Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏರ್‌ಟೆಲ್‌ ಪ್ರಸ್ತುತ ಪಡಿಸುತ್ತಿದೆ 5G ಆಟ: ಕಪಿಲ್ ದೇವ್ 175 ನಾಟೌಟ್‌ ಮರುಸೃಷ್ಟಿ

Kapil dev

ಭಾರ್ತಿ ಏರ್‌ಟೆಲ್‌ 1983ರ ವಿಶ್ವಕಪ್‌ನಲ್ಲಿ ಕಪಿಲ್‌ದೇವ್‌ರ ಐತಿಹಾಸಿಕ 175 ರನ್ ನಾಟೌಟ್ ಇನ್ನಿಂಗ್ಸ್ ಮರುಸೃಷ್ಟಿಸುವ ಮೂಲಕ, ಗ್ರಾಹಕರಿಗೆ ವಿಶೇಷ ಅನುಭವ ನೀಡಿದ್ದು, ಏರ್‌ಟೆಲ್ 5ಜಿ ಹೈ ಸ್ಪೀಡ್ ಮೂಲಕ ವೀಡಿಯೋ ವೀಕ್ಷಿಸಬಹುದಾಗಿದೆ.

175 ನಾಟೌಟ್ ಮರುಸೃಷ್ಟಿ ಮಾಡಿರುವ ವೀಡಿಯೋ 4K ಮೋಡ್‌ನಲ್ಲಿದ್ದು, ಪಂದ್ಯದ ಪ್ರಮುಖ ಕ್ಷಣಗಳಿಗೆ ಜೀವ ತುಂಬಿದೆ. ಟಿವಿ ಟೆಕ್ನೀಷಿಯನ್ಸ್‌ ಮುಷ್ಕರದಿಂದಾಗಿ ಯಾವುದೇ ವೀಡಿಯೊ ತುಣುಕು ಹೊರಬಂದಿಲ್ಲ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಈ ರೀತಿಯ ಅನುಭವಗಳು ವೀಡಿಯೊದ ಭವಿಷ್ಯವನ್ನು ಪರಿವರ್ತಿಸುತ್ತದೆ. ಏರ್‌ಟೆಲ್ 5ಜಿ ಸ್ಪೀಡ್ ಮನರಂಜನೆ ಮತ್ತು ಬಳಕೆದಾರರ ಅನುಭವವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ.

"1 Gbps ಗಿಂತ ಹೆಚ್ಚಿನ ವೇಗ ಮತ್ತು 20 ms ಗಿಂತ ಕಡಿಮೆ ಲಟೆನ್ಸಿ, 50 ಕ್ಕೂ ಹೆಚ್ಚು ಬಳಕೆದಾರರು 5G ಸ್ಮಾರ್ಟ್‌ಫೋನ್‌ಗಳಲ್ಲಿ ಪಂದ್ಯದ ಹೆಚ್ಚು ವೈಯಕ್ತಿಕಗೊಳಿಸಿದ 4K ವೀಡಿಯೊ ಅನುಭವವನ್ನು ಆನಂದಿಸಿದ್ದಾರೆ. ಬಹು ಕ್ಯಾಮೆರಾ ಆ್ಯಂಗಲ್‌ಗಳಿಗೆ 360 ಡಿಗ್ರಿ ಇನ್-ಸ್ಟೇಡಿಯಾ ವೀಕ್ಷಣೆ , ಶಾಟ್ ವಿಶ್ಲೇಷಣೆ ಜೊತೆಗೆ ಅಂಕಿ-ಅಂಶಗಳನ್ನ ಸಹ ಹೊಂದಿದೆ" ಎಂದು ಕಂಪನಿಯು ಹೇಳಿದೆ.

ಕಪಿಲ್ ದೇವ್ ಅವರೊಂದಿಗೆ ಭಾರತದ ಮೊದಲ 5G ಚಾಲಿತ ಹೊಲೊಗ್ರಾಮ್ ಸಂವಾದವನ್ನ ಸಹ ಕಾಣಬಹುದಾಗಿದೆ.

"ಏರ್‌ಟೆಲ್ 5G ಚಾಲಿತ ವರ್ಚುವಲ್ ಅವತಾರದ ಮೂಲಕ ವೇದಿಕೆಯಲ್ಲಿ ಲೆಜೆಂಡರಿ ಕ್ರಿಕೆಟಿಗ ಕಾಣಿಸಿಕೊಂಡಿದ್ದಾರೆ. ಲೈವ್‌ನಲ್ಲಿ ಅಭಿಮಾನಿಗಳೊಂದಿಗೆ ಸಂವಹನ ನಡೆಸಲು ಮತ್ತು ಅವರ ಇನ್ನಿಂಗ್ಸ್‌ನ ಪ್ರಮುಖ ಕ್ಷಣಗಳ ಮೂಲಕ ಅವರನ್ನು ವೀಕ್ಷಿಸಬಹುದು" ಎಂದು ಕಂಪನಿ ಹೇಳಿದೆ.

ಏರ್‌ಟೆಲ್ ಭಾರತದಲ್ಲಿ 5Gಗೆ ತನ್ನ ಹೆಜ್ಜೆಯನ್ನ ಇಟ್ಟಿದ್ದು, ಈ ವರ್ಷದ ಆರಂಭದಲ್ಲಿ, ಏರ್‌ಟೆಲ್ ಲೈವ್ 4G ನೆಟ್‌ವರ್ಕ್ ಮೂಲಕ ಭಾರತದ ಮೊದಲ 5G ಅನುಭವವನ್ನು ಪ್ರದರ್ಶಿಸಿತು. ಇದು ಭಾರತದ ಮೊದಲ ಗ್ರಾಮೀಣ 5G ಪ್ರಯೋಗ ಮತ್ತು 5G ಯಲ್ಲಿ ಮೊದಲ ಕ್ಲೌಡ್ ಗೇಮಿಂಗ್ ಪ್ರದರ್ಶಿಸಿತು.

Story first published: Saturday, March 26, 2022, 10:51 [IST]
Other articles published on Mar 26, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+