For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ಅಫ್ಘಾನಿಸ್ತಾನ vs ಶ್ರೀಲಂಕಾ ತಂಡಗಳ ಕದನ

Afghanistan vs Sri Lanka World Cup 2019: When, where to watch

ಕಾರ್ಡಿಫ್, ಜೂನ್ 4: ಕಾರ್ಡಿಫ್‌ನ ಸೋಫಿಯಾ ಗಾರ್ಡನ್‌ನಲ್ಲಿ ಇಂದು (ಜೂನ್ 4) ವಿಶ್ವಕಪ್ 7ನೇ ಪಂದ್ಯಕ್ಕಾಗಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಎರಡೂ ತಂಡಗಳು ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಸೋತಿದ್ದರಿಂದ ಇಂದಿನ ಪಂದ್ಯದ ಗೆಲುವು ಎರಡಕ್ಕೂ ಪ್ರಮುಖವಾಗಿದೆ. ಟಾಸ್ ಗೆದ್ದಿರುವ ಅಫ್ಘಾನ್ ಬೌಲಿಂಗ್ ಆಯ್ದುಕೊಂಡಿದೆ.

ಲಂಕಾ vs ಅಫ್ಘಾನ್ ಪಂದ್ಯದ Live ಸ್ಕೋರ್‌, ಸ್ಕೋರ್‌ಕಾರ್ಡ್ ಇಲ್ಲಿದೆ

1
43650

ಜೂನ್ 1ರ ಪಂದ್ಯದಲ್ಲಿ ಶ್ರೀಲಂಕಾ ತಂಡ ನ್ಯೂಜಿಲ್ಯಾಂಡ್ ವಿರುದ್ಧ 10 ವಿಕೆಟ್ ಹೀನಾಯ ಸೋಲು ಕಂಡಿತ್ತು. ಅದೇ ದಿನ ಮತ್ತೊಂದು ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಬಲಿಷ್ಠ ಆಸ್ಟ್ರೇಲಿಯಾ ಎದುರು 7 ವಿಕೆಟ್‌ ಹಿನ್ನಡೆ ಅನುಭವಿಸಿತ್ತು. ಹೀಗಾಗಿ ಇಂದಿನ ಪಂದ್ಯದ ಮೂಲಕ 2ನೇ ಸೋಲು ಕಾಣುವ ತಂಡಕ್ಕೆ ಸೆಮಿಫೈನಲ್‌ದಾರಿ ದೂರವಾಗಲಿದೆ.

ಪಂದ್ಯವು ಭಾರತೀಯ ಕಾಲಮಾನ 3 pmಗೆ ಆರಂಭವಾಗಲಿದೆ. ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 1HD, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ತಮಿಳು, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ, ಸ್ಟಾರ್ ಸ್ಪೋರ್ಟ್ಸ್ 1 ಬಾಂಗ್ಲಾ ಚಾನೆಲ್‌ಗಳು ಮತ್ತು ಹಾಟ್‌ಸ್ಟಾರ್ ನೇರಪ್ರಸಾರಗೊಳಿಸಲಿದೆ. ಮೈಖೇಲ್‌ ಕನ್ನಡ ಪುಟದಲ್ಲೂ ವಿಶ್ವಕಪ್ ಪಂದ್ಯಗಳ ಲೈವ್ ಸ್ಕೋರ್‌, ಸ್ಕೋರ್‌ಕಾರ್ಡ್, ಪಾಯಿಂಟ್ ಟೇಬಲ್, ಸ್ಪೆಷಲ್ ಸ್ಟೋರಿಗಳನ್ನು ನೋಡಬಹುದು.

{headtohead_cricket_7_95}

ಅಫ್ಘಾನಿಸ್ತಾನ ಸಂಭಾವ್ಯ ತಂಡ: ಮೊಹಮ್ಮದ್ ಶಹಝಾದ್ (ವಿ.ಕೆ.), ಹಝರತುಲ್ಲಾ ಝಝಾಯಿ, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ, ಮೊಹಮ್ಮದ್ ನಬಿ, ಗುಲ್ಬಾದೀನ್ ನೈಬ್ (ಸಿ), ನಜೀಬುಲ್ಲಾ ಝದ್ರನ್, ರಶೀದ್ ಖಾನ್, ದೌಲತ್ ಝದ್ರನ್, ಮುಜೀಬ್ ಉರ್ ರಹಮಾನ್, ಹಮೀದ್ ಹಸನ್/ಅಫ್ತಾಬ್ ಅಲಮ್.

ಶ್ರೀಲಂಕಾ ಸಂಭಾವ್ಯ ತಂಡ: ದಿಮುತ್ ಕರುಣರತ್ನೆ (ಸಿ), ಲಹಿರು ತಿರುಮನ್ನೆ, ಕುಸಾಲ್ ಪೆರೆರಾ (ವಿ.ಕೆ.), ಕುಸಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಏಂಜೆಲೋ ಮ್ಯಾಥ್ಯೂಸ್, ಜೀವನ್ ಮೆಂಡಿಸ್, ತಿಸೆರ ಪೆರೆರಾ, ಇಸುರು ಉದನ, ಸುರಂಗಾ ಲಕ್ಮಲ್, ಲಸಿತ್ ಮಾಲಿಂಗ.

Story first published: Tuesday, June 4, 2019, 15:53 [IST]
Other articles published on Jun 4, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+