IPL 2023: ವಿಶ್ವಕಪ್ ಯಶಸ್ಸಿನ ಬಳಿಕ ಐಪಿಎಲ್ ಮಿನಿ ಹರಾಜಿಗೆ ಹೆಸರು ಸಲ್ಲಿಸಿದ ಇಂಗ್ಲೆಂಡ್ ಆಟಗಾರ

ಇಂಗ್ಲೆಂಡ್‌ನ ಸ್ಪಿನ್ನರ್ ಆದಿಲ್ ರಶೀದ್ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ವೇಗಿಗಳಿಗೆ ಸಹಕಾರಿಯಾಗುವ ಪಿಚ್‌ನಲ್ಲಿ ಕೂಡ ರಶೀದ್ ತಮ್ಮ ಸಾಮರ್ಥ್ಯ ತೋರಿಸಿದರು. ಅದರಲ್ಲೂ ಪಾಕಿಸ್ತಾನದ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಪಾಯಕಾರಿ ಬ್ಯಾಟರ್ ಮೊಹಮ್ಮದ್ ಹ್ಯಾರಿಸ್ ಮತ್ತು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ವಿಕೆಟ್ ಪಡೆದು ಮಿಂಚಿದರು.
ಟಿ20 ವಿಶ್ವಕಪ್‌ನಲ್ಲಿ ಯಶಸ್ಸು ಕಂಡ ಬಳಿಕ ಆದಿಲ್ ರಶೀದ್ ಐಪಿಎಲ್ 2023ರ ಮಿನಿ ಹರಾಜಿಗಾಗಿ ತಮ್ಮ ಹೆಸರು ಸಲ್ಲಿಸಿದ್ದಾರೆ. ಐಪಿಎಲ್‌ನಲ್ಲಿ ಅವರು ಉತ್ತಮ ಬೇಡಿಕೆ ಪಡೆದುಕೊಳ್ಳುವ ನಿರೀಕ್ಷೆ ಇದೆ. ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿರುವ ಮಿನಿ ಹರಾಜಿನಲ್ಲಿ ರಶೀದ್‌ರನ್ನು ಖರೀದಿಸಲು ಹಲವು ತಂಡಗಳು ಪೈಪೋಟಿಗೆ ಬೀಳುವ ಸಾಧ್ಯತೆ ಇದೆ.
ವಿಶ್ವಕಪ್‌ನಲ್ಲಿ ಆರು ಪಂದ್ಯಗಳನ್ನಾಡಿದ ಆದಿಲ್ ರಶೀದ್ ಕೇವಲ 4 ವಿಕೆಟ್ ಪಡೆದರು. ಹೆಚ್ಚಿನ ವಿಕೆಟ್ ಪಡೆಯುವಲ್ಲಿ ಅವರು ವಿಫಲರಾದರು, 6.12ರ ಅತ್ಯುತ್ತಮ ಎಕನಾಮಿಯಲ್ಲಿ ಬೌಲಿಂಗ್ ಮಾಡಿದರು. ಎದುರಾಳಿಗಳು ಹೆಚ್ಚಿನ ರನ್ ಗಳಿಸಲು ರಶೀದ್ ಆಸ್ಪದ ಮಾಡಿಕೊಡಲಿಲ್ಲ. ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ವಿಕೆಟ್ ಪಡೆಯುವ ಮೂಲಕ ಆದಿಲ್ ರಶೀದ್ ಮಾರಕವಾಗಿದ್ದರು.

ಭಾರತದ ಪಿಚ್‌ಗಳಲ್ಲಿ ರಶೀದ್ ಇನ್ನೂ ಮಾರಕ
ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆದಿಲ್ ರಶೀದ್, ಸ್ಪಿನ್ ಬೌಲಿಂಗ್‌ಗೆ ಸಹಕಾರಿಯಾಗಿರುವ ಭಾರತೀಯ ಪಿಚ್‌ಗಳಲ್ಲಿ ಎದುರಾಳಿ ತಂಡಕ್ಕೆ ಮಾರಕವಾಗುವ ಸಾಧ್ಯತೆ ಇದೆ. ಇದೇ ವಿಚಾರ ಅವರ ಬೇಡಿಕೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ.
ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ನಂತರ ಮಾಧ್ಯಮದ ಜೊತೆ ಮಾತನಾಡಿದ ಆದಿಲ್ ರಶೀದ್, "ನಾನು ಈ ಬಾರಿಯ ಐಪಿಎಲ್ ಹರಾಜಿನಲ್ಲಿ ನನ್ನ ಹೆಸರನ್ನು ನೀಡುತ್ತೇನೆ" ಎಂದು ಹೇಳಿದ್ದಾರೆ. ಯಾವುದೇ ಐಪಿಎಲ್ ಫ್ರಾಂಚೈಸಿಯೊಂದಿಗೆ ಮಾತುಕತೆ ನಡೆಸಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಇಲ್ಲ ಎಂದು ಉತ್ತರಿಸಿದ್ದಾರೆ.
ಫೈನಲ್ ಪಂದ್ಯದಲ್ಲಿ ಬಾಬರ್ ಅಜಮ್ ವಿಕೆಟ್ ಪಡೆಯಲು ಗೂಗ್ಲಿ ಎಸೆತಗಳ ಮೊರೆ ಹೋಗಿದ್ದಾಗಿ ಅವರು ತಿಳಿಸಿದರು. ನಿಧಾನ ಗತಿಯಲ್ಲಿ ಬೌಲಿಂಗ್ ಮಾಡುವ ಮೂಲಕ ಅವರನ್ನು ಔಟ್ ಮಾಡಲು ಯೋಜಿಸಿದೆ ಎಂದು ಹೇಳಿದರು.
"ಶದಾಬ್ ಖಾನ್ ಮತ್ತು ಲಿಯಾಮ್ ಲಿವಿಂಗ್ ಸ್ಟೋನ್ ಸ್ವಲ್ಪ ವೇಗವಾಗಿ ಬೌಲ್ ಮಾಡುತ್ತಾರೆ, ಆದರೆ ನಾನು ಗಾಳಿಯಲ್ಲಿ ನಿಧಾನವಾಗಿ ಬೌಲ್ ಮಾಡುತ್ತೇನೆ, ವಿಕೆಟ್ ಪಡೆಯಲು ಅದು ಉತ್ತಮ ಮಾರ್ಗ" ಎಂದು ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications