Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಅಜಿಂಕ್ಯಾ ರಹಾನೆ' ಪ್ರತಿಯೊಬ್ಬ ಯುವ ಆಟಗಾರನಿಗೂ ರೋಲ್ ಮಾಡೆಲ್: ಮೊಹಮ್ಮದ್ ಕೈಫ್

Ajinkya Rahane Is The Ultimate Role Model For Every Youngster: Mohammad Kaif

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಪ್ರಮುಖ ರೂವಾರಿ ಆಗಿದ್ದ ಡೆಲ್ಲಿ ಬ್ಯಾಟ್ಸ್‌ಮನ್ ಅಜಿಂಕ್ಯಾ ರಹಾನೆ ಪ್ರತಿಯೊಬ್ಬ ಯುವ ಆಟಗಾರನಿಗೂ ಆದರ್ಶಪ್ರಾಯ ಎಂದು ಡೆಲ್ಲಿ ಕ್ಯಾಪಿಟಲ್ಸ್‌ನ ಸಹಾಯಕ ಕೋಚ್ ಮೊಹಮ್ಮದ್ ಕೈಫ್ ಹೇಳಿದ್ದಾರೆ.

ಸೋಮವಾರ ಆರ್‌ಸಿಬಿ ವಿರುದ್ಧ ಅಜಿಂಕ್ಯಾ ಆಟದಿಂದ ಪ್ರಭಾವಿತರಾದ ಮೊಹಮ್ಮದ್ ಕೈಫ್ ಈ ಮಾತುಗಳನ್ನಾಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ತಲುಪಲು ಅಜಿಂಕ್ಯ ರಹಾನೆ ಅರ್ಧಶತಕ ನೆರವಾಯಿತು. ವಿಶೇಷ ಅಂದ್ರೆ ಈ ಸೀಸನ್‌ನಲ್ಲಿ ಅವರಿಗೆ ಇದು ಮೊದಲ ಅರ್ಧಶತಕ.

ಆರ್‌ಸಿಬಿ ನೀಡಿದ 153ರನ್‌ಗಳ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಅಜಿಂಕ್ಯ ರಹಾನೆ 60 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ರಹಾನೆ ಕ್ಯಾಪಿಟಲ್ಸ್ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದ್ದಲ್ಲದೆ, ಶಿಖರ್ ಧವನ್ ಅವರೊಂದಿಗೆ 88 ರನ್‌ಗಳ ಜೊತೆಯಾಟವಾಡಿದ್ರು. ಐಪಿಎಲ್ 2020 ರಲ್ಲಿ ಉತ್ತಮ ಪ್ರದರ್ಶನ ನೀಡದೆ ಒತ್ತಡದಲ್ಲಿದ್ದ ರಹಾನೆ ಪ್ರಮುಖ ಪಂದ್ಯದಲ್ಲಿ ಮಿಂಚಿದರು.

ಹೀಗಾಗಿ ಮೊಹಮ್ಮದ್ ಕೈಫ್ ತಮ್ಮ ಅಧಿಕೃತ ಟ್ವಿಟ್ಟರ್ ಅಕೌಂಟ್‌ನಲ್ಲಿ ಅಜಿಂಕ್ಯ ರಹಾನೆ ಅವರ ಪ್ರದರ್ಶನ ವಿಧಾನವನ್ನು ಶ್ಲಾಘಿಸಿದರು ರಹಾನೆ ಕಠಿಣ ಪರಿಶ್ರಮವು ಎಂದಿಗೂ ವಿಫಲವಾಗುವುದಿಲ್ಲ ಮತ್ತು ಫ್ಯಾಷನ್‌ನಿಂದ ಹೊರಗುಳಿಯುತ್ತದೆ ಎಂಬುದು ಸಾಬೀತಾಗಿದೆ ಎಂದಿದ್ದಾರೆ.

Story first published: Tuesday, November 3, 2020, 19:07 [IST]
Other articles published on Nov 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+