Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ಕ್ರಿಕೆಟ್ ತಂಡ ಆಡಲಿದೆ: ಗ್ರೀನ್ ಸಿಗ್ನಲ್ ಕೊಟ್ಟ ಅಫ್ಘಾನ್ ಕ್ರಿಕೆಟ್ ಬೋರ್ಡ್

Afghanistan Cricket Board signals women could still play, says report

ಕಾಬೂಲ್: ಅಫ್ಘಾನಿಸ್ತಾನದ ಮಹಿಳಾ ಕ್ರಿಕೆಟ್‌ ತಂಡಕ್ಕೂ ಆಡುವ ಅವಕಾಶ ನೀಡಲಾಗುತ್ತದೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್‌ನ ಮುಖ್ಯಸ್ಥರು ಆಸ್ಟ್ರೇಲಿಯಾದ ಪ್ರಸಾರಕ ಒಂದಕ್ಕೆ ಮಾಹಿತಿ ನೀಡಿರುವುದಾಗಿ ವರದಿಯೊಂದು ಹೇಳಿದೆ. ಮಹಿಳಾ ಕ್ರಿಕೆಟ್ ತಂಡದ ಮೇಲೆ ತಾಲಿಬಾನ್ ಹೇರಿದ್ದ ಬ್ಯಾನ್ ವಾಪಸ್ ಪಡೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್‌ನ ಮುಖ್ಯಸ್ಥ ಅಜೀಜುಲ್ಲಾ ಫಝ್ಲಿ ಮಾತನಾಡಿ, ಮಹಿಳಾ ಕ್ರಿಕೆಟ್ ತಂಡ ಆಡುವಂತೆ ಹೇಗೆ ನೋಡಿಕೊಳ್ಳಬೇಕೆನ್ನುವ ಬಗ್ಗೆ ಇಲ್ಲಿನ ಕ್ರಿಕೆಟ್ ಆಡಳಿತ ಮಂಡಳಿ ಯೋಜನೆ ಯೂಪಿಸಲಿದೆ ಎಂದು ಮಾಹಿತಿ ನೀಡಿದ್ದಾರೆ. ಜೊತೆಗೆ, 25 ಜನರಿರುವ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಅಫ್ಘಾನ್‌ನಲ್ಲೆ ಉಳಿಯಲಿದ್ದಾರೆ ಮತ್ತು ಸ್ಥಳಾಂತರಿಸುವ ವಿಮಾನಕ್ಕೆ ಅವರು ಹತ್ತುವುದಿಲ್ಲ ಎಂದು ತಿಳಿಸಿದ್ದಾರೆ.

ಮಹಿಳಾ ಕ್ರಿಕೆಟ್ ಆಡಲಿರುವ ಬಗ್ಗೆ ಚಿತ್ರಣ ನೀಡಲಿದ್ದೇವೆ
"ನಾವು ಮಹಿಳಾ ಕ್ರಿಕೆಟ್ ತಂಡಕ್ಕೆ ಆಡಲು ಹೇಗೆ ಅನುಮತಿ ನೀಡುತ್ತೇವೆ ಅನ್ನೋದರ ಚಿತ್ರಣ ನಿಮಗೆ ನೀಡುತ್ತೇವೆ. ಈ ಬಗ್ಗೆ ಮುಂದುವರೆಯುವುದು ಹೇಗೆ ಅನ್ನೋದಕ್ಕೆ ನಾವು ನಿಮಗೆ ಶೀಘ್ರವೇ ಒಳ್ಳೆಯ ಸುದ್ದಿ ನೀಡುತ್ತೇವೆ," ಎಂದು ಎಸ್‌ಬಿಎಸ್ ರೇಡಿಯೋ ಪಾಸ್ತೋ ಜೊತೆ ಮಾತನಾಡಿದ ಅಜೀಜುಲ್ಲಾ ಫಝ್ಲಿ ಮಾಹಿತಿ ಒದಗಿಸಿದ್ದಾರೆ.
ಇದಕ್ಕೂ ಮುನ್ನ ಇದೇ ಪ್ರಸಾರಕದ ಜೊತೆ ತಾಲಿಬಾನ್ ಕಲ್ಚುರಲ್ ಕಮಿಶನ್‌ನ ಅಹ್ಮದುಲ್ಲಾ ವಾಸಿಕ್ ಅವರು ಮಹಿಳೆಯರಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ, ಮಹಿಳಾ ಕ್ರಿಕೆಟ್‌ಗೆ ಅವಕಾಶ ನೀಡದಿದ್ದರೆ ಪುರುಷರ ತಂಡದೊಂದಿಗಿನ ನಮ್ಮ ಟೆಸ್ಟ್‌ ಪಂದ್ಯ ರದ್ದುಗೊಳಿಸಲಾಗುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿತ್ತು.

ಆಸ್ಟ್ರೇಲಿಯಾ ಹೇಳಿಕೆಯಿಂದ ಅಫ್ಘಾನ್ ಕ್ರಿಕೆಟ್ ಬೋರ್ಡ್‌ಗೆ ನಿರಾಸೆ
ಕ್ರಿಕೆಟ್ ಆಸ್ಟ್ರೇಲಿಯಾದ ಹೇಳಿಕೆ ಅಫ್ಘಾನ್ ಕ್ರಿಕೆಟ್ ಬೋರ್ಡ್‌ಗೆ ನಿರಾಸೆ ಮೂಡಿಸಿತ್ತು. ಅಫ್ಘಾನ್ ಬೋರ್ಡ್‌ನ ಸಿಇಒ ಹಮೀದ್ ಶಿನ್ವಾರಿ ಮಾತನಾಡಿ, ತಮ್ಮನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಇಡದಂತೆ ಕ್ರಿಕೆಟ್ ಆಸ್ಟ್ರೇಲಿಯಾದ ಜೊತೆ ಮನವಿ ಮಾಡಿಕೊಂಡಿದ್ದರು. ಈಗ ಮಹಿಳಾ ಕ್ರಿಕೆಟ್ ತಂಡಕ್ಕೂ ಆಡಲು ಅವಕಾಶ ನೀಡುವ ಬಗ್ಗೆ ಅಫ್ಘಾನ್ ಯೋಚಿಸುತ್ತಿದೆ.
ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಯಮದ ಪ್ರಕಾರ ಟೆಸ್ಟ್ ಕ್ರಿಕೆಟ್ ಆಡುವ ತಂಡಗಳು ಕಡ್ಡಾಯವಾಗಿ ಮಹಿಳಾ ಕ್ರಿಕೆಟ್ ತಂಡ ಹೊಂದಿರಬೇಕು. ಆದರೆ ಅಫ್ಘಾನ್‌ನಲ್ಲಿ ಆಡಳಿತ ಕೈಗೆತ್ತಿಕೊಂಡಿರುವ ತಾಲಿಬಾನ್ ಉಗ್ರ ಸಂಘಟನೆ ಅಫ್ಘಾನ್‌ನಲ್ಲಿ ಮಹಿಳಾ ಕ್ರೀಡೆಗೆ ನಿರ್ಬಂಧ ಹೇರಿತ್ತು. ಈ ವೇಳೆ ಮಹಿಳಾ ಕ್ರಿಕೆಟ್ ತಂಡಕ್ಕೂ ನಿರ್ಬಂಧ ವಿಧಿಸಲಾಗಿತ್ತು.

ಸಾಂಪ್ರದಾಯಿಕ ಆಚರಣೆಗಾಗಿ ನಮ್ಮನ್ನು ದಂಡಿಸಬೇಡಿ
ಗುರುವಾರ (ಸೆಪ್ಟೆಂಬರ್‌ 9) ಕ್ರಿಕೆಟ್ ಆಸ್ಟ್ರೇಲಿಯಾ ಒಂದು ಹೇಳಿಕೆ ನೀಡಿತ್ತು. ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಮಹಿಳಾ ಕ್ರೀಡಾ ಚಟುವವಟಿಕೆಗಳಿಗೆ ನಿರ್ಬಂಧ ಹೇರುವುದಾದರೆ ಸೀಸನ್‌ ಆರಂಭವಾಗಿ ನವೆಂಬರ್ 27ರಂದು ಹೋಬರ್ಟ್‌ನಲ್ಲಿ ನಡೆಯಲಿರುವ ಅಫ್ಘಾನ್ ಪುರುಷರು ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯ ರದ್ದು ಮಾಡಲಾಗುತ್ತದೆ ಎಂದು ಹೇಳಿತ್ತು.
ಕ್ರಿಕೆಟ್ ಆಸ್ಟ್ರೇಲಿಯಾದ ಹೇಳಿಕೆಯ ಬಳಿಕ ಪ್ರತಿಕ್ರಿಯಿಸಿರುವ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್‌ನ ಸಿಇಒ ಹಮಿದ್ ಶಿನ್ವಾರಿ, "ನಾವು ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ವಿಶ್ವದ ಎಲ್ಲಾ ಕ್ರಿಕೆಟ್ ರಾಷ್ಟ್ರಗಳಲ್ಲಿ ನಮಗಾಗಿ ಬಾಗಿಲು ತೆರೆದಿಡುವಂತೆ ಕೋರಿಕೊಳ್ಳುತ್ತೇವೆ. ನಮ್ಮ ಧಾರ್ಮಿಕ, ಸಾಂಪ್ರದಾಯಿಕ ಆಚರಣೆಗಾಗಿ ನಮ್ಮನ್ನು ದಂಡಿಸಬೇಡಿ, ನಮ್ಮನ್ನು ಪ್ರತ್ಯೇಕವಾಗಿರಿಸಬೇಡಿ," ಎಂದು ವಿನಂತಿಸಿಕೊಂಡಿದ್ದರು.

Story first published: Saturday, September 11, 2021, 16:24 [IST]
Other articles published on Sep 11, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+