದಾರೆ. ಅಫ್ಘಾನಿಸ್ತಾನ್ ಟಿ20 ಕ್ರಿಕೆಟ್ ನಲ್ಲಿ ಬಲಾಢ್ಯ ತಂಡ.. ಆದರೆ ಏಕದಿನ ಕ್ರಿಕೆಟ್ ನಲ್ಲಿ ಇನ್ನು ಅಫ್ಘಾನಿಸ್ತಾನ ದುರ್ಬಲ ತಂಡವೇ ಆಗಿದೆ. ಆಫ್ಘಾನ್ ತಂಡದ ಬಲವನ್ನೇ ನಂಬಿ ಅಜಯ್ ಜಡೇಜಾ ತಂಡವನ್ನು ಕಟ್ಟಿದ್ದಾರೆ.
ವಿಶ್ವಕಪ್ ನಲ್ಲಿ ಬಲಾಢ್ಯ ತಂಡಗಳಿಗೆ ಪೆಟ್ಟು
ಅಲ್ಲದೆ ವಿಶ್ವಕಪ್ ನಲ್ಲಿ ಬಲಾಢ್ಯ ತಂಡಗಳಿಗೆ ಪೆಟ್ಟು ನೀಡುತ್ತಿದೆ. ಅಸಲಿಗೆ ಜಡೇಜಾ ಅವರಿಗೆ ನೀಡಿದ ಜವಾಬ್ದಾರಿ ಕೋಚ್ ಗಿಂತಲೂ ಕೊಂಚ ಹೆಚ್ಚಾಗಿರುತ್ತದೆ. ಅವರು ಪ್ರತಿಯೊಬ್ಬ ಆಟಗಾರನನ್ನು ಭೇಟಿಯಾಗಿ ಆತನ ಆಟದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಶ್ರಮಿಸುತ್ತಾರೆ. ಅಲ್ಲದೆ ಆಟಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಮನವರಿಕೆ ಮಾಡಿಕೊಡಬೇಕಾಗುತ್ತದೆ.
ಅಜಯ್ ಜಡೇಜಾ ಈ ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಹೀಗಾಗಿ ಈ ಬಾರಿಯ ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನ ಅಮೋಘ ಪ್ರದರ್ಶನ ನೀಡುತ್ತಿದ್ದು, ಎಲ್ಲರ ಚಿತ್ತ ಕದ್ದಿದೆ. ಅಂದಹಾಗೆ ಅಫ್ಘಾನಿಸ್ತಾನ ತಂಡದ ಭರ್ಜರಿ ಪ್ರದರ್ಶನದ ಹಿಂದೆ ಟೀಮ್ ಇಂಡಿಯಾದ ಮಾಜಿ ಆಟಗಾರನ ಶ್ರಮ ಇದೆ ಎಂದರೆ ಹೆಮ್ಮೆಯ ಸಂಗತಿ ಅಲ್ಲವೆ..
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications