ಈತ ಎಬಿಡಿಗಿಂತಲೂ ಅಮೂಲ್ಯ ಆಟಗಾರ: ಭಾರತೀಯ ಆಟಗಾರನ ಬಗ್ಗೆ ಅಜಯ್ ಜಡೇಜಾ ಪ್ರಶಂಸೆ

ಟೀಮ್ ಇಂಡಿಯಾ ಮತ್ತೊಂದು ಟಿ20 ಕ್ರಿಕೆಟ್ ಮಾದರಿ ದ್ವಿಪಕ್ಷೀಯ ಸರಣಿಯಲ್ಲಿ ಗೆಲುವು ಸಾಧಿಸಿದೆ. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯವನ್ನು ಭಾರೀ ಅಂತರದಿಂದ ಭಾರತ ಗೆದ್ದುಕೊಂಡಿದ್ದು ಈ ಮೂಲಕ ಸರಣಿಯನ್ನು 2-1 ಅಂತರದಿಂದ ವಶಕ್ಕೆ ಪಡೆದಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಅಮೋಗ ಪ್ರದರ್ಶನ ನೀಡಿರುವ ಸೂರ್ಯಕುಮಾರ್ ಯಾದವ್ 2022ರ ಫಾರ್ಮ್‌ಅನ್ನು 2023ರಲ್ಲಿಯೂ ಮುಂದುವರಿಸುವ ಸೂಚನೆ ನೀಡಿದ್ದು ಅಂತಿಮ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಮಿಂಚಿದ್ದರು. ಈ ಪ್ರದರ್ಶನದ ಬಳಿಕ ಸೂರ್ಯ ಬ್ಯಾಟಿಂಗ್ ಬಗ್ಗೆ ಎಲ್ಲೆಡೆಯಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸ್ಪೋಟಕ ಪ್ರದರ್ಶನದ ಬಳಿಕ ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಪ್ರತಿಕ್ರಿಯೆ ನೀಡಿದ್ದು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಎಬಿ ಡಿವಿಲಿಯರ್ಸ್ ಅವರಿಗಿಂತಲೂ ಅಮೂಲ್ಯ ಆಟಗಾರ ಎಂದು ಬಣ್ಣಿಸಿದ್ದಾರೆ.

"ಎಬಿಡಿಗಿಂತಲೂ ಹೆಚ್ಚು ಸ್ಥಿರ ಸೂರ್ಯ"
ಭಾರತೀಯ ಕ್ರಿಕೆಟ್‌ನ ಮಾಜಿ ಆಟಗಾರ ಅಜಯ್ ಜಡೇಜಾ ಸೂರ್ಯಕುಮಾರ್ ಪ್ರದರ್ಶನ ಬಗ್ಗೆ ವಿಶೇಷ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಕ್ರಿಕ್‌ಬಜ್ ಜೊತೆಗಿನ ಸಂವಾದಲ್ಲಿ ಭಾಗಿಯಾಗಿದ್ದ ಜಡೇಜಾ ಎಬ ಡಿವಿಲಿಯರ್ಸ್‌ಗಿಂತಲೂ ಹೆಚ್ಚಿನ ಸ್ಥಿರ ಪ್ರದರ್ಶನ ನೀಡುವ ಆಟಗಾರ ಸೂರ್ಯಕುಮಾರ್ ಯಾದವ್ ಎಂದು ಪ್ರಶಂಸಿಸಿದ್ದಾರೆ. "ಎವಿ ಡಿವಿಲಿಯರ್ಸ್ ನಾವು ಕಂಡ ಅದ್ಭುತ ಆಟಗಾರ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಸೂರ್ಯಕುಮಾರ್ ಯಾದವ್ ಅವರ ಸ್ಥಿರ ಪ್ರದರ್ಶನ ಎಬಿಡಿ ಅವರಿಗಿಂತಲೂ ತುಸು ಹೆಚ್ಚೇ ಇದೆ. ನನ್ನ ಪ್ರಕಾರ ಅವರು ಎಬಿಡಿಗಿಂತಲೂ ಹೆಚ್ಚು ಶಕ್ತಿ ಉಪಯೋಗಿಸುತ್ತಾರೆ. ಅವರು ತಮ್ಮ ಮಣಿಕಟ್ಟನ್ನು ಎಬಿಡಿಗಿಂತಲೂ ಅದ್ಭುತವಾಗಿ ಬಳಸಿಕೊಳ್ಳುತ್ತಾರೆ" ಎಂದು ಸೂರ್ಯಕುಮಾರ್ ಯಾದವ್ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ ಅಜಯ್ ಜಡೇಜಾ.

ಎಬಿ ಡಿವಿಲಿಯರ್ಸ್ ಜೊತೆ ಹೋಲಿಕೆ
ಇನ್ನು ತಮ್ಮ ಅಸಾಂಪ್ರದಾಯಿಕ ಶೈಲಿಯ ಹೊಡೆತದಿಂದಾಗಿ ಸೂರ್ಯಕುಮಾರ್ ಯಾದವ್ ಪ್ರತಿ ಬಾರಿಯೂ ಎಬಿಡಿ ವಿಲಿಯರ್ಸ್ ಜೊತೆಗೆ ಹೋಲಿಕೆಗೆ ಒಳಗಾಗುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಇಂಥಾ ಹೊಡೆಗಳ ಮೂಲಕ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿದ ಆಟಗಾರ. ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರವಾಗಿ ಸುದೀರ್ಘ ಕಾಲ ಆಡಿದ್ದ ಎಬಿಡಿ ಕೊಟ್ಯಂತರ ಭಾರತೀಯ ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ. ಈಗ ಸೂರ್ಯಕುಮಾರ್ ಯಾದವ್ ಅಂದೇ ಶೈಲಿಯ ಪ್ರದರ್ಶನ ನೀಡುವ ಮೂಲಕ ಗಮನಸೆಳೆಯುತ್ತಿದ್ದಾರೆ.

3ನೇ ಟಿ20 ಶತಕ ಸಿಡಿಸಿದ ಎಬಿಡಿ
ಇನ್ನು ಟೀಮ್ ಇಂಡಿಯಾದ ಆಟಗಾರ ಸೂರ್ಯಕುಮಾರ್ ಯಾದವ್ ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಕೇವಲ 51 ಎಸೆತಗಳಲ್ಲಿ 7 ಬೌಂಡರಿ ಹಾಗೂ 9 ಸಿಕ್ಸರ್‌ಗಳ ನೆರವಿನೊಂದಿಗೆ ಭರ್ಜರಿ 112 ರನ್‌ಗಳಿಸಿದರು. ಈ ಸ್ಪೋಟಕ ಪ್ರದರ್ಶನದ ಕಾರಣದಿಂದಾಗಿ ಟೀಮ್ ಇಂಡಿಯಾ ಈ ಪಂದ್ಯದಲ್ಲಿ 228 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿದ್ದು ಬಳಿಕ 91 ರನ್‌ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿದೆ.

ಏಕದಿನ ಸರಣಿಗೆ ಸಜ್ಜಾದ ಭಾರತ ಹಾಗೂ ಶ್ರೀಲಂಕಾ
ಇನ್ನು ಟಿ20 ಸರಣಿಯ ಬಳಿಕ ಭಾರತ ಹಾಗೂ ಶ್ರೀಲಂಕಾ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಈ ವರ್ಷ ಭಾರತದಲ್ಲಿಯೇ ಏಕದಿನ ವಿಶ್ವಕಪ್ ನಡೆಯಲಿರುವ ಕಾರಣದಿಂದಾಗಿ ಟೀಮ್ ಇಂಡಿಯಾ ಹಾಗೂ ಶ್ರೀಲಂಕಾ ಎರಡು ತಂಡಗಳಿಗೂ ಈ ಸರಣಿ ಬಹಳ ಮುಖ್ಯವಾಗಲಿದೆ. ಇನ್ನು ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ಕಣಕ್ಕಿಳಿಯಲಿದ್ದು ಮೊದಲ ಪಂದ್ಯ ಜನವರಿ 10ರಂದು ಗುವಾಹಟಿಯ ಬರ್ಸಾಪರ ಸ್ಟೇಡಿಯಂನಲ್ಲಿ ಆಯೋಜನೆಯಾಗಲಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications