ಭಾರೀ ಕುತೂಹಲ ಮೂಡಿಸಿದ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯವನ್ನು ರದ್ದಾಗೊಳಿಸಲಾಗಿದೆ. ಉಭಯ ತಂಡಗಳ ಟೆಸ್ಟ್ ಪಂದ್ಯವನ್ನು ಭಾರತದ ಗ್ರೇಟರ್ ನೋಯ್ಡಾದ ಶಹೀದ್ ವಿಜಯ್ ಸಿಂಗ್ ಪಥಿಕ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿತ್ತು.
ಮಳೆ ಮತ್ತು ಒದ್ದೆಯಾದ ಔಟ್‌ಫೀಲ್ಡ್‌ನಿಂದ ಒಂದೇ ಒಂದು ಎಸೆತ ಕಾಣದೆ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯ ರದ್ದುಗೊಂಡಿರುವುದನ್ನು ಅಂಪೈರ್‌ಗಳು ಘೋಷಿಸಿದ್ದಾರೆ. ರದ್ದಾದ ಈ ಟೆಸ್ಟ್ ಪಂದ್ಯ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. 91 ವರ್ಷಗಳ ನಂತರ ಮೊದಲ ಬಾರಿಗೆ ಭಾರತದ ನೆಲದಲ್ಲಿ ಅನಗತ್ಯ ದಾಖಲೆಯೊಂದು ಸೃಷ್ಟಿಯಾಗಿದೆ.

ಗ್ರೇಟರ್ ನೋಯ್ಡಾದ ಸ್ಟೇಡಿಯಂನಲ್ಲಿ ಕಳಪೆ ಸೌಲಭ್ಯಗಳು ಮತ್ತು ಕೆಟ್ಟ ಹವಾಮಾನದಿಂದಾಗಿ ಮೊದಲೆರಡು ದಿನ ಆಟ ನಡೆಯಲಿಲ್ಲ. ಮೂರು ಮತ್ತು ನಾಲ್ಕನೇ ದಿನ ಆಟಕ್ಕೆ ಮಳೆರಾಯ ಅಡ್ಡಿಪಡಿಸಿದನು. ಐದನೇ ದಿನವೂ ಸ್ವಲ್ಪ ಹೊತ್ತು ಬಿಡುವು ಕೊಡದ ವರುಣ ತನ್ನ ಆರ್ಭಟ ತೋರಿಸಿದನು. ಸ್ಟೇಡಿಯಂನಲ್ಲಿ ಉತ್ತಮ ಡ್ರೈನೇಜ್ ವ್ಯವಸ್ಥೆ ಇಲ್ಲದ ಕಾರಣ ಅಫ್ಘಾನ್ ಮತ್ತು ಕೀವಿಸ್ ಪಂದ್ಯದ ಒಂದೇ ಒಂದು ಎಸೆತ ಕಾಣದೆ ಅಂತ್ಯ ಕಂಡಿತ್ತು.
ಏಪ್ಯಾದಲ್ಲಿ 91 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಟ್ಟು 730 ಪಂದ್ಯಗಳು ನಡೆದಿವೆ. ಭಾರತವು 1933 ರಲ್ಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಆಯೋಜಿಸಿತ್ತು. 1933ರ ನಂತರ ಭಾರತ ಆತಿಥ್ಯ ವಹಿಸಿದ್ದ ಪಂದ್ಯವೊಂದು ಒಂದೂ ಎಸೆತ ಕಾಣದೆ ರದ್ದಾಗಿರುವುದು ಇದೇ ಮೊದಲು.
ಈ ಹಿಂದೆ 1998 ರಲ್ಲಿ ಫೈಸಲಾಬಾದ್‌ನಲ್ಲಿ ನಡೆದ ಪಾಕಿಸ್ತಾನ ಮತ್ತು ಜಿಂಬಾಬ್ವೆ ನಡುವಿನ ಟೆಸ್ಟ್ ಪಂದ್ಯವೂ ಇದೇ ರೀತಿ ಅಂತ್ಯವಾಗಿತ್ತು. ಒಟ್ಟಾರೆಯಾಗಿ ವಿಶ್ವದಾದ್ಯಂತ ಏಳು ಟೆಸ್ಟ್ ಪಂದ್ಯಗಳನ್ನು ಯಾವುದೇ ಎಸೆತ ಕಾಣದೆ ರದ್ದಾಗಿ ಇತಿಹಾಸದ ಪಟ್ಟಿಯಲ್ಲಿವೆ.
* ಇಂಗ್ಲೆಂಡ್ vs ಆಸ್ಟ್ರೇಲಿಯಾ- ಮ್ಯಾಂಚೆಸ್ಟರ್- 1890
* ಇಂಗ್ಲೆಂಡ್ vs ಆಸ್ಟ್ರೇಲಿಯಾ- ಮ್ಯಾಂಚೆಸ್ಟರ್- 1938
* ಆಸ್ಟ್ರೇಲಿಯಾ vs ಇಂಗ್ಲೆಂಡ್- ಮೆಲ್ಬೋರ್ನ್- 1970
* ನ್ಯೂಜಿಲೆಂಡ್ vs ಪಾಕಿಸ್ತಾನ- ಡ್ಯುನೆಡಿನ್- 1989
* ವೆಸ್ಟ್ ಇಂಡೀಸ್ vs ಇಂಗ್ಲೆಂಡ್- ಗಯಾನಾ- 1990
* ಪಾಕಿಸ್ತಾನ vs ಜಿಂಬಾಬ್ವೆ- ಫೈಸಲಾಬಾದ- 1998
* ನ್ಯೂಜಿಲೆಂಡ್ vs ಭಾರತ- ಡ್ಯುನೆಡಿನ್- 1998