ಆತನನ್ನು ತಂಡದಿಂದ ಹೊರಗಿರುವುದು ಬೆಸ್ಟ್: ಏಷ್ಯಾ ಕಪ್‌ಗೆ ಆಯ್ಕೆಯಾದ ಕ್ರಿಕೆಟಿಗನ ಬಗ್ಗೆ ಅಜಯ್ ಜಡೇಜಾ ಮಾತು!

ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಅದಕ್ಕೂ ಮುನ್ನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ನಡೆಯಲಿದ್ದು ಅದರಲ್ಲಿ ಭಾಗಿಯಾಗಲಿರುವ ಭಾರತ ತಂಡದ ಸ್ಕ್ವಾಡ್‌ಅನ್ನು ಬಿಸಿಸಿಐ ಈಗಾಗಲೇ ಘೋಷಣೆ ಮಾಡಿದೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಓರ್ವ ಆಟಗಾರನ ಬಗ್ಗೆ ಮಾತನಾಡಿದ್ದು ಆತ ಮುಂಬರುವ ಟಿ20 ವಿಶ್ವಕಪ್‌ನ ತಂಡದಲ್ಲಿರಲು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್‌ನ ದೃಷ್ಟಿಯಿಂದ ಇತ್ತೀಚೆಗೆ ಭಾರತ ಟಿ20 ತಂಡದಲ್ಲಿ ಸಾಕಷ್ಟು ಪ್ರಯೋಗಗಳನ್ನು ನಡೆಸಲಾಯಿತು. ಅನೇಕ ಪ್ರಯೋಗಗಳು ಯಶಸ್ಸು ಕುಡ ಕಂಡಿದೆ. ಈ ಹಿನ್ನೆಲೆಯಲ್ಲಿ ಏಷ್ಯಾಕಪ್‌ಗೆ ಈಗಾಗಲೇ ತಂಡವನ್ನು ಪ್ರಕಟಿಸಲಾಗಿದೆ. ಹಾಗಿದ್ದರೂ ಭಾರತದ ಆ ಅನುಭವಿ ಆಟಗಾರ ತಂಡದಲ್ಲಿ ಇರಲು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ಭಾರತ್ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಅವರು ತಮ್ಮದೇ ಆದ ಕಾರಣವನ್ನು ಕೂಡ ಮುಂದಿಟ್ಟಿದ್ದಾರೆ.

ಅಜಯ್ ಜಡೇಜಾ ಹೇಳಿದ್ದು ಯಾರ ಬಗ್ಗೆ?
ಏಷ್ಯಾ ಕಪ್‌ನಲ್ಲಿ ಆಡಲಿರುವ ಭಾರತ ತಂಡವನ್ನು ಪ್ರಕಟಿಸಿದ ಬಳಿಕ ಅಜಯ್ ಜಡೇಜಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಬದಲ್ಲಿ ಅವರು ಭಾರತ ತಂಡದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಸೇರ್ಪಡೆಗೊಳಿಸುವ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ದಿನೇಶ್ ಕಾರ್ತಿಕ್‌ಗೆ ತಂಡದಲ್ಲಿ ಸ್ಥಾನ ನಿಡುವ ಅವಶ್ಯಕತೆಯಿರಲಿಲ್ಲ ಎಂದಿದ್ದಾರೆ. ದಿನೇಶ್ ಕಾರ್ತಿಕ್ ಅವರನ್ನು ಇನ್ಶುರೆನ್ಸ್ ರೀತಿಯಲ್ಲಿ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ ಎಂದಿದ್ದಾರೆ ಅಜಯ್ ಜಡೇಜಾ

ಆಕ್ರಮಣಕಾರಿ ಆಟಕ್ಕೆ ಭಿನ್ನ ತಂಡ ಬೇಕಿದೆ
ತಂಡ ಆಕ್ರಮಣಕಾರಿ ಆಟವನ್ನು ಬಯಸುವ ವಿಚಾರವಾಗಿ ಅಜಯ್ ಜಡೇಜಾ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. " ನಾನು ಕೇಳಿಸಿಕೊಂಡಂತೆ ತಂಡ ಬಯಸುತ್ತಿರುವುದು ಆಕ್ರಮಣಕಾರಿಯಾದ ಆಟವನ್ನು. ಹಾಗಿದ್ದಾಗ ನೀವು ಭಿನ್ನವಾದ ತಂಡವನ್ನು ಆಯ್ಕೆ ಮಾಡಬೇಕಿದೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಅವಕಾಶ ನೀಡುತ್ತಿದ್ದೀರಿ ಎಂದರೆ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಲೇಬೇಕಿದೆ. ನಿಮಗೆ ಅವರು ಒಂದು ರೀತಿ ಇನ್ಶುರೆನ್ಸ್ ಇದ್ದಂತೆ. ಆದರೆ ಅವರಿಬ್ಬರನ್ನು ಕೂಡ ನೀವು ಬಯಸುತ್ತಿಲ್ಲ ಎಂದಾದರೆ ದಿನೇಶ್ ಕಾರ್ತಿಕ್‌ಗೆ ಕೂಡ ಇಲ್ಲಿ ಕೆಲಸವಿಲ್ಲ. ಆದರೆ ನಾನು ದಿನೇಶ್ ಕಾರ್ತಿಕ್ ಅವರನ್ನು ಇಲ್ಲಿ ಆಯ್ಕೆ ಮಾಡುತ್ತಿಲ್ಲ. ಆತನೋರ್ವ ಉತ್ತಮ ಕಾಮೆಂಟೇಟರ್" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ.

ಭುವಿ ಬದಲು ಶಮಿಯನ್ನು ಆಯ್ಕೆ ಮಾಡಿದ ಜಡೇಜಾ
ಇನ್ನು ಟಿ20 ವಿಶ್ವಕಪ್‌ಗೆ ಅಜಯ್ ಜಡೇಜಾ ಮೊಹಮ್ಮದ್ ಶಮಿಯನ್ನು ಆಯ್ಕೆ ಮಾಡುವುದಾಗಿ ಹೇಳಿದ್ದಾರೆ. ಟಿ20 ವಿಶ್ವಕಪ್‌ನ ಆಡುವ ಬಳಗದಲ್ಲಿ ಶಮಿ ಜೊತೆಗೆ ಬೂಮ್ರಾ, ಅರ್ಷದೀಪ್ ಚಾಹಲ್ ಅವರನ್ನು ಬೌಲಿಂಗ್ ವಿಭಾಗದಲ್ಲಿ ಆಯ್ಕೆ ಮಾಡುವುದಾಗಿ ಹೇಳಿದ್ದಾರೆ. ಈ ಮೂಲಕ ಇತ್ತೀಚಿನ ದಿನಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಭುವನೇಶ್ವರ್ ಕುಮಾರ್‌ಗೂ ಅಜಯ್ ಜಡೇಜಾ ಅವರ ವಿಶ್ವಕಪ್ ತಂಡದಲ್ಲಿಸ್ಥಾನವಿಲ್ಲದಂತಾಗಿದೆ. ಇನ್ನು ಬ್ಯಾಟಿಂಗ್‌ನಲ್ಲಿ ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಹೂಡಾ ಆಡುವ ಬಳಗದಲ್ಲಿ ಸ್ಥಾನ ಪಡೆಯುವುದು ಅನಿವಾರ್ಯ ಎಂದಿದ್ದಾರೆ ಅಜಯ್ ಜಡೇಜಾ.

ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ಭಾರತ ಸ್ಕ್ವಾಡ್
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications