ಐಪಿಎಲ್ ದ್ವಿತೀಯ ಹಂತಕ್ಕೆ ಅಫ್ಘಾನಿಸ್ತಾನದ ರಶೀದ್ ಖಾನ್, ಮೊಹಮ್ಮದ್ ನಬಿ ಲಭ್ಯ

ಕಾಬುಲ್: ಸದ್ಯದ ಪರಿಸ್ಥಿತಿಯಲ್ಲಿ ಅಫ್ಘಾನಿಸ್ತಾನದ ಸ್ಟಾರ್ ಆಟಗಾರರಾದ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡಲಿದ್ದಾರೆ. ರಶೀದ್ ಮತ್ತು ನಬಿ ಆಡುವ ಎಸ್‌ಆರ್‌ಎಚ್ ತಂಡ ಈ ಸಂಗತಿಯನ್ನು ಖಾತರಿಪಡಿಸಿದೆ. ಭಾರತದಲ್ಲಿ ಅರ್ಧಕ್ಕೆ ನಿಲ್ಲಿಸಲ್ಪಟ್ಟಿದ್ದ ಐಪಿಎಲ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರ ವರೆಗೆ ನಡೆಯಲಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಿಕ್ಕಟ್ಟು ಎದುರಾಗಿದೆ. ದೇಶವಿಡೀ ತಾಲಿಬಾನ್‌ಗಳ ಅಟ್ಟಹಾಸದಿಂದ ನಲುಗುತ್ತಿದೆ. ಹೀಗಾಗಿ ಅಫ್ಘಾನಿಸ್ತಾನದ ಸ್ಟಾರ್ ಆಟಗಾರರು ಐಪಿಎಲ್ ದ್ವಿತೀಯ ಹಂತದ ಟೂರ್ನಿಯಲ್ಲಿ ಆಡುತ್ತಾರೋ ಇಲ್ಲವೋ ಎನ್ನುವ ಅನುಮಾನ ಮೂಡಿತ್ತು. ಉಳಿದ ಆಟಗಾರರ ಲಭ್ಯತೆ ಬಗ್ಗೆ ಮಾಹಿತಿಯಿಲ್ಲ. ಆದರೆ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ಆಡುತ್ತಾರೆ ಎಂದು ಹೈದರಾಬಾದ್ ಫ್ರಾಂಚೈಸಿ ಮಾಹಿತಿ ನೀಡಿದೆ.

ಅಫ್ಘಾನ್‌ನಲ್ಲಿರುವ ಪರಿಸ್ಥಿತಿಯ ಬಗ್ಗೆ ರಶೀದ್‌ಗೆ ಚಿಂತೆ
"ಅಫ್ಘಾನಿಸ್ತಾನದಲ್ಲಿ ಸದ್ಯದ ಪರಿಸ್ಥಿತಿಯ ಬಗ್ಗೆ ನಾವು ಮಾತನಾಡಲು ಹೋಗುವುದಿಲ್ಲ. ಆದರೆ ಆಲ್ ರೌಂಡರ್‌ಗಳಾದ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ಮುಂಬರಲಿರುವ ಐಪಿಎಲ್‌ನಲ್ಲಿ ಆಡುತ್ತಾರೆ," ಎಂದು ಸನ್ ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕೆ ಷನ್ಮುಗಮ್ ಎಎನ್‌ಐಗೆ ಮಾಹಿತಿ ನೀಡಿದ್ದಾರೆ. ಹೈದರಾಬಾದ್ ತಂಡ ಯಾವಾಗ ಯುಎಇಗೆ ಹೊರಡುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಷನ್ಮುಗಮ್, "ಈ ತಿಂಗಳ ಕೊನೆಯಲ್ಲಿ ಅಂದರೆ ಆಗಸ್ಟ್ 31ರಂದು ನಾವು ಯುಎಇಗೆ ಹೊರಡುತ್ತಿದ್ದೇವೆ," ಎಂದಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ರಶೀದ್ ಖಾನ್ ಬಗ್ಗೆ ಮಾಹಿತಿ ನೀಡಿದ್ದಾರೆ. ಅಫ್ಘಾನ್‌ನಲ್ಲಿರುವ ಪರಿಸ್ಥಿತಿಯ ಬಗ್ಗೆ ರಶೀದ್ ಚಿಂತೆಗೀಡಾಗಿದ್ದಾರೆ. ಯಾಕೆಂದರೆ ದೇಶದಿಂದ ಹೊರಕ್ಕೆ ತನ್ನ ಕುಟುಂಬವನ್ನು ತರಲು ರಶೀದ್‌ಗೆ ದಾರಿ ತೋರುತ್ತಿಲ್ಲ. ಕಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಗತ್ತಿನ ಎಲ್ಲಾ ವಿಮಾನ ನಿಲ್ದಾಣಗಳ ಮೇಲೆ ಪರಿಣಾಮ ಬೀರುತ್ತಿದೆ. ಅಫ್ಘಾನಿಸ್ತಾನದಲ್ಲಿ ಸದ್ಯ ಎದುರಾಗಿರುವ ಪರಿಸ್ಥಿತಿಯಿಂದಾಗಿ ಹೀಗಾಗಿದೆ ಎಂದು ಪೀಟರ್ಸನ್ ಹೇಳಿದ್ದಾರೆ.

ಸ್ಕೈ ಸ್ಪೋರ್ಟ್ಸ್ ಜೊತೆ ಮಾತನಾಡಿದ ಪೀಟರ್ಸನ್
"ರಶೀದ್ ಖಾನ್ ತವರು ದೇಶವಾದ ಅಫ್ಘಾನಿಸ್ತಾನದಲ್ಲಿ ಬಹಳಷ್ಟು ಸಂಗತಿಗಳು ನಡೆಯುತ್ತಿವೆ. ಸುದೀರ್ಘ ಸಮಯ ಮಾತನಾಡಿದ ನಾವು ಇದರ ಬಗ್ಗೆ ಚರ್ಚಿಸಿದ್ದೇವೆ. ರಶೀದ್‌ಗೆ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಚಿಂತೆಯಿದೆ. ಅವರಿಗೆ ಅವರ ಕುಟುಂಬವನ್ನು ಅಫ್ಘಾನಿಸ್ತಾನದಿಂದ ಹೊರಗೆ ಕರೆತರಲು ಆಗುತ್ತಿಲ್ಲ. ಅಫ್ಘಾನ್‌ನಲ್ಲಿ ಅಂಥ ಪರಿಸ್ಥಿತಿ ನಿರ್ಮಾಣವಾಗಿದೆ," ಎಂದು ಸ್ಕೈ ಸ್ಪೋರ್ಟ್ಸ್ ಜೊತೆ ಮಾತನಾಡಿದ ಪೀಟರ್ಸನ್ ಹೇಳಿದ್ದಾರೆ. ಕಳೆದ ತಿಂಗಳು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಐಪಿಎಲ್ ಇನ್ನುಳಿದ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿತ್ತು. ಐಪಿಎಲ್ 2021ನೇ ಆವೃತ್ತಿಯ ಇನ್ನುಳಿದ 31 ಪಂದ್ಯಗಳ ಯುಎಇಯಲ್ಲಿ ನಡೆಯಲಿದೆ ಎಂದು ತಿಳಿಸಿತ್ತು.

ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿ
ಭಾರತದಲ್ಲಿ ಏಪ್ರಿಲ್ 9ರಂದು ಆರಂಭಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್ ಅರ್ಧಕ್ಕೆ ನಿಲ್ಲಿಸಲ್ಪಟ್ಟಿತ್ತು. ಕೋವಿಡ್-19 ಸೋಂಕಿನ ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ನಗದು ಶ್ರೀಮಂತ ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸುವ ನಿರ್ಧಾರಕ್ಕೆ ಬಿಸಿಸಿಐ ಬಂದಿತ್ತು. 29 ಪಂದ್ಯಗಳು ಮೊದಲ ಹಂತದ ಐಪಿಎಲ್‌ನಲ್ಲಿ ಮುಕ್ತಾಯಗೊಂಡಿದ್ದು, ಇನ್ನು 31 ಪಂದ್ಯಗಳು ದ್ವಿತೀಯ ಹಂತದಲ್ಲಿ ನಡೆಯಲಿವೆ. ಆ ಪಂದ್ಯಗಳು ಇನ್ನು ಯುಎಇಯಲ್ಲಿ ನಡೆಯಲಿವೆ. ಸುಮಾರು 27 ದಿನಗಳ ಕಾಲ ದ್ವಿತೀಯ ಹಂತದ ಐಪಿಎಲ್ ನಡೆಯಲಿದೆ. ಐಪಿಎಲ್ ದ್ವಿತೀಯ ತಂಡದ ಪಂದ್ಯದಲ್ಲಿ ಆರಂಭಿಕವಾಗಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿವೆ. ನಡೆಯಲಿರುವ 31 ಪಂದ್ಯಗಳಲ್ಲಿ 13 ದುಬೈನಲ್ಲಿ, 10 ಶಾರ್ಜಾದಲ್ಲಿ ಮತ್ತು 8 ಪಂದ್ಯಗಳು ಅಬುಧಾಬಿ ಸ್ಟೇಡಿಯಂಗಳಲ್ಲಿ ನಡೆಯಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications