IND vs WI Test: ರನ್ ಕಲೆ ಹಾಕಲು ವಿಂಡೀಸ್ ಬ್ಯಾಟರ್‌ಗಳ ಪರದಾಟ:162 ರನ್ಗೆ ಕಟ್ಟಿಹಾಕಿದ ಭಾರತ
ಅಹಮದಾಬಾದ್‌ನಲ್ಲಿ ಇಂದಿನಿಂದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮಹತ್ವದ ಟಾಸ್ ಪ್ರವಾಸಿ ತಂಡದ ಪಾಲಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆಲ್ಲುತ್ತಿದ್ದಂತೆ ವಿಂಡೀಸ್ ಬ್ಯಾಟಿಂಗ್ ಮಾಡಲು ಮುಂದಾಯಿತು. ಈ ವೇಳೆ ವಿಂಡೀಸ್ ತಂಡದ ಬ್ಯಾಟರ್‌ಗಳು ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು. ಟೀಮ್ ಇಂಡಿಯಾದ ವೇಗದ ಬೌಲರ್‌ಗಳು ಆರಂಭದಲ್ಲಿ ಆರ್ಭಟ ನಡೆಸಿದರು.
ಆರಂಭಿಕರಾದ ಟಾಗೆನರಿನ್ ಚಂದ್ರಪಾಲ್ (0) ಹಾಗೂ ಜಾನ್ ಕ್ಯಾಂಪ್‌ಬೆಲ್ (8) ರನ್ ಕಲೆ ಹಾಕುವಲ್ಲಿ ವಿಫಲರಾದರು. ಚಂದ್ರಪಾಲ್ ಅವರಿಗೆ ಸಿರಾಜ್ ಖೆಡ್ಡಾ ತೋಡಿದರು. ಇವರು ಎಸೆದ ಬ್ಯಾಕ್ ಆಫ್ ಲೆಂಥ್ ಎಸೆತವನ್ನು ತಪ್ಪಾಗಿ ಗ್ರಹಿಸಿದ ಚಂದ್ರಪಾಲ್ ಜುರೇಲ್‌ಗೆ ಕ್ಯಾಚ್ ನೀಡಿದರು. ಇನ್ನು ಜಸ್ಪ್ರಿತ್ ಬುಮ್ರಾ ಸಹ ತಮ್ಮ ಬಿಗುವಿನ ದಾಳಿಯಿಂದ ಕ್ಯಾಂಪ್‌ಬೆಲ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಈ ವಿಕೆಟ್ ಪಡೆಯಲು ಟೀಮ್ಇಂಡಿಯಾ ಡಿಆರ್‌ಎಸ್ ಪ್ರಯೋಗಿಸಿ ಯಶಸ್ಸು ಕಂಡಿತು.

ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ ಬ್ರಾಂಡನ್ ಕಿಂಗ್ ಮೊಹಮ್ಮದ್ ಸಿರಾಜ್ ಸೀಮ್ ಎಸೆತವನ್ನು ತಪ್ಪಾಗಿ ಜಡ್ಜ್ ಮಾಡಿ ಬಿಡಲು ಪ್ರಯತ್ನಿಸಿದರು. ಚೆಂಡು ನೇರವಾಗಿ ಬಂದು ಮಿಡ್ಲ್ ಸ್ಟಂಪ್‌ಗೆ ಮುತ್ತಿಟ್ಟಿತು. ಅಲಿಕ್ ಅಥಾನಾಜೆ ಸಹ ಇಲ್ಲದ ಹೊಡೆತಕ್ಕೆ ಮುಂದಾಗಿ ಎರಡನೇ ಸ್ಲಿಪ್‌ನಲ್ಲಿದ್ದ ಕೆಎಲ್ ರಾಹುಲ್ ಅವರಿಗೆ ವಿಕೆಟ್ ಒಪ್ಪಿಸಿದರು. ಶಾಯ್ ಹೋಪ್ ಸಹ ಹೊರಗಡೆ ಬಿದ್ದ ಚೆಂಡನ್ನು ಬಾರಿಸಲು ಹೋಗಿ ಕ್ಲೀನ್ ಬೋಲ್ಡ್ ಆದರು. ಭೋಜನ ವಿರಾಮಕ್ಕೆ ವಿಂಡೀಸ್ 90 ರನ್‌ಗಳಿಗೆ 5 ವಿಕೆಟ್ ಕಳೆಕೊಂಡಿತ್ತು.
ವಿಂಡೀಸ್ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಜಸ್ಟಿನ್ ಗ್ರೀವ್ಸ್ ಕೊಂಚ ತಂಡಕ್ಕೆ ಆಧಾರವಾದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಇವರು 4 ಬೌಂಡರಿ ನೆರವಿನಿಂದ 32 ರನ್ ಬಾರಿಸಿದರು. ಇವರಿಗೆ ಜಸ್ಪ್ರೀತ್ ಬುಮ್ರಾ ಖೆಡ್ಡಾ ತೋಡಿದರು. ಬುಮ್ರಾ ಎಸೆದ ಯಾರ್ಕರ್ ಎಸೆತವನ್ನು ಎದುರಿಸುವಲ್ಲಿ ಜಸ್ಟಿನ್ ಗ್ರೀವ್ಸ್ ವಿಫಲರಾದರು. ಅಂತಿಮವಾಗಿ ವಿಂಡೀಸ್ 44.1 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟ್ ಆಯಿತು.
ಬೌಲರ್‌ಗಳ ಆರ್ಭಟ
ಟೀಮ್ ಇಂಡಿಯಾದ ವೇಗಿಗಳು ಅಬ್ಬರದ ಪ್ರದರ್ಶನ ನೀಡಿದರು. ಮೊದಲಾವಧಿ ಹಾಗೂ ಮೊದಲ ಇನಿಂಗ್ಸ್‌ನಲ್ಲಿ ಇವರ ಆರ್ಭಟ ಜೋರಾಗಿತ್ತು. ಟೀಮ್ ಇಂಡಿಯಾದ ಪರ ಜಸ್ಪ್ರೀತ್ ಬುಮ್ರಾ 42 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇಂಗ್ಲೆಂಡ್ ಸರಣಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದ ಮೊಹಮ್ಮದ್ ಸಿರಾಜ್ ತವರಿನಲ್ಲಿ ತಮ್ಮ ಆರ್ಭಟ ಮುಂದುವರೆಸಿದರು. ಅಹಮದಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸಿರಾಜ್ 40 ರನ್ ನೀಡಿ 4 ವಿಕೆಟ್ ಉರುಳಿಸಿದರು. ಉಳಿದಂತೆ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಕುಲ್‌ದೀಪ್ ಯಾದವ್ 2, ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications