AFG vs SA: 2024ರಲ್ಲಿ ಅಫ್ಘಾನಿಸ್ತಾನ ತಂಡದ ಮತ್ತೊಂದು ಸಾಧನೆ: ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ಜಯ
ಆ ದೇಶದಲ್ಲಿ ಕ್ರಿಕೆಟ್ ನಿಷೇಧಿಸಬೇಕು ಎಂಬ ಚಿಂತೆಯನ್ನು ಅಲ್ಲಿನ ತಾಲೀಬಾನಿ ಸರ್ಕಾರ ಮಾಡುತ್ತಿದೆ ಎಂಬ ಮಾಹಿತಿ, ಇಗಷ್ಟೇ ಕೆಲವು ದಿನಗಳ ಹಿಂದೆ ತಿಳಿದಿತ್ತು. ಇದಾಗಿ ಬೆರಳೆಣಿಕೆ ದಿನಗಳು ಕಳೆದಿರಬಹುದು, ಈ ಮಧ್ಯೆ ಅಫ್ಘಾನಿಸ್ತಾನ ತನ್ನ ತಾಕತ್ತು ಏನು? ತನ್ನ ಕ್ಷಮತೆ ಏನು ಎಂಬುದನ್ನು ಮತ್ತೊಮ್ಮೆ ಸಾರಿ ಹೇಳಿದೆ.
ಈಗಾಗಲೇ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪ್ರವೇಶಿಸಿದ್ದ ಅಫ್ಘಾನಿಸ್ತಾನ, ಈಗ ಏಕದಿನ ಪಂದ್ಯದಲ್ಲೂ ತನ್ನ ಅಮೋಘ ಪ್ರದರ್ಶನವನ್ನು ಮುಂದುವರೆಸಿದೆ. ಈ ಮೂಲಕ ಶಾರ್ಜ್‌ದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಆಫ್ಗನ್ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಏಳನೇ ಕನಿಷ್ಠ ಸ್ಕೋರ್
ಈ ವರ್ಷ ನಿಜಕ್ಕೂ ಅಫ್ಘಾನಿಸ್ತಾನ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣ ಅಕ್ಷಶರದಲ್ಲಿ ಬರೆದಿಡುವ ವರ್ಷ. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ ಆಫ್ಗನ್ ಭರ್ಜರಿ ಜಯ ದಾಖಲಿಸಿದೆ. ದಕ್ಷಿಣ ಆಫ್ರಿಕಾ ತನ್ನ ಏಕದಿನ ಕ್ರಿಕೆಟ್ ಇತಿಹಾಸದ ಏಳನೆ ಕನಿಷ್ಠ ರನ್ ಕಲೆ ಹಾಕಿದೆ. ದಕ್ಷಿಣ ಆಫ್ರಿಕಾ ಪರ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.
ಮುಲ್ಡರ್ ಅರ್ಧಶತಕ
ಒಂದು ಹಂತದಲ್ಲಿ ದಕ್ಷಿಣ ಆಫ್ರಿಕಾ 36 ರನ್ ಆಗುವಷ್ಟರಲ್ಲಿ ಪ್ರಮುಖ ಏಳು ವಿಕೆಟ್ ಕಳೆದುಕೊಂಡು ದುಸ್ಥಿತಿಯಲ್ಲಿತ್ತು. ವಿಯಾನ್ ಮುಲ್ಡರ್ ಒಂದು ತುದಿಯಲ್ಲಿ ನೆಲಕಚ್ಚಿ ಬ್ಯಾಟಿಂಗ್ ನಡೆಸಿದರು. ಇವರ ಅಮೋಘ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ 100 ರನ್‌ಗಳ ಗಡಿ ದಾಟಿತು. ವಿಯಾನ್ ಮುಲ್ಡರ್ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 52 ರನ್ ಬಾರಿಸಿದರು.

ಅಫ್ಘಾನಿಸ್ತಾನ ತಂಡದ ಪರ ಫಜಲ್ಹಕ್ ಫಾರೂಕಿ ಹಾಗೂ ಗಜನ್ಫರ್ ಮೊನಚಾದ ದಾಳಿ ನಿರ್ವಹಿಸಿದರು. ಇವರ ಎಸೆತಗಳಿಗೆ ಉತ್ತರ ನೀಡಲು ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ಹೈರಾಣಾದರು. 35 ರನ್ ನೀಡಿ ನಾಲ್ಕು ವಿಕೆಟ್ ಪಡೆದರೆ, ಗಜನ್ಫರ್ 20 ರನ್ ನೀಡಿ ಮೂರು ವಿಕೆಟ್ ಉರುಳಿಸಿದರು.
ಕಳಪೆ ಆರಂಭ
ಸಾಧಾರಣ ಗುರಿಯನ್ನು ಹಿಂಬಾಲಿಸಿದ ಅಫ್ಘಾನ ತಂಡದ ಆರಂಭ ಸಹ ಕಳಪೆ ಆಗಿತ್ತು. ಅಫ್ಘಾನ್ ಸಹ 38 ರನ್ ಆಗುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಒಂದು ಹಂತದಲ್ಲಿ ಅಫ್ಘಾನಿಸ್ತಾನಕ್ಕೂ ಈ ಸ್ಕೋರ್ ಸವಾಲಿನ ರೂಪದಲ್ಲಿ ಕಾಣಿಸಿಕೊಂಡಿತು. ಅಜ್ಮತುಲ್ಲಾ ಒಮರ್ಜಾಯ್ (ಅಜೇಯ 25) ಹಾಗೂ ಗುಲ್ಬದಿನ್ ನೈಬ್ (ಅಜೇಯ 34) ಜೋಡಿ ಅಮೋಘ ಆಟದ ಪ್ರದರ್ಶನ ನೀಡುತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ದಕ್ಷಿಣ ಆಫ್ರಿಕಾ ಬೌಲರ್‌ಗಳು ಎಡವಿದರು. ಅಂತಿಮವಾಗಿ ಈ ಜೋಡಿ ತಂಡಕ್ಕೆ ಗೆಲುವಿನ ಹಾರ ತೊಡಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications