Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್ ತೆಂಡೂಲ್ಕರ್, ಯೂಸುಫ್ ನಂತರ ಎಸ್ ಬದ್ರಿನಾಥ್‌ಗೂ ಕೊರೊನಾ ಪಾಸಿಟಿವ್

After Sachin Tendulkar, Yusuf Pathan, S Badrinath also tests positive for Covid-19

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಹಾಗೂ ಯೂಸುಫ್ ಪಠಾಣ್ ಶನಿವಾರ ಕೊರೊನಾ ವೈರಸ್‌ಗೆ ತುತ್ತಾಗಿರುವುದು ದೃಢಪಟ್ಟಿತ್ತು. ಈಗ ಮತ್ತೋರ್ವ ಮಾಜಿ ಕ್ರಿಕೆಟಿಗ ಎಸ್ ಬದ್ರಿನಾಥ್ ಕೂಡ ಕೊರೊನಾ ವೈರಸ್‌ಗೆ ತುತ್ತಾಗಿರುವುದು ಖಚಿತವಾಗಿದೆ. ಈ ಎಲ್ಲಾ ಆಟಗಾರರು ಇತ್ತೀಚೆಗಷ್ಟೇ ಅಂತ್ಯವಾದ ರೋಡ್‌ಸೇಫ್ಟಿ ವರ್ಲ್ಡ್ ಸೀರೀಸ್‌ನಲ್ಲಿ ಜೊತೆಯಾಗಿ ಆಡಿದ್ದರು.

ಟ್ವಿಟ್ಟರ್ ಮೂಲಕ ಈ ಸುದ್ದಿಯನ್ನು ಎಸ್ ಬದ್ರಿನಾಥ್ ಖಚಿತಪಡಿಸಿದ್ದಾರೆ. ಸಣ್ಣ ಲಕ್ಷಣಗಳು ಮಾತ್ರವೇ ಕಾಣಿಸಿಕೊಂಡಿದ್ದು ತಾನು ಮನೆಯಲ್ಲಿಯೇ ಐಸೋಲೇಶನ್‌ನಲ್ಲಿ ಇರುವುದಾಗಿ ಎಸ್ ಬದ್ರಿನಾಥ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

"ಅಗತ್ಯವಾದ ಎಲ್ಲಾ ಕ್ರಮಗಳನ್ನು ನಾನು ತೆಗೆದುಕೊಂಡಿದ್ದೆ. ನಾನು ಸತತವಾಗಿ ಪರೀಕ್ಷೆಗೆ ಒಳಪಟ್ಟಿದ್ದೆ. ಹಾಗಿದ್ದರೂ ನಾನು ಕೊರೊನಾ ವೈರಸ್‌ಗೆ ತುತ್ತಾಗಿರುವುದು ತಿಳಿದು ಬಂದಿದೆ. ಕೆಲ ಸಣ್ಣ ಪ್ರಮಾಣಗದ ಲಕ್ಷಣಗಳು ಕಾಣಿಸಿಕೊಂಡಿದೆ" ಎಂದು ಎಸ್ ಬದ್ರಿನಾಥ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

"ಎಲ್ಲಾ ಮಾರ್ಗಸೂಚಿಗಳನ್ನು ನಾನು ಪಾಲಿಸುತ್ತೇನೆ. ಮನೆಯಲ್ಲಿಯೇ ನಾನು ಪ್ರತ್ಯೇಕವಾಗಿರುತ್ತೇನೆ. ವೈದ್ಯರ ಸಲಹೆಯಂತೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಿದ್ದೇನೆ" ಎಂದು ಬದ್ರಿನಾಥ್ ಟ್ವೀಟ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬದ್ರಿನಾಥ್ ಭಾರತದ ಪರವಾಗಿ ಎರಡು ಟೆಸ್ಟ್, ಏಳು ಏಕದಿನ ಹಾಗೂ ಒಂದು ಟಿ20 ಪಂದ್ಯದಲ್ಲಿ ಪ್ರತಿನಿಧಿಸಿದ್ದರು.

ರೋಡ್ ಸೇಫ್ಟಿ ವರ್ಲ್ಡ್ ಟೂರ್ ಸರಣಿಗಾಗಿ ಎಸ್ ಬದ್ರಿನಾಥ್, ಯೂಸುಫ್ ಪಠಾಣ್ ಹಾಗೂ ಸಚಿನ್ ತೆಂಡೂಲ್ಕರ್ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು. ಇಂಡಿಯಾ ಲೆಜೆಂಡ್ಸ್ ತಂಡದ ಪರವಾಗಿ ರಾಯ್‌ಪುರದಲ್ಲಿ ಪ್ರೇಕ್ಷಕರ ಸಮ್ಮುಖದಲ್ಲಿ ಈ ಆಟಗಾರರು ಆಡಿದ್ದರು.

Story first published: Monday, March 29, 2021, 8:09 [IST]
Other articles published on Mar 29, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+