ನನ್ನನ್ನು ತಂಡದಿಂದ ಹೊರದಬ್ಬಿದ್ದಾರೆ: ಕಣ್ಣೀರಿಟ್ಟ ಸ್ಫೋಟಕ ಬ್ಯಾಟ್ಸ್‌ಮನ್

ಲಂಡನ್, ಜೂನ್ 10: ಅಫ್ಘಾನಿಸ್ತಾನದ ಸ್ಫೋಟಕ ಬ್ಯಾಟ್ಸ್‌ಮನ್, ವಿಕೆಟ್ ಕೀಪರ್ ಮೊಹಮ್ಮದ್ ಶಹಜಾದ್ ಗಾಯಗೊಂಡ ಕಾರಣ ವಿಶ್ವಕಪ್‌ನಿಂದ ಹೊರಹೋಗಿದ್ದಾರೆ. ಮೊಣಕಾಲು ಗಾಯದಿಂದ ಬಳಲುತ್ತಿರುವ ಕಾರಣದಿಂದ ಮೊಹಮ್ಮದ್ ಶಹಜಾದ್ ಬದಲು ಇಕ್ರಮ್ ಅಲಿ ಖಿಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಪ್ರಕಟಣೆ ನೀಡಿತ್ತು.
ಆದರೆ, ತಾವು ಗಾಯಗೊಂಡಿಲ್ಲ, ಸಂಪೂರ್ಣವಾಗಿ ಫಿಟ್ ಇದ್ದೇನೆ. ಆದರೂ ತಮ್ಮನ್ನು ತಂಡದಿಂದ ಬಲವಂತವಾಗಿ ಹೊರದಬ್ಬಲಾಗಿದೆ ಎಂದು ಶಹಜಾದ್ ಕಣ್ಣೀರಿಟ್ಟಿದ್ದಾರೆ.
ಗಾಯದ ಕಾರಣವೊಡ್ಡಿ ತಮ್ಮನ್ನು ತಂಡದಿಂದ ತೆಗೆದುಹಾಕುವ ಮುನ್ನ ಕ್ರಿಕೆಟ್ ಮಂಡಳಿ ಅಧಿಕಾರಿಗಳು ತಮ್ಮೊಂದಿಗೆ ಒಂದೂ ಮಾತು ಕೇಳಿಲ್ಲ ಎಂದು ಅವರು ಅಲವತ್ತುಕೊಂಡಿದ್ದಾರೆ. ವಿಶ್ವಕಪ್‌ನಲ್ಲಿ ಒಂದೆರಡು ಪಂದ್ಯವಷ್ಟೇ ಆಡಿದ ಶಹಜಾದ್ ಬ್ಯಾಟಿಂಗ್‌ನಲ್ಲಿ ಮಿಂಚುವಲ್ಲಿ ವಿಫಲರಾಗಿದ್ದರು. ಈ ನಡುವೆ ಟೂರ್ನಿಯ ಆರಂಭದಲ್ಲಿಯೇ ತಮ್ಮನ್ನು ಕೈಬಿಟ್ಟಿರುವುದಕ್ಕೆ ಅವರು ಅಘಾತಕ್ಕೊಳಗಾಗಿದ್ದಾರೆ.
'ನಾನು ಮೊಣಕಾಲು ಗಾಯದಿಂದ ಅನ್‌ಫಿಟ್ ಆಗಿದ್ದೇನೆ ಎನ್ನುವುದು ನನಗೇ ಗೊತ್ತಿಲ್ಲ. ನೆಟ್‌ನಲ್ಲಿ ತರಬೇತಿ ಪಡೆಯುವ ವೇಳೆ ತಂಡ ಮ್ಯಾನೇಜರ್ ಬಂದು ನೀನು ಅನ್‌ಫಿಟ್ ಆಗಿದ್ದಿ. ಸ್ವದೇಶಕ್ಕೆ ವಾಪಸ್ ಹೋಗಬೇಕಾಗುತ್ತದೆ ಎಂದು ಹೇಳಿದರು. ಅದಕ್ಕೂ ಮೊದಲೇ ಅವರು ನನ್ನ ಬದಲಿ ಆಟಗಾರನ ಆಯ್ಕೆಗೆ ಕೋರಿದ್ದರು ಎನಿಸಿತ್ತು. ಮೇ 26ರಂದು ಪಾಕಿಸ್ತಾನದ ಎದುರು ಅಭ್ಯಾಸ ಪಂದ್ಯ ಆಡುವ ವೇಳೆ ಶಹಜಾದ್ ಅವರಿಗೆ ಗಾಯವಾಗಿತ್ತು. ಆದರೂ ಶಹಜಾದ್ ಎರಡು ಪಂದ್ಯ ಆಡಿದ್ದರು.

ನಾನು ಸಂಪೂರ್ಣ ಫಿಟ್ ಇದ್ದೇನೆ
'ನನಗೆ ಯಾವ ಸಮಸ್ಯೆಯೂ ಇಲ್ಲ ಮತ್ತು ಗಾಯವೂ ಇಲ್ಲ. ನಾನು ಸಂಪೂರ್ಣವಾಗಿ ಫಿಟ್ ಆಗಿದ್ದೇನೆ. ಎಸಿಬಿ ಅಧಿಕಾರಿಗಳು ನನ್ನನ್ನು ಯಾವುದೇ ರೀತಿ ಸಂಪರ್ಕಿಸದೆಯೇ ಬಲವಂತವಾಗಿ ನನ್ನನ್ನು ತಂಡದಿಂದ ಹೊರಹಾಕಿದ್ದಾರೆ. ಮೊಣಕಾಲು ಗಾಯದಿಂದ ತಂಡದಿಂದ ಹೊರಹೋಗುತ್ತಿರುವುದಾಗಿ ಹೇಳಿದ್ದಾರೆ' ಎಂದು ಶಹಜಾದ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಆಡಿಯೋ ಕ್ಲಿಪ್‌ನಲ್ಲಿ ನೋವಿನಿಂದ ಹೇಳಿಕೊಂಡಿದ್ದಾರೆ.

ಮೊದಲ ಎರಡು ಪಂದ್ಯ ಹೇಗೆ ಆಡುತ್ತಿದ್ದೆ?
'ನಾನು ಫಿಟ್ ಆಗಿರದೆ ಇದ್ದಿದ್ದರೆ ಮೊದಲ ಎರಡು ಪಂದ್ಯಗಳನ್ನು ಹೇಗೆ ಆಡಲು ಸಾಧ್ಯವಾಗುತ್ತಿತ್ತು? ಸ್ವಲ್ಪ ವಿಶ್ರಾಂತಿ ಪಡೆದುಕೊಂಡರೆ ನಾನು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತೇನೆ ಎಂದು ಫಿಸಿಯೋ ಹೇಳಿದ್ದರು. ಇದ್ದಕ್ಕಿದ್ದಂತೆ ಟೂರ್ನಿಯಿಂದಲೇ ಹೊರಹಾಕಲಾಯಿತು. ಅಫ್ಘಾನಿಸ್ತಾನ ಕ್ರಿಕೆಟ್‌ಗೆ ನಾನು ಸಾಕಷ್ಟು ಶ್ರಮಿಸಿದ್ದೇನೆ. ಈಗ ಈ ರೀತಿ ನನಗೆ ಆಗಿದೆ' ಎಂದು ಅಲವತ್ತುಕೊಂಡಿದ್ದಾರೆ.

ನನ್ನ ಬ್ಯಾಟಿಂಗ್ ಶೈಲಿಯೇ ಹೀಗೆ
'ನಾನು ಅನ್‌ಫಿಟ್ ಆಗಿದ್ದೇನೆ. ಫುಟ್‌ವರ್ಕ್ ಇಲ್ಲದ ಕಾರಣ ಶಾಟ್‌ಗಳನ್ನು ಬಾರಿಸಲು ನನಗೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಆದರೆ, ನನ್ನ ಬ್ಯಾಟಿಂಗ್ ಶೈಲಿಯೇ ಇದು. ನಾನು ಬ್ಯಾಟಿಂಗ್ ಮಾಡುವಾಗ ಹೆಚ್ಚು ಚಲಿಸುವುದಿಲ್ಲ. ಆದರೂ ರನ್ ಬಾರಿಸಿದ್ದೇನೆ' ಎಂದಿದ್ದಾರೆ.

ಐಸಿಸಿಗೆ ವೈದ್ಯಕೀಯ ವರದಿ
ಶಹಜಾದ್ ಅವರ ಆರೋಪವನ್ನು ತಳ್ಳಿ ಹಾಕಿರುವ ಎಸಿಬಿ ಅಧಿಕಾರಿಗಳು, 'ಐಸಿಸಿಗೆ ವೈದ್ಯಕೀಯ ವರದಿಯನ್ನು ಸಲ್ಲಿಸಿದ್ದೆವು. ಬಳಿಕವೇ ಐಸಿಸಿ ಅವರ ಬದಲಿ ಆಟಗಾರನನ್ನು ಸೇರಿಸಿಕೊಳ್ಳಲು ನಮಗೆ ಅವಕಾಶ ನೀಡಿತು. ಶಹಜಾದ್ ಸಂಪೂರ್ಣವಾಗಿ ಗಾಯಗೊಂಡಿದ್ದಾರೆ' ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications