Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ಟಿ20 ವಿಶ್ವಕಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಅಫ್ಘಾನಿಸ್ತಾನ; ಮೊದಲ ಬಾರಿಗೆ ಸೆಮಿಫೈನಲ್‌!

ಜೂನ್‌ 25 ಮಂಗಳವಾರ, ಇತ್ತೀಚಿಗಿನ ವರ್ಷಗಳಲ್ಲಿ ಅಫ್ಘಾನಿಸ್ತಾನ ತಂಡವು ವಿಶ್ವ ಕ್ರಿಕೆಟ್‌ನಲ್ಲಿ ಬಲಿಷ್ಠವಾಗಿ ಬೆಳೆಯುತ್ತಿದೆ. ಆಗ್ರ ತಂಡಗಳನ್ನು ಬಗ್ಗು ಬಡಿದಿರುವ ಅಫ್ಘಾನಿಸ್ತಾನ ತಾನು ಕೂಡ ಅಪಾಯಕಾರಿ ಎಂದು ತೋರಿಸಿದೆ.

ಪ್ರಸ್ತುತ ನಡೆಯುತ್ತಿರುವ 2024ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಫ್ಘಾನಿಸ್ತಾನ ಅದ್ಭುತ ಪ್ರದರ್ಶನ ನೀಡುತ್ತಿದೆ. ಇಂದು ನಡೆದ ಟಿ20 ವಿಶ್ವಕಪ್‌ನ ಸೂಪರ್‌-8ರ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ 8 ರನ್‌ಗಳ ರೋಚಕ ಜಯ ದಾಖಲಿಸಿದೆ. ಈ ಮೂಲಕ ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ ಮೊದಲ ಬಾರಿಗೆ ಅಫ್ಘಾನಿಸ್ತಾನ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಅರ್ಹತೆ ಪಡೆದಿರುವ ದಾಖಲೆ ಮಾಡಿದೆ.

Afghanistan semi-final for the first time in T20 World Cup history

ಮತ್ತೊಂದೆಡೆ ಅಫ್ಘಾನಿಸ್ತಾನದ ಈ ಗೆಲುವಿನ ಬಳಿಕ ಆಸ್ಟ್ರೇಲಿಯಾ ಟಿ20 ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದಿದೆ. ಅಫ್ಘಾನಿಸ್ತಾನ ಮತ್ತು ಟೀಮ್‌ ಇಂಡಿಯಾ ಗುಂಪು-1 ರಿಂದ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಇದೀಗ ಭಾರತೀಯ ಕಾಲಮಾನದ ಪ್ರಕಾರ ಜೂನ್ 27ರ ಬೆಳಗ್ಗೆ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಸೆಣಸಾಡಲಿವೆ.

ಅಫ್ಘಾನಿಸ್ತಾನ ಅಪಾಯಕಾರಿ ಬೌಲಿಂಗ್‌

ಅಫ್ಘಾನಿಸ್ತಾನ ಸೆಮಿಫೈನಲ್‌ಗೆ ಆರ್ಹತೆ ಪಡೆಯಲು ತಂಡದ ಬೌಲಿಂಗ್‌ ಶಕ್ತಿ ಬಹುಮುಖ್ಯ ಕಾರಣವಾಗಿದೆ. ಏಕೆಂದರೆ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮುನ್ನ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಅಫ್ಘಾನಿಸ್ತಾನ ಬೌಲರ್‌ಗಳು ಕಟ್ಟಿ ಹಾಕಿದ್ದರು. ಪರಿಣಾಮ ಅಫ್ಘಾನಿಸ್ತಾನ ಎದುರು ಕಾಂಗೂರು ಪಡೆ ಹೀನಾಯವಾಗಿ ಸೋತಿತು.

ಇದೀಗ ಬಾಂಗ್ಲಾದೇಶ ವಿರುದ್ಧದ ಕಡಿಮೆ ಸ್ಕೋರಿಂಗ್‌ ಪಂದ್ಯದಲ್ಲೂ ಅಫ್ಘಾನಿಸ್ತಾನ ತನ್ನ ಅದ್ಭುತ ಬೌಲಿಂಗ್‌ ಪ್ರದರ್ಶನದ ಮೂಲಕ ವಿಶ್ವ ಕ್ರಿಕೆಟ್‌ನಲ್ಲ ಪ್ರಾಬಲ್ಯ ಹೊಂದಲು ಮುಂದಾಗಿದೆ. ಕೇವಲ 105 ರನ್‌ಗಳಿಗೆ ಬಾಂಗ್ಲಾವನ್ನು ಅಫ್ಘಾನಿಸ್ತಾನ ಆಲೌಟ್‌ ಮಾಡಿ ಪಂದ್ಯವನ್ನು ಗೆದ್ದು ಬೀಗಿದೆ.

ಅಫ್ಘಾನಿಸ್ತಾನ ಪರ ವೇಗದ ಬೌಲರ‌ ನವೀನ್ ಉಲ್ ಹಕ್ ಮತ್ತು ನಾಯಕ, ಸ್ಪಿನ್ನರ್‌ ರಶೀದ್ ಖಾನ್ ತಲಾ 4 ವಿಕೆಟ್ ಉರುಳಿಸಿ ತಂಡದ ಗೆಲುವಿಗೆ ಮಹತ್ತರ ಕೊಡುಗೆ ನೀಡಿದ್ದಾರೆ.

Story first published: Tuesday, June 25, 2024, 12:32 [IST]
Other articles published on Jun 25, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+