Asia Cup T20: ಅಫ್ಘಾನಿಸ್ತಾನ ಶುಭಾರಂಭ
ಸೇದಿಕುಲ್ಲಾ ಅಟಲ್, ಅಜ್ಮತುಲ್ಲಾ ಒಮರ್ಜಾಯ್ ಬಾರಿಸಿದ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ 94 ರನ್‌ಗಳಿಂದ ಏಷ್ಯಾ ಕಪ್ ಟಿ20 ಟೂರ್ನಿಯ "ಬಿ" ಗುಂಪಿನ ಪಂದ್ಯದಲ್ಲಿ ಹಾಂಗ್‌ಕಾಂಗ್ ವಿರುದ್ಧ ಭರ್ಜರಿ ಜಯ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಆರಂಭ ಸಾಧಾರಣವಾಗಿತ್ತು. ಆರಂಭಿಕ ರಹಮಾನುಲ್ಲಾ ಗುರ್ಬಾಜ್ ಹಾಗೂ ಮಧ್ಯಮ ಕ್ರಮಾಂಕದ ಇಬ್ರಾಹಿಂ ಜದ್ರಾನ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಮೂರನೇ ವಿಕೆಟ್‌ಗೆ ಸೇದಿಕುಲ್ಲಾ ಅಟಲ್ ಹಾಗೂ ಮೊಹಮ್ಮದ್ ನಬಿ ಭರ್ಜರಿ ಜೊತೆಯಾಟವನ್ನು ನೀಡಿತು. ಈ ಜೋಡಿ 41 ಎಸೆತಗಳಲ್ಲಿ 51 ರನ್ ಗಳ ಜೊತೆಯಾಟದ ಕಾಣಿಕೆ ನೀಡಿತು. ಮೊಹಮ್ಮದ್ ನಬಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 33 ರನ್ ಸಿಡಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಗುಲ್ಬದಿನ್ ನಯೀಬ್ (5) ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. ಐದನೇ ವಿಕೆಟ್‌ಗೆ ಅಜ್ಮತುಲ್ಲಾ ಒಮರ್ಜೈ ಹಾಗೂ ಸೇದಿಕುಲ್ಲಾ ಅಟಲ್ ಅಮೋಘ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ನೆರವಾದರು. ಈ ಜೋಡಿಯ ಭರ್ಜರಿ ಜೊತೆಯಾಟದ ನೆರವಿನಿಂದ ಅಫ್ಘಾನಿಸ್ತಾನ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕುವತ್ತ ಮುಖ ಮಾಡಿತು. ಈ ಜೋಡಿ 35 ಎಸೆತಗಳಲ್ಲಿ 82 ರನ್ ಜೊತೆಯಾಟದ ಕಾಣಿಕೆ ನೀಡಿತು. ಅಜ್ಮತುಲ್ಲಾ ಒಮರ್ಜೈ 21 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್ ಸಹಾಯದಿಂದ 53 ರನ್ ಸಿಡಿಸಿದರು. ಆರಂಭಿಕ ಸೇದಿಕುಲ್ಲಾ ಅಟಲ್ 52 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 73 ರನ್ ಬಾರಿಸಿ ಮಿಂಚಿದರು. ಅಂತಿಮವಾಗಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 188 ರನ್ ಸೇರಿಸಿತು.
ರನ್ ಕಲೆ ಹಾಕಲು ಪರದಾಟ
ಹಾಂಗ್ ಕಾಂಗ್ ತಂಡದ ಸ್ಟಾರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಹಾಂಗ್ ಕಾಂಗ್ ಪರ ಬಾಬರ್ ಹಯಾತ್ (39) ಹಾಗೂ ಯಾಸಿಮ್ ಮುರ್ತಾಜ್ (16) ಮಾತ್ರ ಡಬಲ್ ಡಿಜಿಟ್ ಗಳಿಸಿದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಫ್ಘಾನಿಸ್ತಾನ ತಂಡದ ಪರ ಫಜರುಕ್ ಫಾರೂಕಿ, ಗುಲ್ಬದಿನ್ ನಯಿಬ್ ತಲಾ ಎರಡು ವಿಕೆಟ್ ಪಡೆದರು. ಉಳಿದಂತೆ ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ನೂರ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು. ಅಂತಿಮವಾಗಿ ಹಾಂಗ್ ಕಾಂಗ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 94 ರನ್ ಸಿಡಿಸಿದರು. ಅಂತಿಮವಾಗಿ ಅಫ್ಘಾನಿಸ್ತಾನ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಆಫ್ಘಾನ್ ಮೊದಲ ಗೆಲುವಿನ ಶುಭಾರಂಭ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications