ಬುಕ್ಕಿಗಳು ನನ್ನನ್ನು ಸಂಪರ್ಕಿಸಿದ್ದರು : ಅಫ್ಘಾನಿಸ್ತಾನ್ ಕ್ರಿಕೆಟರ್

ದುಬೈ, ಸೆಪ್ಟೆಂಬರ್ 24: ಅಫ್ಘಾನಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮೊಹಮ್ಮದ್ ಷಹಜಾದ್ ಅವರು ಭ್ರಷ್ಟಾಚಾರ ಪ್ರಕರಣವೊಂದರ ಬಗ್ಗೆ ತಿಳಿಸಿದ್ದಾರೆ.
ಶಾರ್ಜಾದಲ್ಲಿ ಅಕ್ಟೋಬರ್ 5 ರಿಂದ 23ರ ತನಕ ನಡೆಯಲಿರುವ ಅಫ್ಘಾನ್ ಪ್ರೀಮಿಯರ್ ಟಿ20 ಟೂರ್ನಮೆಂಟ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಲು ಬುಕ್ಕಿಗಳು ಯತ್ನಿಸಿದ್ದು, ಇದಕ್ಕಾಗಿ ನನ್ನನ್ನು ಸಂಪರ್ಕಿಸಿದ್ದರು ನಾನು ತಕ್ಷಣವೇ ಟೀಂ ಮ್ಯಾನೇಜ್ಮೆಂಟ್ ಗೆ ತಿಳಿಸಿದೆ ಎಂದು ಷಹಜಾದ್ ಹೇಳಿದ್ದಾರೆ.
ಐಸಿಸಿ ಭ್ರಷ್ಟಾಚಾರ ನಿಗ್ರಹ ಸಮಿತಿ ಮುಂದೆ ಸದ್ಯ ಈ ವಿಷಯ ಚರ್ಚೆಯಲ್ಲಿದೆ ಎಂದು ಇಎಸ್ ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ. ಏಷ್ಯಾಕಪ್ ನಡೆಯುವಾಗಲೇ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ. ಆದರೆ, ಸರಿಯಾದ ಮಾರ್ಗದಲ್ಲಿ ಐಸಿಸಿ ತನಕ ವಿಷಯ ಮುಟ್ಟಿರುವುದು ಒಳ್ಳೆಯ ಸಂಗತಿ, ಸದ್ಯ ಭ್ರಷ್ಟಾಚಾರ ನಿಗ್ರಹ ಸಮಿತಿ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ಐಸಿಸ ಅಧಿಕಾರಿಯೊಬ್ಬರು ತಿಳಿಸಿದರು.
ಅಫ್ಘಾನಿಸ್ತಾನದ ಸ್ಫೋಟಕ ಬ್ಯಾಟ್ಸ್ ಮನ್ ಷಹಜಾದ್ ಅವರು 75 ಏಕದಿನ ಕ್ರಿಕೆಟ್, 65 ಟಿ20 ಹಾಗೂ ಭಾರತ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವಾಡಿದ್ದಾರೆ.
ಕಳೆದ 12 ತಿಂಗಳುಗಳಲ್ಲಿ ಟೆಸ್ಟ್ ಆಡುವ ರಾಷ್ಟ್ರಗಳ ಐವರು ನಾಯಕರನ್ನು ಬುಕ್ಕಿಗಳು ಸೆಳೆಯಲು ಯತ್ನಿಸಿದ್ದಾರೆ. ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ 32 ತನಿಖೆಗಳು ನಡೆದಿದ್ದು, 8 ಮಂದಿ ಮೇಲೆ ಶಂಕೆ ವ್ಯಕ್ತವಾಗಿದೆ ಎಂದು ಐಸಿಸಿಯ ಭ್ರಷ್ಟಾಚಾರ ನಿಗ್ರಹ ವಿಭಾಗದ ಮುಖ್ಯಸ್ಥ ಅಲೆಕ್ಸ್ ಮಾರ್ಷಲ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications