For Quick Alerts
ALLOW NOTIFICATIONS  
For Daily Alerts
 

World Cup 2023: ಈ ತಂಡದ ಪ್ರಚಂಡ ಫಾರ್ಮ್‌ನಿಂದ ಉಳಿದ ತಂಡಗಳಿಗೆ ಗಂಡಾಂತರ; ಆಕಾಶ್ ಚೋಪ್ರಾ

ಜೂನ್ 27ರಂದು 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯುವ ಟೂರ್ನಿಗೆ ಕೇವಲ ಎರಡೂವರೆ ತಿಂಗಳು ಮಾತ್ರ ಬಾಕಿ ಉಳಿದಿದೆ.

ಇದೇ ವೇಳೆ ಜುಲೈ 8ರಂದು ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಬಾಂಗ್ಲಾದೇಶ ತಂಡವನ್ನು 142 ರನ್‌ಗಳಿಂದ ಸೋಲಿಸಿ ಅವರ ವಿರುದ್ಧ ಮೊದಲ ಏಕದಿನ ಸರಣಿಯನ್ನು ಗೆದ್ದುಕೊಂಡಿತು.

Afghanistan Will Be A Threat To Other Teams in The 2023 World Cup Syas Aakash Chopra

ಗಮನಾರ್ಹವಾಗಿ, ಡಿಎಲ್‌ಎಸ್ ವಿಧಾನದ ಮೂಲಕ ಅಫ್ಘಾನಿಸ್ತಾನ ತಂಡವು ಆರಂಭಿಕ ಪಂದ್ಯವನ್ನು 17 ರನ್‌ಗಳಿಂದ ಗೆದ್ದುಕೊಂಡಿತು. ಇನ್ನು ಚಟ್ಟೋಗ್ರಾಮ್‌ನಲ್ಲಿ ಜುಲೈ 11ರಂದು ಆಡುವ ಕೊನೆಯ ಪಂದ್ಯಕ್ಕೂ ಮುನ್ನ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ಇದೀಗ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಅವರು ಬಾಂಗ್ಲಾದೇಶದಲ್ಲಿ ಏಕದಿನ ಸರಣಿಯನ್ನು ಗೆದ್ದಿದ್ದಕ್ಕಾಗಿ ಅಫ್ಘಾನಿಸ್ತಾನ ತಂಡವನ್ನು ಹೊಗಳಿದರು ಮತ್ತು ಹಿಂದಿನ ಪ್ರವಾಸದಲ್ಲಿ ಬಾಂಗ್ಲಾದೇಶ ತಂಡವನ್ನು ಸೋಲಿಸಲು ವಿಫಲವಾದ ಭಾರತ ತಂಡವನ್ನು ಟೀಕಿಸಿದರು.

ಭಾರತ ಮತ್ತು ಬಾಂಗ್ಲಾದೇಶ ಸರಣಿಯನ್ನು ಆಕಾಶ್ ಚೋಪ್ರಾ ನೆನಪಿಸಿಕೊಂಡರು. ನಾಯಕ ರೋಹಿತ್ ಶರ್ಮಾ ಗಾಯಗೊಂಡು ಹೊರಗುಳಿದರು ಮತ್ತು ಪ್ರವಾಸಿ ತಂಡ 2-0 ಅಂತರದಲ್ಲಿ ಸೋತರು. ಅಂತಿಮ ಪಂದ್ಯದಲ್ಲಿ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಭರ್ಜರಿ ದ್ವಿಶತಕ ಬಾರಿಸುವ ಮೂಲಕ ಬಾಂಗ್ಲಾದೇಶ ತಂಡವನ್ನು ಸೋಲಿಸಲು ನೆರವಾದರು.

Afghanistan Will Be A Threat To Other Teams in The 2023 World Cup Syas Aakash Chopra

"ಅಫ್ಘಾನಿಸ್ತಾನ ಎರಡೂ ಪಂದ್ಯಗಳನ್ನು ಗೆದ್ದಿದೆ. ಅವರು ಬಾಂಗ್ಲಾದೇಶ ತಂಡವನ್ನು ಅವರ ಮೈದಾನದಲ್ಲೇ ಸೋಲಿಸಿದ್ದಾರೆ. ಇದೇ ಬಾಂಗ್ಲಾದೇಶದಲ್ಲಿ ಭಾರತ ತಂಡ ಸರಣಿಯನ್ನು ಸೋತಿತ್ತು," ಎಂದು ಆಕಾಶ್ ಚೋಪ್ರಾ ತಿಳಿಸಿದರು.

"ರೋಹಿತ್ ಶರ್ಮಾ ಗಾಯಗೊಂಡಾಗ ಭಾರತ ತಂಡವು ಸರಣಿಯನ್ನು ಸೋತ ಆ ಸರಣಿಯನ್ನು ನೆನಪಿಸಿಕೊಳ್ಳಿ, 2-0 ಅಂತರದಿಂದ ಹಿನ್ನಡೆಯಾಯಿತು. ಕೊನೆಯ ಪಂದ್ಯದಲ್ಲಿ ಇಶಾನ್ ಕಿಶನ್ ಅದ್ಭುತ ಪ್ರದರ್ಶನ ನೀಡಿ ಭಾರತ ಗೆದ್ದಿತು," ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.

ಅಫ್ಘಾನಿಸ್ತಾನದ ಸ್ಪಿನ್ನರ್‌ಗಳು ಸತತವಾಗಿ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆಟದ ಸಮಯದಲ್ಲಿ ಪ್ರಮುಖ ಪಾತ್ರವಹಿಸಿದರು ಎಂದು 45 ವರ್ಷದ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟರು.

ಆರಂಭಿಕರಾದ ಇಬ್ರಾಹಿಂ ಝದ್ರಾನ್ ಮತ್ತು ರಹಮಾನುಲ್ಲಾ ಗುರ್ಬಾಜ್ ಅವರ 256 ರನ್‌ಗಳ ಆರಂಭಿಕ ಜೊತೆಯಾಟವನ್ನು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಶ್ಲಾಘಿಸಿದರು.

ಅಕ್ಟೋಬರ್‌ನಲ್ಲಿ ಪ್ರಾರಂಭವಾಗುವ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಉಪಖಂಡದ ಪರಿಸ್ಥಿತಿಗಳಲ್ಲಿನ ಗೆಲುವು ಅಫ್ಘಾನಿಸ್ತಾನ ತಂಡಕ್ಕೆ ನೆರವಾಗಲಿದೆ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.

"ಅಫ್ಘಾನಿಸ್ತಾನ ತಂಡವು ಸಹ ಉಪಖಂಡದ ಪರಿಸ್ಥಿತಿಗಳು ಮತ್ತು ಭಾರತದಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಇದೇ ರೀತಿಯ ಪರಿಸ್ಥಿತಿಗಳು ಇರಲಿವೆ. ಹೀಗಾಗಿ ಅಫ್ಘಾನಿಸ್ತಾನ ತಂಡದ ಪ್ರಚಂಡ ಫಾರ್ಮ್, ಉಳಿದ ತಂಡಗಳಿಗೆ ಗಂಡಾಂತ ತರಲಿದೆ," ಎಂದು ಆಕಾಶ್ ಚೋಪ್ರಾ ಹೇಳಿದರು.

2ನೇ ಏಕದಿನ ಪಂದ್ಯದಲ್ಲಿ 142 ರನ್‌ಗಳಿಂದ ಸೋಲಿಸಿದ ಅಫ್ಘಾನ್
ಎರಡನೇ ಏಕದಿನ ಪಂದ್ಯದ ಕುರಿತು ಮಾತನಾಡುವುದಾದರೆ, ಅಫ್ಘಾನಿಸ್ತಾನ ತಂಡವು ಮೊದಲು ಬ್ಯಾಟಿಂಗ್ ಮಾಡಿದ ನಂತರ 331 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಝದ್ರಾನ್ ಕ್ರಮವಾಗಿ 145 ರನ್ ಮತ್ತು 100 ರನ್ ಗಳಿಸಿದರು.

ಬಾಂಗ್ಲಾದೇಶ ತಂಡದ ಪರ ಬೌಲಿಂಗ್‌ನಲ್ಲಿ ಮುಸ್ತಾಫಿಜುರ್ ರೆಹಮಾನ್, ಹಸನ್ ಮಹಮೂದ್, ಶಕೀಬ್ ಅಲ್ ಹಸನ್ ಮತ್ತು ಮೆಹಿದಿ ಹಸನ್ ತಲಾ ಎರಡು ವಿಕೆಟ್ ಪಡೆದರೆ, ಎಬಾಡೋಟ್ ಹೊಸೈನ್ ಒಂದು ವಿಕೆಟ್ ಪಡೆದರು.

142 ರನ್‌ಗಳ ಭರ್ಜರಿ ಗೆಲುವನ್ನು ಖಚಿತಪಡಿಸಿಕೊಳ್ಳಲು ಆತಿಥೇಯ ಬಾಂಗ್ಲಾದೇಶ ತಂಡವನ್ನು 44ನೇ ಓವರ್‌ನಲ್ಲಿ 189 ರನ್‌ಗಳಿಗೆ ಕಟ್ಟಿಹಾಕಿದ ಅಫ್ಘಾನಿಸ್ತಾನ ಬೌಲರ್‌ಗಳು ಕಮಾಲ್ ಮಾಡಿದ್ದರು.

ಬಾಂಗ್ಲಾದೇಶ ತಂಡದ ಪರ ವಿಕೆಟ್‌ಕೀಪರ್- ಬ್ಯಾಟರ್ ಮುಶ್ಫಿಕರ್ ರಹೀಮ್ 85 ಎಸೆತಗಳಲ್ಲಿ 69 ರನ್ ಗಳಿಸಿ ಬಾಂಗ್ಲಾದೇಶದ ಪರ ಗರಿಷ್ಠ ಸ್ಕೋರ್ ಎನಿಸಿದರು. ಅಫ್ಘಾನಿಸ್ತಾನ ಪರ ಫಜಲ್ಹಕ್ ಫಾರೂಕಿ ಮತ್ತು ಮುಜೀಬ್ ಉರ್ ರಹಮಾನ್ ಮೂರು ವಿಕೆಟ್ ಕಬಳಿಸಿದರೆ, ರಶೀದ್ ಖಾನ್ ಎರಡು ವಿಕೆಟ್ ಮತ್ತು ಮೊಹಮ್ಮದ್ ನಬಿ ಒಂದು ವಿಕೆಟ್ ಪಡೆದರು.

Story first published: Tuesday, July 11, 2023, 13:48 [IST]
Other articles published on Jul 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+