ಮ್ಯಾಕ್ಸ್‌ವೆಲ್ ಸುನಾಮಿಗೆ ಬಹುತೇಕ ಕಮರಿದ ಈ ತಂಡದ ಸೆಮಿಫೈನಲ್ ಆಸೆ
ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ನಲ್ಲಿ ಆಡಲು ನಗುತ್ತಾ ಬಂದಿದ್ದ ಪಾಕಿಸ್ತಾನ ತಂಡದ ಮುಖ ಬಾಡಿದೆ. ಉಳಿದ ಪಂದ್ಯಗಳ ಲೆಕ್ಕಾಚಾರ ಹಾಗೂ ಪಾಕ್ ತಂಡದ ಗೆಲುವು, ಬಾಬರ್ ಪಡೆಯ ಮುಂದಿನ ಪಯಣವನ್ನು ನಿರ್ಧರಿಸಲಿದೆ. ಇನ್ನು ಬುಧವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗ್ಲೇನ್ ಮ್ಯಾಕ್ಸ್‌ವೆಲ್ ಆಡಿದ ಆಟದಿಂದ ಪಾಕಿಸ್ತಾನ ತಂಡದ ಸೆಮಿಫೈನಲ್ ಆಸೆ ಕಮರಿದಂತೆ ಕಾಣುತ್ತಿದೆ.
ಗ್ಲೆನ್ ಮ್ಯಾಕ್ಸ್‌ವೆಲ್ ನೆದರ್ಲೆಂಡ್ಸ್ ವಿರುದ್ಧ ವಿಧ್ವಂಸಕ ಬ್ಯಾಟಿಂಗ್ ನಡೆಸಿದರು. ಮ್ಯಾಕ್ಸ್‌ವೆಲ್ ಸುನಾಮಿಯ ಆಟಕ್ಕೆ ಇಸ್ಲಾಮಾಬಾದ್‌ನಲ್ಲಿ ಕುಳಿತಿದ್ದ ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳ ಸೆಮಿಫೈನಲ್ ಆಸೆ ಕೊಚ್ಚಿ ಹೋಗಿದೆ.

ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಲು ಸಾಧ್ಯವಾಗದ ಆಸ್ಟ್ರೇಲಿಯ ತಂಡಕ್ಕೆ ಡೇವಿಡ್ ವಾರ್ನರ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಶತಕದ ಆಟದ ನೆರವಿನಿಂದ ನೆದರ್ಲೆಂಡ್ಸ್ ವಿರುದ್ಧ ಆಸೀಸ್ ವಿಶ್ವಕಪ್ ಇತಿಹಾಸದಲ್ಲಿಯೇ ಅತಿ ದೊಡ್ಡ ಗೆಲುವು ಸಾಧಿಸಿತು.
309 ರನ್ ಗಳ ಗೆಲುವಿನ ಪರಿಣಾಮ ಆಸ್ಟ್ರೇಲಿಯಾ ಇದೀಗ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಅವರ ನೆಟ್ ರನ್ ರೇಟ್ ಕೂಡ ಅತ್ಯುತ್ತಮವಾಗಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ 40ನೇ ಓವರ್ ನಲ್ಲಿ ಬ್ಯಾಟಿಂಗ್ ಗೆ ಬಂದ ಮ್ಯಾಕ್ಸ್ ವೆಲ್ ನೆದರ್ಲೆಂಡ್ಸ್ ಬೌಲರ್ ಗಳನ್ನು ಅಟ್ಟಾಡಿಸಿಕೊಂಡು ಹೊಡೆದರು. ಮ್ಯಾಕ್ಸಿ 44 ಎಸೆತಗಳಲ್ಲಿ 9 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಹೊಡೆದರು.
ಗ್ಲೇನ್ 240.91 ಸ್ಟ್ರೈಕ್ ರೇಟ್‌ನಲ್ಲಿ 106 ರನ್
ಈ ವೇಳೆ ಗ್ಲೇನ್ 240.91 ಸ್ಟ್ರೈಕ್ ರೇಟ್‌ನಲ್ಲಿ 106 ರನ್ ಗಳಿಸಿದರು. ಇದರ ಪರಿಣಾಮ ಹಲವು ತಂಡಗಳು ಸೆಮಿಫೈನಲ್ ರೇಸ್‌ನಿಂದ ಬಹುತೇಕ ಹೊರಗುಳಿದಿವೆ. ಐಸಿಸಿ ಪ್ರಕಾರ, ಸೆಮಿಫೈನಲ್ ತಲುಪಲು, 7 ಗೆಲುವುಗಳು ಅಂದರೆ 14 ಅಂಕಗಳ ಅಗತ್ಯವಿದೆ, ಆದರೆ ವಿಶೇಷ ಸಂದರ್ಭಗಳಲ್ಲಿ ಅಂದರೆ 12 ಅಂಕಗಳನ್ನು ಸಹ ಅಗ್ರ-4 ರಲ್ಲಿ ಪ್ರವೇಶ ಪಡೆಯಬಹುದು. ಟೂರ್ನಿಯ ಮುಂಬರುವ ಪಂದ್ಯಗಳ ಫಲಿತಾಂಶದಿಂದ ಟಾಪ್ 4 ಸನ್ನಿವೇಶ ಅರ್ಥವಾಗುತ್ತದೆ.
ಪ್ರಸ್ತುತ ಭಾರತ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ಗೆ ಸಲೀಸಾಗಿ ಎಂಟ್ರಿ ಪಡೆಯುವ ಹಾಗೆ ಕಾಣುತ್ತಿವೆ. ಭಾರತ 5 ಗೆಲುವಿನ ನಂತರ 10, ದಕ್ಷಿಣ ಆಫ್ರಿಕಾ 5 ರಲ್ಲಿ 4 ಗೆಲುವಿನ ನಂತರ 8, ಮತ್ತು ನ್ಯೂಜಿಲೆಂಡ್ 5 ರಲ್ಲಿ 4 ಗೆಲುವಿನ ನಂತರ 8 ಅಂಕಗಳನ್ನು ಹೊಂದಿದೆ. ಈ ಎಲ್ಲ ತಂಡಗಳ ನೆಟ್ ರನ್ ರೇಟ್ ಪ್ಲಸ್ ನಲ್ಲಿದೆ.
ಟಾಪ್-4 ನಿಂದ ಹೊರಗಿರುವ ತಂಡಗಳು
ಟಾಪ್-4 ನಿಂದ ಹೊರಗಿರುವ ತಂಡಗಳು ಮತ್ತು ಸೆಮಿಫೈನಲ್ ತಲುಪಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ. ಪಾಕಿಸ್ತಾನ 5ನೇ ಸ್ಥಾನದಲ್ಲಿದ್ದು, ಅಫ್ಘಾನಿಸ್ತಾನ ಆರನೇ ಸ್ಥಾನದಲ್ಲಿದೆ. ಇಬ್ಬರೂ ತಲಾ 2 ಗೆಲುವಿನಿಂದ 4 ಅಂಕಗಳನ್ನು ಹೊಂದಿದ್ದಾರೆ. ಈ ಎರಡೂ ತಂಡಗಳಿಗೂ 12 ಅಂಕಗಳನ್ನು ಅಂದರೆ 6 ಗೆಲುವುಗಳನ್ನು ತಲುಪುವ ಅವಕಾಶವಿದೆ.
ಶ್ರೀಲಂಕಾ ಮತ್ತು ಇಂಗ್ಲೆಂಡ್ ಕೂಡ 12 ಅಂಕ ತಲುಪುವ ಅವಕಾಶ
ಇವರಲ್ಲದೆ ಶ್ರೀಲಂಕಾ ಮತ್ತು ಇಂಗ್ಲೆಂಡ್ ಕೂಡ 12 ಅಂಕ ತಲುಪುವ ಅವಕಾಶ ಹೊಂದಿದೆ. ಇಬ್ಬರೂ 4-4 ಪಂದ್ಯಗಳನ್ನು ಆಡಿದ್ದು, ತಲಾ ಒಂದು ಪಂದ್ಯ ಗೆದ್ದಿದೆ. ಇವರಿಗೆಲ್ಲ ಪ್ರತಿ ಪಂದ್ಯವೂ ಸೆಮಿಫೈನಲ್.
ಮತ್ತೊಂದೆಡೆ, ಬಾಂಗ್ಲಾದೇಶ ಮತ್ತು ನೆದರ್ಲೆಂಡ್ ತಲಾ 5 ಪಂದ್ಯಗಳನ್ನು ಆಡಿದ್ದು, ಎರಡೂ ತಂಡಗಳು ತಲಾ ಒಂದು ಜಯವನ್ನು ಹೊಂದಿವೆ. ಹೀಗಾಗಿ ಸೆಮಿಫೈನಲ್ ತಲುಪುವುದು ಈ ತಂಡಗಳಿಗೆ ಬಹುತೇಕ ಅಸಾಧ್ಯ. ಆದರೆ ಗೆಲುವಿನೊಂದಿಗೆ ಟೂರ್ನಿಗೆ ಗುಡ್ ಬೈ ಹೇಳುವ ಪ್ಲ್ಯಾನ್ ಮಾಡಿಕೊಂಡಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications