ಒಂದೇ ತಂಡದ ಪರ ಭಾರತ, ಪಾಕ್ ಆಟಗಾರರು ಕಣಕ್ಕೆ: ಯಾವದು ಟೂರ್ನಿ?
ಭಾರತ ಹಾಗೂ ಪಾಕಿಸ್ತಾನ ತಂಡಗಳು ಈಗ ಬರೀ ಐಸಿಸಿ ಟೂರ್ನಿ ಹಾಗೂ ಏಷ್ಯಾ ಕಪ್‌ನಂತಹ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿ ಆಗುತ್ತವೆ. ಈ ತಂಡಗಳ ನಡುವಿನ ಹೈವೋಲ್ಟೇಜ್ ಫೈಟ್ ನೋಡಲು ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಉಭಯ ತಂಡಗಳ ಬಿಗ್ ಫೈಟ್‌ನ್ನು ಕ್ರಿಕೆಟ್ ಅಭಿಮಾನಿಗಳು ಮಿಸ್ ಮಾಡಿಕೊಳ್ಳುವುದೇ ಇಲ್ಲ. ಇನ್ನು ಉಭಯ ತಂಡಗಳ ಸ್ಟಾರ್ ಆಟಗಾರರು ಒಂದೇ ತಂಡದ ಪರ ಆಡಿದರೆ, ಅಭಿಮಾನಿಗಳಿಗೆ ರಸದೌತಣ.
ಹೌದು.. ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ತಂಡದ ಸ್ಟಾರ್ ಆಟಗಾರರು ಒಂದೇ ತಂಡದ ಪರ ಅಖಾಡಕ್ಕೆ ಇಳಿಯುವುದನ್ನು ಮತ್ತೊಮ್ಮೆ ನೋಡುವ ಸಾಧ್ಯತೆ ಇದೆ. 2007ರಲ್ಲಿ ಕೊನೆಯ ಬಾರಿಗೆ ನಡೆದಿದ್ದ ಟೂರ್ನಿ ಮತ್ತೊಮ್ಮೆ ಆಯೋಜಿಸಲು ರೂಪುರೇಷೆಗಳನ್ನು ಸಿದ್ಧ ಪಡಿಸಿಕೊಳ್ಳಲಾಗುತ್ತದೆ. ಲಾಸ್ಟ್ ಟೈಮ್ ಆಫ್ರೋ-ಏಷ್ಯಾ ಕಪ್ ನಡೆದಾಗ ಸ್ಟಾರ್ ಆಟಗಾರರು ಒಂದೇ ಸೂರಿನಡಿ ಇದ್ದರು. ಈಗ 17 ವರ್ಷಗಳ ನಂತರ ಈ ಪಂದ್ಯಾವಳಿಯನ್ನು ಮತ್ತೆ ಆಯೋಜಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

ನಿಂತ ಟೂರ್ನಿಗೆ ಮರು ಜೀವ?
ಈ ಬಗ್ಗೆ ಆಫ್ರಿಕನ್ ಕ್ರಿಕೆಟ್ ಅಸೋಸಿಯೇಷನ್‌ನ ಹಂಗಾಮಿ ಅಧ್ಯಕ್ಷ ಅಂದರೆ ಎಸಿಎ, ತವೆಂಗ್ವಾ ಮುಕುಹ್ಲಾನಿ ಈ ಪಂದ್ಯಾವಳಿಯನ್ನು ಪುನರಾರಂಭಿಸಲು ದೊಡ್ಡ ಅಪ್‌ಡೇಟ್ ನೀಡಿದ್ದಾರೆ. ಈ ಕ್ರಿಕೆಟ್ ಟೂರ್ನಿಯನ್ನು ಮತ್ತೆ ಆರಂಭಿಸಲು ಆಫ್ರಿಕನ್ ಕ್ರಿಕೆಟ್ ಅಸೋಸಿಯೇಷನ್ 6 ಸದಸ್ಯರ ಮಧ್ಯಂತರ ಸಮಿತಿಯನ್ನು ಸಹ ರಚಿಸಿದೆ. ಈ ಮೂಲಕ ನಿಂತು ಹೋದ ಟೂರ್ನಿಗೆ ಮರು ಜೀವ ನೀಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಈ ಸಮಿತಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನೊಂದಿಗೆ ಚರ್ಚೆ ನಡೆಸಲು ಸಿದ್ಧತೆ ನಡೆಸಿದೆ.
ಎರಡು ಬಾರಿ ಟೂರ್ನಿ ಆಯೋಜನೆ
ಈ ಟೂರ್ನಿಯ ಇಲ್ಲಿಯ ವರೆಗೆ ಕೇವಲ ಎರಡು ಬಾರಿ ಮಾತ್ರ ಆಯೋಜನೆ ಗೊಂಡಿದೆ. ಒಂದು ಬಾರಿ ಆಫ್ರಿಕಾದಲ್ಲಿ 2005ರಲ್ಲಿ, ಇನ್ನೊಮ್ಮೆ ಭಾರತದಲ್ಲಿ 2007ರಲ್ಲಿ ನಡೆಸಲಾಗಿದೆ. ಆ ಬಳಿಕ ಯಾವುದೇ ಸರಣಿಗಳು ನಡೆದಿರಲಿಲ್ಲ. ಆದರೆ ಈ ಬಾರಿ ಮತ್ತೆ ಈ ಟೂರ್ನಿಗೆ ಜೀವ ಬರುವ ಲಕ್ಷಣಗಳು ಎದ್ದು ಕಾಣುತ್ತಿವೆ.
ಆಫ್ರೋ-ಏಷ್ಯಾ ಕಪ್ ಒಂದು ಇಂಟರ್ ಕಾಂಟೆನೆಂಟಲ್ ಪಂದ್ಯಾವಳಿ ಆಗಿರಲಿದೆ. ಈ ಪಂದ್ಯಗಳು ಏಷ್ಯಾ ಹಾಗೂ ಆಫ್ರಿಕಾ ಖಂಡಗಳ ನಡುವೆ ನಡೆಯಲಿದೆ. ಇದರಲ್ಲಿ ಇಬ್ಬರ ನಡುವೆ 3-3 ಪಂದ್ಯಗಳ ಸರಣಿಯನ್ನು ಆಯೋಜಿಸುವ ಗುರಿಯನ್ನು ಹೊಂದಲಾಗಿದೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳು ದ್ವೀಪಕ್ಷೀಯ ಸರಣಿಗಳನ್ನು ಸಹ ಆಡುತ್ತಿಲ್ಲ. ಅಲ್ಲದೆ ಪಾಕ್ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸುತ್ತಿಲ್ಲ. ಒಂದು ವೇಳೆ ಈ ಟೂರ್ನಿ ಆಯೋಜನೆಗೊಂಡರೆ ನಿಜಕ್ಕೂ ಅಭಿಮಾನಿಗಳು ಫುಲ್ ಖುಷ್ ಆಗುತ್ತಾರೆ. ಭಾರತದಲ್ಲಿ ಆರಂಭದಲ್ಲಿ ನಡೆದ ಐಪಿಎಲ್ ಟೂರ್ನಿಗಳಲ್ಲಿ ಪಾಕ್ ತಂಡದ ಸ್ಟಾರ್ ಆಟಗಾರರು ಆಡಿದ್ದರು. ಆದರೆ ಉಭಯ ದೇಶಗಳ ನಡುವಿನ ಹದಗೆಟ್ಟ ಸಂಬಂಧಿಂದ ಇವರಿಗೆ ಅವಕಾಶವನ್ನು ನಿರಾಕರಿಸಲಾಯಿತು. ಈಗ ಈ ಸರಣಿ ಆಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದರೆ, ಮತ್ತೊಮ್ಮೆ ಅಭಿಮಾನಿಗಳು ಫುಲ್ ಖುಷ್ ಆಗುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications