ಅಫ್ರಿದಿ ಬಗ್ಗೆ ಅಚ್ಚರಿಯ ಸತ್ಯ ಬಿಚ್ಚಿಟ್ಟ ಇಮ್ರಾನ್ ಫರಾತ್

ಹೊಸದಿಲ್ಲಿ, ಮೇ 07: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಅವರ ಕುರಿತಾಗಿ ಪಾಕಿಸ್ತಾನದ ಕ್ರಿಕೆಟಿಗ ಇಮ್ರಾನ್ ಫರಾತ್ ಅಚ್ಚರಿಯ ಅತ್ಯಾಂಶ ಬಿಚ್ಚಿಟ್ಟಿದ್ದಾರೆ.
ಇದೀಗ ಅಫ್ರಿದಿ ಜತೆ ಹೆಚ್ಚು ಕಾಲ ಕ್ರಿಕೆಟ್ ಆಡಿದ ಅನುಭವ ಹೊಂದಿರುವ ಪಾಕಿಸ್ತಾನ ತಂಡದ ಅವಕೃಪೆ ಎದುರಿಸುತ್ತಿರುವ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಇಮ್ರಾನ್ ಫರಾತ್, ಮಾಜಿ ಆಲ್‌ರೌಂಡರ್‌ನ ವ್ಯಕ್ತಿತ್ವದ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಅಫ್ರಿದಿ ತಮ್ಮ ಸ್ವಾರ್ಥಕ್ಕಾಹಿ ಹಲವು ಕ್ರಿಕೆಟಿಗರ ವೃತ್ತಿ ಬದುಕನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅವರೊಬ್ಬ ಸ್ವಾರ್ಥಿ ಎಂಬ ಸತ್ಯಾಂಶವನ್ನು ಹಂಚಿಕೊಂಡಿದ್ದಾರೆ.
ತಮ್ಮ ಸಾಲು ಸಾಲು ಟ್ವೀಟ್‌ಗಳ ಮೂಲಕ ಅಫ್ರಿದಿಯನ್ನು ಜರಿದಿರುವ 36 ವರ್ಷದ ಎಡಗೈ ಬ್ಯಾಟ್ಸ್‌ಮನ್ ಫರಾತ್, 20 ವರ್ಷಗಳ ಕಾಲ ತಮ್ಮ ವಯಸ್ಸಿನ ಕುರಿತಾಗಿ ಸುಳ್ಳು ಹೇಳುತ್ತಾ ಬಂದ ವ್ಯಕ್ತಿಗೆ ನಾಚಿಕೆಯಾಗಬೇಕು. ಇಂತಹ ವ್ಯಕ್ತಿ ಪಾಕ್‌ನ ದಿಗ್ಗಜ ಆಟಗಾರರನ್ನು ಹೆಸರಿಸಿ ಅವರ ವಿರುದ್ಧ ಟೀಕೆ ಮಾಡುತ್ತಿದ್ದಾನೆ ಎಂದು ಕುಟುಕಿದ್ದಾರೆ.
ಅಫ್ರಿದಿ ತಮ್ಮ ಆತ್ಮಚರಿತ್ರೆ 'ಗೇಮ್ ಚೇಂಜರ್' ಬಿಡುಗಡೆ ಮಾಡಿದ ದಿನದಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದಾರೆ. ಕ್ರಿಕೆಟ್ ವೃತ್ತಿ ಬದುಕಿನಲ್ಲಿನ ತಮ್ಮ ನೈಜ ವಯಸ್ಸಿನಿಂದ ಹಿಡಿದು, ಕಾಶ್ಮೀರ ಕುರಿತಾದ ತಮ್ಮ ದೃಷ್ಠಿಕೋನ ಹಾಗೂ ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರ ಕಾಲೆಳೆಯುವ ಮೂಲಕ ಸುದ್ದಿಯಾಗುತ್ತಲೇ ಇದ್ದಾರೆ.
ಇಷ್ಟೇ ಅಲ್ಲದೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಹಾಗೂ ದಿಗ್ಗಜ ಆಟಗಾರರಾದ ಜಾವೆದ್ ಮಿಯಾಂದಾದ್ ಮತ್ತು ವಕಾರ್ ಯೂನಿಸ್ ಅವರನ್ನು ಅಫ್ರಿದಿ ತಮ್ಮ ಪುಸ್ತಕದಲ್ಲಿ ಬಹುವಾಗಿ ಟೀಕಿಸಿದ್ದಾರೆ. ಅಫ್ರಿದಿ ಅವರ ಆತ್ಮಚರಿತ್ರೆಗೆ ಪತ್ರಕರ್ತ ವಜಾಹತ್ ಎಸ್. ಖಾನ್ ನೆರವಾಗಿದ್ದಾರೆ.
20 ವರ್ಷ ಸುಳ್ಳು ಹೇಳಿದ್ದ
"ಅಫ್ರಿದಿ ಅವರ ಹೊಸ ಪುಸ್ತಕದ ಬಗ್ಗೆ ಕೇಳಿ ಮತ್ತು ಓದಿದ ಬಳಿಕ ನನಗೇ ನಾಚಿಕೆಯಾಗುತ್ತದೆ. ತಮ್ಮ ವಯಸ್ಸಿನ ಕುರಿತಾಗಿ 20 ವರ್ಷ ಸುಳ್ಳು ಹೇಳಿದ ವ್ಯಕ್ತಿ ಇದೀಗ ಎಲ್ಲವನ್ನೂ ಸ್ಪಷ್ಟಪಡಿಸಲು ಮುಂದಾಗಿದ್ದು, ಪಾಕಿಸ್ತಾನದ ದಿಗ್ಗಜ ಆಟಗಾರರನ್ನು ಟೀಕಿಸುತ್ತಿದ್ದಾನೆ,'' ಎಂದು ಫರಾತ್ ತಮಮ್ ಟ್ವೀಟ್ ನಲ್ಲಿ ಕಿಡಿ ಕಾರಿದ್ದಾರೆ.
ಹೇಳುವುದು ಸಾಕಷ್ಟಿದೆ
ಮಾಜಿ ಕ್ರಿಕೆಟಿಗರನ್ನು ದೂಶಿಸುತ್ತಿರುವ ಅಫ್ರಿದಿ ಅವರ ಬಗ್ಗೆ ಹೇಳಲು ಹೊರಟರೆ ಸಾಕಷ್ಟಿದೆ ಎಂದಿರುವ ಫರಾತ್, "ಈ ವ್ಯಕ್ತಿಯ ಕುರಿತಾಗಿ ಹೇಳುವುದಾದರೆ ನನ್ನ ಬಳಿ ಸಾಕಷ್ಟು ಕಥೆಗಳಿವೆ. ಅವರ ಜೊತೆ ಆಟವಾಡಿದ ಅನುಭವವಿದೆ. ಅವರಿಗೆ ಉತ್ತಮ ರಾಜಕರಣಿ ಆಗುವ ಪ್ರತಿಭೆ ಇದೆ,'' ಎಂದು ವ್ಯಂಗ್ಯವಾಡಿದ್ದಾರೆ.
ಸ್ವಾರ್ಥ ತುಂಬಿರುವ ಆಟಗಾರ
"ಅಂದಹಾಗೆ ನನ್ನ ಬಳಿ ಈ ವ್ಯಕ್ತಿಯ ಕುರಿತಾಗಿ ಹೇಳಲು ಇರುವ ಕಥೆ ಕಡಿಮೆಯೇ. ಇನ್ನು ಅವರ ಪುಸ್ತಕದಲ್ಲಿ ಹೆಸರಿಸಿರುವ ಮಾಜಿ ಆಟಗಾರರೆಲ್ಲ ಈಗಲೇ ಮಾತನಾಡಿ ಒಬ್ಬ ಸ್ವಾರ್ಥ ತುಂಬಿದ ಆಟಗಾರನ ಕುರಿತು ಸತ್ಯಾಂಶ ಏನೆಂಬುದನ್ನು ಬಹಿರಂಗ ಪಡಿಸಬೇಕಾಗಿ ವಿನಂತಿಸುತ್ತೇನೆ. ಆತ ತನ್ನ ಒಳಿತಿಗಾಗಿ ಹಲವು ಕ್ರಿಕೆಟಿಗರ ವೃತ್ತಿ ಬದುಕನ್ನು ಹಾಳುಮಾಡಿದ,'' ಎಂದು ಫರಾತ್ ತಮ್ಮ ಟ್ವೀಟ್‌ಗಳಲ್ಲಿ ಅಫ್ರಿದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪುಸ್ತಕ ಮುದ್ರಣ ತಡೆಗೆ ಅರ್ಜಿ
ಅಫ್ರಿದಿ ತಮ್ಮ ಆತ್ಮಚರಿತ್ರೆಯಲ್ಲಿ ಹೆಸರಿಸಿರುವ ಕ್ರಿಕೆಟಿಗರೆಲ್ಲರೂ ಈ ಕೂಡಲೇ ಅವರಿಗೆ ತಕ್ಕ ಉತ್ತರ ನೀಡಬೇಕಿದೆ ಎಂದು ಇಮ್ರಾನ್ ಫರಾತ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫರಾತ್ ಪಾಕಿಸ್ತಾನ ತಂಡದ ಪರ 40 ಟೆಸ್ಟ್ ಪಂದ್ಯಗಳನ್ನಾಡಿದ್ದು, 58 ಏಕದಿನ ಪಂದ್ಯಗಳಲ್ಲಿ ಪಾಕ್ ಪರ ಸೇವೆ ಸಲ್ಲಿಸಿದ್ದಾರೆ. ಇದೇ ವೇಳೆ 'ಗೇಮ್ ಚೇಂಜರ್' ಪುಸ್ತಕ ಮುದ್ರಣವಾಗದಂತೆ ತಡೆಯಲು ಪಾಕಿಸ್ತಾನದ ನ್ಯಾಯಾಲಯವೊಂದಕ್ಕೆ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications