ENG vs AFG: ಸೋಲುವ ಪಂದ್ಯವನ್ನು ಗೆದ್ದು ಬೀಗಿದ ಅಫ್ಘಾನಿಸ್ತಾನ ಇತಿಹಾಸ
ಅಫ್ಘಾನಿಸ್ತಾನ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಇತಿಹಾಸ ನಿರ್ಮಿಸಿದೆ. ಕ್ರಿಕೆಟ್ ಜನಕರಿಗೆ ಮತ್ತೊಮ್ಮೆ ಶಾಕ್ ನೀಡಿದೆ. 2023ರ ಏಕದಿನ ವಿಶ್ವಕಪ್‌ನಲ್ಲಿ ನೀಡಿದ ಪ್ರದರ್ಶನವನ್ನೇ ಅಫ್ಘಾನಿಸ್ತಾನ ಮತ್ತೊಮ್ಮೆ ನೀಡಿ ಅಬ್ಬರಿಸಿದೆ. ಲಾಹೋರ್ ಅಂಗಳದಲ್ಲಿ ಮನಮೋಹಕ ಆಟವನ್ನು ಆಡಿದ ಅಫ್ಘಾನಿಸ್ತಾನ ಇತಿಹಾಸ ನಿರ್ಮಿಸಿದೆ. ಐಸಿಸಿ ಮೆಗಾ ಟೂರ್ನಿಯಲ್ಲಿ ಎರಡನೇ ಬಾರಿಗೆ ಇಂಗ್ಲೆಂಡ್ ತಂಡವನ್ನು ಮಣಿಸಿ ಅಬ್ಬರಿಸಿದೆ. ಸಂಘಟಿತ ಆಟವನ್ನು ಆಡಿದ ಆಫ್ಘಾನಿಸ್ತಾನ ಬುಧವಾರ ಇಂಗ್ಲೆಂಡ್ ತಂಡವನ್ನು "ಬಿ" ಗುಂಪಿನ ಪಂದ್ಯದಲ್ಲಿ 8 ರನ್‌ಗಳಿಂದ ಮಣಿಸಿದೆ.
ಟಾಸ್ ಗೆದ್ದ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 325 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ 49.5 ಓವರ್‌ಗಳಲ್ಲಿ 317 ರನ್ ಸೇರಿಸಿ ಸೋಲು ಕಂಡಿದೆ. ಈ ಗೆಲುವಿನ ಮೂಲಕ ಅಫ್ಘಾನಿಸ್ತಾನ ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಇಂಗ್ಲೆಂಡ್ ಟೂರ್ನಿಯಲ್ಲಿ ಎರಡನೇ ಸೋಲಿನ ಕಹಿಯನ್ನು ಅನುಭವಿಸಿದೆ.

ಡೆತ್ ಓವರ್‌ನಲ್ಲಿ ಚಮತ್ಕಾರ
ಪಂದ್ಯದ 45ನೇ ಓವರ್ ನೋಡಿದಾಗ ಇಂಗ್ಲೆಂಡ್ ಈ ಪಂದ್ಯವನ್ನು ಸುಲಭವಾಗಿ ಗೆಲ್ಲುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಈ ವೇಳೆ ಸೆಟಲ್ ಆದ ಜೋ ರೂಟ್ 114 ಹಾಗೂ ಜೇಮಿ ಓವರ್‌ಟನ್ 21 ರನ್ ಬಾರಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಆಗ ತಂಡದ ಗೆಲುವಿಗೆ 30 ಎಸೆತಗಳಲ್ಲಿ 48 ರನ್ ಅವಶ್ಯಕತೆ ಇತ್ತು. ಕೈಯಲ್ಲಿ 4 ವಿಕೆಟ್‌ಗಳು ಬಾಕಿ ಇತ್ತು. ಈ ಹಂತದಲ್ಲಿ ಇಂಗ್ಲೆಂಡ್ ಈ ಪಂದ್ಯವನ್ನು ಸುಲಭವಾಗಿ ಗೆದ್ದು ಬಿಡುತ್ತದೆ ಎಂದೇ ಎಲ್ಲರು ಭಾವಿಸಿದ್ದರು.
ಆದರೆ 47ನೇ ಓವರ್‌ನ ಐದನೇ ಎಸೆತದಲ್ಲಿ ರೂಟ್ ವಿಕೆಟ್ ಬೀಳುತ್ತಿದ್ದಂತೆ ಸಮೀಕರಣ ಎಲ್ಲ ಬದಲಾಯಿತು. ಸುಲಭಾಗಿ ಪಂದ್ಯವನ್ನು ಗೆಲ್ಲುವ ಪಂದ್ಯವನ್ನು ಇಂಗ್ಲೆಂಡ್ ಕೈ ಚೆಲ್ಲಿತು. ಡೆತ್ ಓವರ್‌ಗಳಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡದ ಇಂಗ್ಲೆಂಡ್ ಅನುಭವಿಗಳು ನಿರಾಸೆ ಅನುಭವಿಸಿದರು. ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಿದ ಅಫ್ಘಾನಿಸ್ತಾನ ಅಬ್ಬರಿಸಿತು.
ಜೋ ರೂಟ್ ಶತಕ ವ್ಯರ್ಥ
ಸವಾಲಿನ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟರ್ ಜೋ ರೂಟ್ ಅಬ್ಬರಿಸಿದರು. ಇವರು 111 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಸಹಾಯದಿಂದ 120 ರನ್ ಸಿಡಿಸಿ ಮಿಂಚಿದರು. ಆದರೆ ಇವರ ಶತಕ ತಂಡದ ಗೆಲುವಿಗೆ ನೆರವಾಗಲಿಲ್ಲ.
ಅಫ್ಘಾನಿಸ್ತಾನ ಪರ ಅಜ್ಮತುಲ್ಲಾ ಒಮರ್ಜೈ ಐದು ವಿಕೆಟ್ ಪಡೆದು ಬೀಗಿದರು. ಮೊಹಮ್ಮದ್ ನಬಿ 2 ವಿಕೆಟ್ ಕಬಳಿಸಿದರು.

ಇಬ್ರಾಹಿಂ ಜರ್ದಾನ್ ಶತಕ
ಅಫ್ಘಾನಿಸ್ತಾನ ತಂಡದ ಆರಂಭಿಕ ಆಟಗಾರ ಇಬ್ರಾಹಿಂ ಜರ್ದಾನ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ತಮ್ಮ ಅನುಭವ ಬ್ಯಾಟ್ ಬಳಿಸಿ ಬ್ಯಾಟ್ ಮಾಡಿದ ಇಬ್ರಾಹಿಂ ಅಫ್ಘಾನಿಸ್ತಾನ ತಂಡದ ರನ್ ಹಿಗ್ಗಿಸುವಲ್ಲಿ ಶ್ರಮಿಸಿದರು. ಇವರು 146 ಎಸೆತಗಳಲ್ಲಿ 12 ಬೌಂಡರಿ, 6 ಸಿಕ್ಸರ್ ಸಹಾಯದಿಂದ 177 ರನ್ ಸಿಡಿಸಿ ಅಬ್ಬರಿಸಿತು. ಈ ಮೂಲಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರ ಅಮೋಘ ಆಟ ಹಾಗೂ ಜವಾಬ್ದಾರಿಯುತ ಜೊತೆಯಾಟಗಳ ನೆರವಿನಿಂದ ಅಫ್ಘಾನಿಸ್ತಾನ ಬೃಹತ್ ಮೊತ್ತ ಕಲೆ ಹಾಕಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications