ಅಹಮದಾಬಾದ್ ನಲ್ಲಿ ರೋಹಿತ್ ಶರ್ಮಾ ಪಾಲಾಗಲಿದೆ ವಿಶ್ವದ ಅತಿ ಚಿಕ್ಕ ವಿಶ್ವಕಪ್ ಟ್ರೋಫಿ
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಯಾವುದೇ ಟೂರ್ನಿಯಲ್ಲಿ ನಡೆದರೂ ಹೈವೋಲ್ಟೇಜ್ ಇದ್ದೇ ಇರುತ್ತದೆ. ದ್ವಿಪಕ್ಷೀಯ ಸರಣಿ ಆದರೂ ಸರಿ, ವಿಶ್ವಕಪ್ ಆಗಿದ್ದರೂ ಸಹ ಈ ಎರಡೂ ದೇಶಗಳ ನಡುವಿನ ಕಾದಾಟವನ್ನು ನೋಡಲು ವಿಶ್ವ ಕ್ರಿಕೆಟ್ ಕಾದು ಕುಳಿತಿರುತ್ತದೆ.
ಈ ಬಾರಿಯ ವಿಶ್ವಕಪ್ ನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕಾದಾಟ ನಡೆಸಲಿವೆ. 1.25 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ತಂಡವು ಮೈದಾನಕ್ಕಿಳಿಯಲಿದೆ.

ಈ ಸಂದರ್ಭದಲ್ಲಿ ಅಹಮದಾಬಾದ್ ನಲ್ಲಿ ನೆಲೆಸಿರುವ ರೋಹಿತ್ ಶರ್ಮಾ ಅವರ ಅಭಿಮಾನಿಯೊಬ್ಬರು ಅವರಿಗಾಗಿ ಅದ್ಭುತ ಉಡುಗೊರೆಯನ್ನು ಸಿದ್ಧಪಡಿಸಿದ್ದಾರೆ. ರೋಹಿತ್ ಶರ್ಮಾ ಅವರ ಈ ಅಭಿಮಾನಿ ವೃತ್ತಿಯಲ್ಲಿ ಅಕ್ಕಸಾಲಿಗ, ಅವರು ಚಿನ್ನ ಮತ್ತು ಬೆಳ್ಳಿಯೊಂದಿಗೆ ಕೆಲಸ ಮಾಡುತ್ತಾರೆ.
ಅಹಮದಾಬಾದ್ ನಲ್ಲಿ ವಾಸಿಸುವ ಈ ಅಕ್ಕಸಾಲಿಗ ಚಿನ್ನದ ವಿಶ್ವಕಪ್ ಟ್ರೋಫಿಯನ್ನು ನಿರ್ಮಿಸಿದ್ದಾರೆ. ಈ ಚಿನ್ನದ ವಿಶ್ವಕಪ್ ತೂಕ 0.900 ಗ್ರಾಂ. ಅವರು ಈ ಚಿನ್ನದ ವಿಶ್ವಕಪ್ ಟ್ರೋಫಿಯನ್ನು ರೋಹಿತ್ ಶರ್ಮಾಗೆ ಉಡುಗೊರೆಯಾಗಿ ನೀಡಲಿದ್ದಾರೆ.
ರೋಹಿತ್ ಶರ್ಮಾಗೆ ಚಿನ್ನದ ವಿಶ್ವಕಪ್ ಟ್ರೋಫಿ ಖಂಡಿತಾ
ರೋಹಿತ್ ಶರ್ಮಾಗೆ ಚಿನ್ನದ ವಿಶ್ವಕಪ್ ಟ್ರೋಫಿ ಖಂಡಿತಾ ಸಿಗುತ್ತದೆ, ಆದರೆ ನಿಜವಾದ ವಿಶ್ವಕಪ್ ಟ್ರೋಫಿ ಪಡೆಯಲು ರೋಹಿತ್ ಶರ್ಮಾ ತಂಡ ಮುಂದಿನ 40 ದಿನಗಳ ಕಾಲ ಅತ್ಯುತ್ತಮ ಕ್ರಿಕೆಟ್ ಆಡಬೇಕಿದೆ. ಈ ಬಾರಿಯ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ತನ್ನ ಆರಂಭಿಕ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ತನ್ನ ಅಭಿಯಾನವನ್ನು ಅಮೋಘವಾಗಿ ಆರಂಭಿಸಿದೆ.
ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ಭಾರತ, ನಂತರ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿತು. ಈಗ ಪಾಕಿಸ್ತಾನದ ವಿರುದ್ಧ ಗೆಲುವಿನ ಕನಸು ಕಾಣುತ್ತಿದೆ. ಪಾಕಿಸ್ತಾನ ತನ್ನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾವನ್ನು ನೀಡಿದ್ದ 344 ರನ್ ಗಳ ಗುರಿಯನ್ನು ಬೆನ್ನಟ್ಟುವ ಮೂಲಕ ಗೆಲುವನ್ನು ದಾಖಲಿಸಿತ್ತು.
ವಿಶ್ವಕಪ್ ಇತಿಹಾಸದಲ್ಲಿ ಅತಿದೊಡ್ಡ ಯಶಸ್ವಿ ರನ್ ಚೇಸ್
ಇದು ODI ವಿಶ್ವಕಪ್ ಇತಿಹಾಸದಲ್ಲಿ ಅತಿದೊಡ್ಡ ಯಶಸ್ವಿ ರನ್ ಚೇಸ್. ಇಂತಹ ಪರಿಸ್ಥಿತಿಯಲ್ಲಿ ಪಾಕ್ ತಂಡದ ನೈತಿಕ ಸ್ಥೈರ್ಯ ಸಾಕಷ್ಟು ಹೆಚ್ಚಿದೆಯಾದರೂ ಭಾರತದ ಮುಂದೆ ಅವರ ಸವಾಲು ದೊಡ್ಡದು. ಭಾರತ ತಂಡದ ವೇಗಿಗಳಾದ ಸ್ಪಿನ್ ಬೌಲರ್ ಗಳೂ ಹಾಗೂ ವೇಗದ ಬೌಲರ್ ಗಳು ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ.
ಕುಲದೀಪ್ ಯಾದವ್ ಅವರ ಸ್ಪಿನ್ ಮತ್ತು ಬುಮ್ರಾ ಅವರ ವೇಗದ ಮುಂದೆ ಪಾಕಿಸ್ತಾನದ ಬ್ಯಾಟ್ಸಮ್ಯಾನ್ ಗಳು ರನ್ ಗಳಿಸುವುದು ಸುಲಭವಲ್ಲ. ಇದೇ ಸಮಯದಲ್ಲಿ, ಕಳೆದ ಕೆಲವು ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ಕೂಡ ಅದ್ಭುತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡವನ್ನು ಸೋಲಿಸುವುದು ಪಾಕಿಸ್ತಾನಕ್ಕೆ ತುಂಬಾ ಕಷ್ಟಕರವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications