ಮಾರಾಟಕ್ಕಿದ್ದಾರೆ ಪಾಕಿಸ್ತಾನದ ವೇಗದ ಬೌಲರ್ ವಹಾಬ್ ರಿಯಾಜ್ !
ಲಂಡನ್, ಜೂನ್ 14: ಅಚ್ಚರಿಯಾದರೂ ಇದು ಸತ್ಯ. ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲರ್ ವಹಾಬ್ ರಿಯಾಜ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಯೊಬ್ಬ ಹರಾಜಿಗಿಟ್ಟಿದ್ದಾನೆ.
ಆನ್ ಲೈನ್ ಮಾರಾಟ ಜಾಲತಾಣವಾದ ಇ ಬೇ (ebay)ನಲ್ಲಿ ರಿಯಾಜ್ ಅವರನ್ನು ಮಾರಾಟಕ್ಕಿಟ್ಟಿದ್ದಾನೆ.
ಇದೇ ತಿಂಗಳ 4ರಂದು ಆರಂಭವಾದ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿನ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಪಡೆ, ಭಾರತ ತಂಡವನ್ನು ಎದುರಿಸಿ, ಸೋಲು ಅನುಭವಿಸಿತ್ತು.

ಆ ಪಂದ್ಯದಲ್ಲಿ ದುಬಾರಿ ಬೌಲರ್ ಆಗಿ ಪರಿಣಮಿಸಿದ್ದ ರಿಯಾಜ್, ಹೆಚ್ಚಿನ ರನ್ ನೀಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ಆ ಪಂದ್ಯದ ನಂತರ, ಗಾಯದ ಸಮಸ್ಯೆಯಿಂದಾಗಿ ಅವರು ತಂಡದಿಂದ ಹೊರಗುಳಿಯಬೇಕಾಯಿತು. ಆದರೂ, ಭಾರತ ವಿರುದ್ಧದ ಪಂದ್ಯದಲ್ಲಿ ಅವರು ತೋರಿದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ, ಆ ಅಭಿಮಾನಿ ಆತನನ್ನು ಮಾರಾಟಕ್ಕಿಟ್ಟಿದ್ದಾನೆ. ಆ ಅಭಿಮಾನಿಯ ಹೆಸರು ಬಹಿರಂಗವಾಗಿಲ್ಲ.
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications