For Quick Alerts
ALLOW NOTIFICATIONS  
For Daily Alerts
 

Prithvi Shaw: ಮತ್ತೊಂದು ಸ್ಫೋಟಕ ಶತಕ ಬಾರಿಸಿದ ಪೃಥ್ವಿ ಶಾ; ದೂರದ ಇಂಗ್ಲೆಂಡ್‌ನಿಂದಲೇ ಸಂದೇಶ ರವಾನೆ

ಕಳೆದ ಪಂದ್ಯದಲ್ಲಿ ನಾರ್ಥಾಂಪ್ಟನ್‌ಶೈರ್ ಸ್ಟೀಲ್‌ಬ್ಯಾಕ್ಸ್ ತಂಡದ ಪರ ಅಮೋಘ ದ್ವಿಶತಕ ಬಾರಿಸಿದ್ದ ಭಾರತೀಯ ಬ್ಯಾಟರ್ ಪೃಥ್ವಿ ಶಾ ಅವರು ಭಾನುವಾರ, ಆಗಸ್ಟ್ 13ರಂದು ನಡೆದ ಒನ್-ಡೇ ಕಪ್‌ನಲ್ಲಿ ಮತ್ತೊಂದು ಅದ್ಭುತ ಶತಕ ದಾಖಲಿಸಿದರು.

ಈ ಮೂಲಕ 2023ರ ಒನ್-ಡೇ ಕಪ್‌ ಪಂದ್ಯಾವಳಿಯಲ್ಲಿ ನಾರ್ಥಾಂಪ್ಟನ್‌ಶೈರ್ ಸ್ಟೀಲ್‌ಬ್ಯಾಕ್ಸ್ ತಂಡವು ಡರ್ಹಾಮ್ ತಂಡದ ವಿರುದ್ಧ ಆರು ವಿಕೆಟ್‌ಗಳ ಜಯ ಗಳಿಸಲು ನೆರವಾದರು.

After Double-century, Prithvi Shaw Hits Another Century In The One-Day Cup 2023


ಭಾರತದ ಬ್ಯಾಟರ್ ಪೃಥ್ವಿ ಶಾ ತಮ್ಮ ಹಿಂದಿನ ಪಂದ್ಯದಲ್ಲಿ ದಾಖಲೆಯ 244 ರನ್ ಗಳಿಸಿದ್ದರು. ಇದೀಗ ಮತ್ತೊಂದು ಶತಕದೊಂದಿಗೆ ಅದೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರೆಸಿದರು.

ಪೃಥ್ವಿ ಶಾ 76 ಎಸೆತಗಳಲ್ಲಿ 15 ಬೌಂಡರಿ ಮತ್ತು 7 ಸಿಕ್ಸರ್ ಸಮೇತ ಅಜೇಯ 125 ರನ್ ಗಳಿಸಿದರು. ಇನ್ನು ಲೆಗ್-ಸ್ಪಿನ್ನರ್ ಸ್ಕಾಟ್ ಬೋರ್ತ್‌ವಿಕ್‌ ಅವರ 21ನೇ ಓವರ್‌ನಲ್ಲಿ ಸತತ ಎಸೆತಗಳಲ್ಲಿ ಎರಡು ಸಿಕ್ಸರ್‌ಗಳು ಮತ್ತು ಮೂರು ಬೌಂಡರಿಗಳೊಂದಿಗೆ 24 ರನ್‌ಗಳನ್ನು ದೋಚಿದರು.

ಡರ್ಹಾಮ್ ನೀಡಿದ್ದ 199 ರನ್ ಗುರಿಯನ್ನು ಪೃಥ್ವಿ ಶಾ ಬ್ಯಾಟಿಂಗ್ ಸಾಹಸದಿಂದ ನಾರ್ಥಾಂಪ್ಟನ್‌ಶೈರ್ ತಂಡ ಇನ್ನೂ 24.2 ಓವರ್‌ಗಳು ಬಾಕಿ ಇರುವಂತೆಯೇ ಆರು ವಿಕೆಟ್‌ಗಳಿಂದ ಗೆಲುವನ್ನು ಸಾಧಿಸಿತು.

23ರ ವರ್ಷದ ಪೃಥ್ವಿ ಶಾ ಅವರು ಆಗಸ್ಟ್ 9ರಂದು ಸೋಮರ್‌ಸೆಟ್ ವಿರುದ್ಧ ದ್ವಿಶತಕ ಸಿಡಿಸಿದ್ದರು. 153 ಎಸೆತಗಳಲ್ಲಿ 244 ರನ್ ಗಳಿಸಿದ ಅವರ ಬಿರುಸಿನ ಬ್ಯಾಟಿಂಗ್ ಪ್ರದರ್ಶನವು 50-ಓವರ್‌ಗಳ ಇತಿಹಾಸದಲ್ಲಿ ವೈಯಕ್ತಿಕ ಅತಿ ಹೆಚ್ಚು ಸ್ಕೋರ್ ಸೇರಿದಂತೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಹಲವಾರು ದಾಖಲೆಗಳನ್ನು ಮುರಿದರು.

ಮುಂಬೈ ಬ್ಯಾಟರ್ ಪೃಥ್ವಿ ಶಾ ಅವರ ಆ ಇನ್ನಿಂಗ್ಸ್‌ನಲ್ಲಿ 28 ಬೌಂಡರಿ ಮತ್ತು 11 ಸಿಕ್ಸರ್‌ಗಳು ಒಳಗೊಂಡಿದ್ದವು. ಆ ಪಂದ್ಯದಲ್ಲಿ ನಾರ್ಥಾಂಪ್ಟನ್‌ಶೈರ್ ತಂಡವು 87 ರನ್‌ಗಳಿಂದ ಸೋಮರ್‌ಸೆಟ್ ತಂಡವನ್ನು ಮಣಿಸಿತ್ತು.

2023ರ ಒನ್-ಡೇ ಕಪ್‌ನಲ್ಲಿ ಬಲಗೈ ಆಟಗಾರ ಪೃಥ್ವಿ ಶಾ ಪ್ರಸ್ತುತ ನಾಲ್ಕು ಪಂದ್ಯಗಳಿಂದ 429 ರನ್‌ಗಳೊಂದಿಗೆ 143ರ ಅದ್ಭುತ ಸರಾಸರಿಯಲ್ಲಿ ಅತಿ ಹೆಚ್ಚು ರನ್ ಸ್ಕೋರರ್ ಆಗಿದ್ದಾರೆ. ಅವರ ನಂತರ ಭಾರತದ ಮತ್ತೊಬ್ಬ ಬ್ಯಾಟರ್ ಚೇತೇಶ್ವರ ಪೂಜಾರ ಅವರು ಐದು ಇನ್ನಿಂಗ್ಸ್‌ಗಳಲ್ಲಿ 329 ರನ್ ಗಳಿಸಿದ್ದಾರೆ.

2021ರಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ ತಂಡದ ಪರ ಕೊನೆಯ ಬಾರಿಗೆ ಆಡಿದ್ದರಿಂದ ಪೃಥ್ವಿ ಶಾ ಭಾರತ ತಂಡಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾರೆ.

ಪೃಥ್ವಿ ಶಾ ಕಳೆದ ತಿಂಗಳು ದುಲೀಪ್ ಟ್ರೋಫಿಯ ಆರಂಭಿಕ ಋತುವಿನಲ್ಲಿ ಪಶ್ಚಿಮ ವಲಯ ತಂಡಕ್ಕಾಗಿ ಆಡಿದ್ದರು, ಆದರೆ ಗಮನಾರ್ಹ ಪ್ರದರ್ಶನ ನೀಡಲು ವಿಫಲರಾಗಿದ್ದರು.

ಇನ್ನು ಈ ಪಂದ್ಯದಲ್ಲಿ ಲ್ಯೂಕ್ ಪ್ರಾಕ್ಟರ್ ಅವರ ಅಸಾಧಾರಣ ಬೌಲಿಂಗ್ ಪ್ರದರ್ಶನವು ಡರ್ಹಾಮ್ ವಿರುದ್ಧ ನಾರ್ಥಾಂಪ್ಟನ್‌ಶೈರ್ ತಂಡದ ಪ್ರಾಬಲ್ಯಕ್ಕೆ ಕಾರಣವಾಯಿತು.

Story first published: Monday, August 14, 2023, 12:37 [IST]
Other articles published on Aug 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+