Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಹಮದಾಬಾದ್‌ನಲ್ಲಿ 2030ರ ಕಾಮನ್‌ವೆಲ್ತ್ ಗೇಮ್ಸ್‌; ಪ್ರಧಾನಿ ಮೋದಿ ಸಂತಸ

ಭಾರತದಲ್ಲಿ 20 ವರ್ಷಗಳ ಬಳಿಕ ಕಾಮನ್‌ವೆಲ್ತ್ ಕ್ರೀಡಾ ಕೂಟ ನಡೆಯಲಿದೆ. 2030ರ ಕಾಮನ್‌ವೆಲ್ತ್ ಕ್ರೀಡಾ ಕೂಟ ಗುಜರಾತ್‌ನ ಅಹಮದಾಬಾದ್‌ ನಗರದಲ್ಲಿ ನಡೆಯಲಿದೆ. ಬುಧವಾರ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಭಾರತದ ಜೊತೆಗೆ ನೈಜೀರಿಯಾದ ಅಬುಜಾ ಸಹ ಸ್ಪರ್ಧೆಯಲ್ಲಿತ್ತು. ಇನ್ನು ಇದೇ ಸಾಮಾನ್ಯ ಸಭೆಯಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ 2034 ರ ಆವೃತ್ತಿಗೆ ಆಫ್ರಿಕನ್ ದೇಶ ಪರಿಗಣಿಸಲು ನಿರ್ಧರಿಸಲಾಗಿದೆ.

ಕಾಮನ್‌ವೆಲ್ತ್ ಕ್ರೀಡಾಕೂಟ ಅಹಮದಾಬಾದ್‌ನಲ್ಲಿ ನಡೆಯುವ ಬಗ್ಗೆ ಅಂತಿಮ ನಿರ್ಧಾರ ಹೊರ ಬೀಳುತ್ತಿದ್ದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ತಾಣದಲ್ಲಿ ಪೋಸ್ಟ್‌ ಮಾಡಿ, ದೇಶವಾಸಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಭಾರತವು 2030 ರ ಶತಮಾನೋತ್ಸವದ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸುವ ಬಿಡ್ ಅನ್ನು ಗೆದ್ದಿರುವುದು ಸಂತಸ ತಂದಿದೆ. ನಮ್ಮ ಬದ್ಧತೆ, ಕ್ರೀಡಾ ಮನೋಭಾವ ಭಾರತ, ವಿಶ್ವ ಮಟ್ಟದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದೆ. ಈ ಕ್ರೀಡಾ ಕೂಟದ ಆತಿಥ್ಯಕ್ಕೆ ನಾವು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Ahmedabad to Host Commonwealth Games 2030 PM Modi Amit Shah Congratulate Nation

ಅಮಿತ್ ಶಾ ಹೇಳಿದ್ದೇನು?

ಕಾಮನ್‌ವೆಲ್ತ್ ಕ್ರೀಡಾಕೂಟ 2030ರ ಆತಿಥ್ಯವನ್ನು ಅಹಮದಾಬಾದ್‌ಗೆ ಸಿಕ್ಕಿದಕ್ಕೆ ದೇಶವಾಸಿಗಳಿಗೆ ಅಭಿನಂದನೆಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ದಶಕದ ಹೋರಾಟದ ಬಳಿಕ ದೇಶಕ್ಕೆ ಕಾಮನ್‌ವೆಲ್ತ್ ಕ್ರೀಡಾ ಕೂಟದ ಆತಿಥ್ಯ ಸಿಕ್ಕಿದೆ ಎಂದು ಗೃಹ ಸಚಿವರು ಸಂತಸ ಹಂಚಿಕೊಂಡಿದ್ದಾರೆ.

ಅಹಮದಾಬಾದ್‌ 2030ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆತಿಥ್ಯ ನೀಡಲಿದ್ದು ಸಂತಸ ಹಾಗೂ ಹೆಮ್ಮೆಯ ಕ್ಷಣವಾಗಿದೆ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಕಳೆದ ತಿಂಗಳು ಕಾಮನ್‌ವೆಲ್ತ್ ಕ್ರೀಡಾಕೂಟದ ಕಾರ್ಯಕಾರಿ ಮಂಡಳಿಯು ಅಹಮದಾಬಾದ್ ಅನ್ನು ಕ್ರೀಡಾಕೂಟದ ಆತಿಥ್ಯಕ್ಕೆ ಪ್ರಸ್ತಾಪಿಸಿತ್ತು.

Story first published: Wednesday, November 26, 2025, 23:02 [IST]
Other articles published on Nov 26, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+