T20 World Cup 2024: ಸೂಪರ್-8 ಸುತ್ತು ಪ್ರವೇಶಿಸಿರುವ ಅಫ್ಘಾನಿಸ್ತಾನಕ್ಕೆ ಬಿಗ್ ಶಾಕ್; ಸ್ಟಾರ್ ಸ್ಪಿನ್ನರ್ ಟೂರ್ನಿಯಿಂದ ಔಟ್!
ಜೂನ್ 15 ಶನಿವಾರ, ಐಸಿಸಿ 2024ರ ಟಿ20 ವಿಶ್ವಕಪ್ ಟೂರ್ನಿಯ ಗುಂಪು ಹಂತವು ಅಂತಿಮ ಘಟ್ಟದಲ್ಲಿವೆ. ಬಲಿಷ್ಠ ತಂಡಗಳು ಉತ್ತಮ ಆರಂಭ ಪಡೆಯದ ಕಾರಣ ಟೂರ್ನಿಯಿಂದ ಹೊರಗುಳಿದಿವೆ.
ಈಗಾಗಲೇ ಮಾಜಿ ಟಿ20 ವಿಶ್ವಕಪ್ ಚಾಂಪಿಯನ್‌ಗಳಾದ ಪಾಕಿಸ್ತಾನ, ಶ್ರೀಲಂಕಾ ತಂಡಗಳು ಟೂರ್ನಿಯಿಂದ ಹೊರಗುಳಿದಿವೆ. ಇದರೊಂದಿಗೆ ಬಲಿಷ್ಠ ನೂಜಿಲೆಂಡ್ ಕೂಡ ಟಿ20 ವಿಶ್ವಕಪ್ ಗೆಲ್ಲುವ ರೇಸ್‌ನಿಂದ ದೂರ ಸರಿದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್ ಕೂಡ ಟೂರ್ನಿಯಿಂದ ಹೊರ ಬೀಳುವ ಭೀತಿಯಲ್ಲಿದೆ.

ಈ ಎಲ್ಲದರ ಮಧ್ಯೆ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಅಫ್ಘಾನಿಸ್ತಾನ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಗೆದ್ದು 'ಸಿ' ಗುಂಪಿನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಹೀಗಾಗಿ ಸೂಪರ್-8 ಸುತ್ತಿಗೂ ಆರ್ಹತೆ ಪಡೆದುಕೊಂಡಿದೆ.
ಆಟಗಾರರು ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡು ವಿಭಾಗದಲ್ಲೂ ಅಫ್ಘಾನಿಸ್ತಾನ ತಂಡದ ಗೆಲುವಿಗೆ ಮೌಲ್ಯಯುತವಾದ ಕೊಡುಗೆ ನೀಡುತ್ತಿದ್ದಾರೆ. ಇದೀಗ ಯಶಸ್ವಿನ ಹಾದಿಯಲ್ಲಿ ಸಾಗುತ್ತಿರುವ ಅಫ್ಘಾನಿಸ್ತಾಕ್ಕೆ ಬಿಗ್ ಶಾಕ್ ಎದುರಾಗಿದೆ.
ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಬೆರಳಿನ ಗಾಯದ ಸಮಸ್ಯೆಯಿಂದಾಗಿ ಟಿ20 ವಿಶ್ವಕಪ್‌ನ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅಫ್ಘಾನಿಸ್ತಾನವು ಮುಜೀಬ್ ಬದಲಿಗೆ ಸ್ಫೋಟಕ ಆರಂಭಿಕ ಬ್ಯಾಟರ್ ಹಜರತುಲ್ಲಾ ಝಜೈ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಶುಕ್ರವಾರ ಮಧ್ಯಾಹ್ನ ಪಪುವಾ ನ್ಯೂಗಿನಿಯಾ ವಿರುದ್ಧ ಅಫ್ಘಾನಿಸ್ತಾನ ಜಯಗಳಿಸಿದ ಕೆಲವೇ ಗಂಟೆಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬದಲಾವಣೆಯನ್ನು ದೃಢಪಡಿಸಿದೆ. ಐಸಿಸಿ ಈವೆಂಟ್ ಟೆಕ್ನಿಕಲ್ ಕಮಿಟಿಯು ಝಜೈ ಅವರನ್ನು ಅಫ್ಘಾನಿಸ್ತಾನ ತಂಡದಲ್ಲಿ ಸೇರಿಸಿಕೊಳ್ಳಲು ಅನುಮೋದಿಸಿದೆ. ಇದು ತಂಡದ ರಚನೆಯಲ್ಲಿ ಕಾರ್ಯತಂತ್ರದ ಬದಲಾವಣೆಯಾಗಿದೆ.
ಐಸಿಸಿ ಪ್ರಕಟಣೆ
ಈ ಬಗ್ಗೆ ಶನಿವಾರ ಬಿಡುಗಡೆ ಮಾಡಿರುವ ಐಸಿಸಿ ಪ್ರಕಟಣೆಯಲ್ಲಿ , 'ಐಸಿಸಿ ಪುರುಷರ ಟಿ20 ವಿಶ್ವಕಪ್ 2024ರ ಈವೆಂಟ್ ತಾಂತ್ರಿಕ ಸಮಿತಿಯು ಅಫ್ಘಾನಿಸ್ತಾನ ತಂಡದಲ್ಲಿ ಮುಜೀಬುರ್ ರೆಹಮಾನ್ ಬದಲಿಗೆ ಹಜರತುಲ್ಲಾ ಝಜೈ ಅವರನ್ನು ಸೇರಿಸಲು ಅನುಮೋದಿಸಿದೆ' ಎಂದು ತಿಳಿಸಿದೆ.
ಉಗಾಂಡ ವಿರುದ್ಧದ ಅಫ್ಘಾನಿಸ್ತಾನದ ಆರಂಭಿಕ ಪಂದ್ಯದಲ್ಲಿ ಆಡಿದ ಬಳಿಕ ಮುಜೀಬ್ ಮುಜೀಬ್ ಅವರ ಬಲಗೈ ತೋರು ಬೆರಳಿಗೆ ಗಾಯವಾಗಿತ್ತು. ಹೀಗಾಗಿ ಮುಂದಿನ ಪಂದ್ಯವನ್ನು ಆಡಲು ಸಾಧ್ಯವಾಗಿರಲಿಲ್ಲ.
ಮುಜೀಬ್ ಅನುಪಸ್ಥಿತಿಯು ತಂಡಕ್ಕೆ ಹೊಡೆತ ನೀಡಬಹುದು. ಆದರೆ ನೂರ್ ಅಹ್ಮದ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ಅಫ್ಘಾನಿಸ್ತಾನ ಈಗಾಗಲೇ ಪರಿಸ್ಥಿತಿಯನ್ನು ನಿಭಾಯಿಸಿದೆ. ಅಫ್ಘಾನಿಸ್ತಾನ ಪರ ಕಳೆದ ಎರಡು ಪಂದ್ಯಗಳಲ್ಲಿ ನೂರ್ ಅದ್ಭುತ ಪ್ರದರ್ಶನ ನೀಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ನೂರ್ ಯಾವುದೇ ವಿಕೆಟ್ ಪಡೆಯದಿದ್ದರೂ, ನೂರ್ ಪಪುವಾ ನ್ಯೂಗಿನಿಯಾ ವಿರುದ್ಧ ತಮ್ಮ ಬೌಲಿಂಗ್‌ನಲ್ಲಿ ಗಮನಾರ್ಹ ಪ್ರಭಾವ ಬೀರಿದ್ದರು. ನಾಲ್ಕು ಓವರ್‌ಗಳಲ್ಲಿ 14 ಕ್ಕೆ 1 ವಿಕೆಟ್ ಪಡೆದಿದ್ದರು.
ತಂಡಕ್ಕೆ ಸೇರ್ಪಡೆಗೊಂಡ ಝಜೈ ಅವರು ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಈ ವರ್ಷದ ಫೆಬ್ರವರಿಯಿಂದ ಝಜೈ ಯಾವುದೇ ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲವಾದರೂ, ಕಳೆದ ಟಿ20 ವಿಶ್ವಕಪ್‌ನಲ್ಲಿ ಅವರ ಅನುಭವವು ಅಫ್ಘಾನಿಸ್ತಾನದ ಬ್ಯಾಟಿಂಗ್ ಲೈನ್‌ಅಪ್ ಅನ್ನು ಬಲಪಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications