Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಶೀದ್ ಖಾನ್‌ ನೋ ಲುಕ್ ಶಾಟ್ ವೈರಲ್

ಯುಎಇನಲ್ಲಿ ಸದ್ಯ ಏಷ್ಯಾ ಕಪ್ ಟಿ20 ಕ್ರಿಕೆಟ್‌ ಟೂರ್ನಿ ನಡೆಯುತ್ತಿದೆ. ದುಬೈನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ಸೋಲು ಕಂಡಿದೆ. ಬಾಂಗ್ಲಾದೇಶದ ಸೂಪರ್ 4ಗೆ ಅರ್ಹತೆ ಪಡೆಯುವ ಆಸೆ ಜೀವಂತವಾಗಿದೆ. ಈ ಪಂದ್ಯದಲ್ಲಿ ರಶೀದ್ ಖಾನ್‌ ನೋ ಲುಕ್ ಶಾಟ್ ಬಾರಿಸಿದರು. ಇದರ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟ್ ಮಾಡಿತು. ಈ ವೇಳೆ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 154 ರನ್‌ ಕಲೆ ಹಾಕಿತು. ಬಾಂಗ್ಲಾ ಪರ ತಂಜಿದ್ ಹಸನ್ 31 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ನೆರವಿನಿಂದ 52 ರನ್‌ ಬಾರಿಸಿ ತಂಡಕ್ಕೆ ಆಧರವಾದರು. ಆಫ್ಘಾನ್‌ ಪರ ರಶೀದ್ ಖಾನ್‌ ಹಾಗೂ ನೂರ್ ಅಹ್ಮದ್‌ ತಲಾ 2 ವಿಕೆಟ್ ಪಡೆದರು. ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡದ ಪರ ರಹಮಾನುಲ್ಲಾ ಗುರ್ಬಾಜ್ (35), ಅಜ್ಮತುಲ್ಲಾ ಒಮರ್ಜಾಯ್ (30) ತಂಡಕ್ಕೆ ಕೊಂಚ ಆಧಾರವಾದರು. ಆಫ್ಘನ್‌ ನಿಗದಿತ ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು.

Afghanistan s Rashid Khan s No-Look Six Goes Viral in Asia Cup Match Against Bangladesh

ಆಫ್ಘನ್‌ ಬ್ಯಾಟಿಂಗ್ ಮಾಡುವಗ ಅಜ್ಮತುಲ್ಲಾ 16ನೇ ಓವರ್‌ನಲ್ಲಿ ಔಟ್ ಆದರು. ಆಗ ರಶೀದ್ ಖಾನ್ ಕ್ರೀಸ್‌ಗೆ ಬಂದರು. ಅಫ್ಘಾನಿಸ್ತಾನಕ್ಕೆ ಪಂದ್ಯವನ್ನು ಗೆಲ್ಲಲು 24 ಎಸೆತಗಳಲ್ಲಿ 45 ರನ್‌ ಅವಶ್ಯಕತೆ ಇತ್ತು. 17ನೇ ಓವರ್‌ನ್ನು ಬಾಂಗ್ಲಾ ತಂಡದ ಮಾರಕ ಬೌಲರ್‌ ಮುಸ್ತಾಫಿಜುರ್ ರಹಮಾನ್‌ ಬೌಲಿಂಗ್ ಮಾಡಲು ಬಂದರು. ಆಗ ಮೊದಲ ಎಸೆತದಲ್ಲಿ ರಶೀದ್ ಖಾನ್‌ ನೋ ಲುಕ್ ಶಾಟ್ ಬಾರಿಸಿದರು.

ಮುಸ್ತಾಫಿಜುರ್ ಅವರು ಎಸೆದ ಬ್ಯಾಕ್‌ ಆಫ್ ಲೆಂತ್ ಡಿಲಿವರಿ ಸ್ಟಂಪ್ಸ್‌ ಮೇಲೆ ಇತ್ತು. ಚೆಂಡನ್ನು ನೋಡುತ್ತಲೇ ರಶೀದ್‌ ಕೊಂಚ್ ಬೆಂಡ್ ಆಗಿ ಶಾಟ್ ಬಾರಿಸಲು ಆಂಗಲ್ ಕ್ರಿಯೇಟ್ ಮಾಡಿಕೊಂಡರು. ಚೆಂಡು ತಮ್ಮ ಬಳಿ ಬರುತ್ತಲೇ ಚೆಂಡಿಗೆ ಫೆನ್‌ ಲೆಗ್‌ ಮೇಲಿನಿಂದ ಸಿಕ್ಸರ್ ಬಾರಿಸುವಲ್ಲಿ ಯಶಸ್ವಿಯಾದರು. ಈ ಶಾಟ್‌ ಕಂಡು ಅಭಿಮಾನಿಗಳು ಫುಲ್ ಖುಷ್ ಆದರು. ಈ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಅಫ್ಘಾನಿಸ್ತಾನ ಸೂಪರ್ 4 ಲೆಕ್ಕಾಚಾರ

ಅಫ್ಘಾನಿಸ್ತಾನದ ಸೂಪರ್ 4 ಹಂತ ತಲುಪುವ ಕನಸು ಇನ್ನು ಹಸಿರಾಗಿದೆ. ಗುರುವಾರ ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ ಮಹತ್ವದ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಆಫ್ಘನ್ ಜಯ ಸಾಧಿಸಿದರೆ, ಸುಲಭವಾಗಿ ಸೂಪರ್ 4 ಹಂತ ತಲುಪಲಿದೆ. ಕಾರಣ ಆಫ್ಘನ್‌ ನೆಟ್‌ ರನ್‌ ರೇಟ್‌ ಉತ್ತಮವಾಗಿದೆ. ಆಗ ಶ್ರೀಲಂಕಾ ಹಾಗೂ ಬಾಂಗ್ಲಾದೇಶ, ಆಫ್ಘನ್ ತಲಾ 4 ಅಂಕ ಗಳಿಸಿದಂತೆ ಆಗುತ್ತದೆ. ರನ್‌ ರೇಟ್‌ ಆಧಾರದ ಮೇಲೆ ಎರಡು ತಂಡಗಳು ಸೂಪರ್ 4 ಹಂತ ತಲುಪಲಿವೆ.

Story first published: Wednesday, September 17, 2025, 13:05 [IST]
Other articles published on Sep 17, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+