
ಅಬುಧಾಬಿ: ಅಬುಧಾಬಿಯ ಶೈಖ್ ಝಾಯೆದ್ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನ ಮತ್ತು ಜಿಂಬಾಬ್ವೆ ಮಧ್ಯೆ ದ್ವಿತೀಯ ಟೆಸ್ಟ್ ಪಂದ್ಯ ನಡೆಯುತ್ತಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊನೇ ಪಂದ್ಯವಿದು. ಆರಂಭಿಕ ಟೆಸ್ಟ್ ನಲ್ಲಿ ಜಿಂಬಾಬ್ವೆ 10 ವಿಕೆಟ್‌ಗಳ ಸುಲಭ ಜಯ ಗಳಿಸಿತ್ತು.
ಟಾಸ್ ಗೆದ್ದಿರುವ ಅಫ್ಘಾನಿಸ್ತಾನ ಬ್ಯಾಟಿಂಗ್ ಆಯ್ದುಕೊಂಡಿದೆ. ಟೆಸ್ಟ್ ಸರಣಿ ಮುಕ್ತಾಯದ ಬಳಿಕ ಇತ್ತಂಡಗಳ ಮಧ್ಯೆ 3 ಪಂದ್ಯಗಳ ಟಿ20ಐ ಸರಣಿ ನಡೆಯಲಿದೆ. ಇಂದಿನ ಪಂದ್ಯದಲ್ಲಿ ಅಫ್ಘಾನ್ ಪರ ರಶೀದ್ ಖಾನ್, ಅಸ್ಘರ್ ಅಫ್ಘಾನ್, ರಹಮತ್ ಶಾ ಮೊದಲಾದವರು ಆಡುತ್ತಿದ್ದರೆ, ಜಿಂಬಾಬ್ವೆ ನಾಯಕತ್ವವನ್ನು ಸೀನ್ ವಿಲಿಯಮ್ಸ್ ವಹಿಸಿಕೊಂಡಿದ್ದಾರೆ.
ಅಫ್ಘಾನಿಸ್ತಾನ vs ಜಿಂಬಾಬ್ವೆ, 2ನೇ ಟೆಸ್ಟ್, Live ಸ್ಕೋರ್‌ಕಾರ್ಡ್
ಅಫ್ಘಾನಿಸ್ತಾನ ಪ್ಲೇಯಿಂಗ್ XI: ಇಬ್ರಾಹಿಂ ಖದ್ರನ್, ಜಾವೇದ್ ಅಹ್ಮದಿ, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ, ನಾಸಿರ್ ಜಮಾಲ್, ಅಫ್ಸರ್ ಝಝಾಯ್ (ವಿಕೆ), ಅಸ್ಗರ್ ಅಫಘಾನ್ (ಸಿ), ಶಾಹಿದುಲ್ಲಾ ಕಮಲ್, ರಶೀದ್ ಖಾನ್, ಅಮೀರ್ ಹಮ್ಜಾ, ಸಯೀದ್ ಶಿರ್ಜಾದ್.
ಜಿಂಬಾಬ್ವೆ ಪ್ಲೇಯಿಂಗ್ XI: ಪ್ರಿನ್ಸ್ ಮಾಸ್ವೌರ್, ಕೆವಿನ್ ಕಸುಝಾ, ತಾರಿಸೈ ಮುಸಕಂಡ, ಸೀನ್ ವಿಲಿಯಮ್ಸ್ (ಸಿ), ವೆಸ್ಲಿ ಮಾಧೆವೆರೆ, ಸಿಕಂದರ್ ರಾಝಾ, ರಿಯಾನ್ ಬರ್ಲ್, ರೆಗಿಸ್ ಚಕಾಬ್ವಾ (ವಿಕೆ), ಡೊನಾಲ್ಡ್ ತಿರಿಪಾನೊ, ಬ್ಲೆಸಿಂಗ್ ಮುಜರಾಬಾನಿ, ವಿಕ್ಟರ್ ನ್ಯೌಚಿ.