ರಹಾನೆಯಲ್ಲಿ ಸಚಿನ್ ಕಂಡ ಸ್ಟೀವ್ ವಾ ಕೊಹ್ಲಿಗೆ ಹೇಳಿದ್ದೇನು?
ಬೆಂಗಳೂರು, ಸೆಪ್ಟೆಂಬರ್. 14: ಭಾರತ ತಂಡದ ಭರವಸೆಯ ಆಟಗಾರ ಅಂಜಿಕ್ಯ ರಾಹಾನೆಯವರಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ವಾ ಕಂಡಿದ್ದಾರೆ.
ಬೆಂಗಳೂರು ದೇವನಹಳ್ಳಿಯಲ್ಲಿ ಬ್ರೀಗೇಡ್ ಬ್ರಿಗೇಡ್ ಆಕಾ೯ಡ್ಸ್ ನ ವಿಶ್ವದರ್ಜೆಯ ಕ್ರಿಕೆಟ್ ಅಂಗಣವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಸ್ಟೀವ್ ವಾ, ರಹಾನೆ ಒಬ್ಬ ಅತ್ಯುತ್ತಮ ಆಟಗಾರ ಚೆಂಡನ್ನು ಮೈದಾನದ ಯಾವ ಮೂಲೆಗೆ ಬೇಕಾದರೂ ಕಲಾತ್ಮಕವಾಗಿಯೇ ಅಟ್ಟಬಲ್ಲರು ಮೆಚ್ಚುಗೆ ವ್ಯಕ್ತಪಡಿಸಿದರು.[ಬೆಂಗಳೂರಲ್ಲಿ ಸ್ಟೀವ್ ವಾ ಆಟ ನೋಟ]
ಸ್ವತಃ ಮೈದಾನಕ್ಕಿಳಿದ ಸ್ಟೀವ್ ವಾ ಕ್ರಿಕೆಟ್ ಆಡಿ ಸಂಭ್ರಮಿಸಿದರು. ಬ್ರಿಗೆಡ್ ತಂಡದ ಟೌನ್ ಶಿಪ್ ಮೈದಾನವನ್ನು ಮನಸಾರೆ ಹೊಗಳಿದ ಪಿಚ್ ಸಿದ್ಧಪಡಿಸಿದವರ ಕೆಲಸವನ್ನು ಮೆಚ್ಚಿಕೊಂಡರು. ತಂಡವೊಂದರ ನಾಯಕತ್ವ ವಹಿಸಿಕೊಂಡ ಸ್ಟೀವ್ ವಾ ಪಕ್ಕಾ ತಮ್ಮ ಎಂದಿನ ಶೈಲಿಯಲ್ಲೇ ಆಟಗಾರರನ್ನು ಹುರಿದುಂಬಿಸಿದರು. ಬೆಂಗಳೂರಲ್ಲಿ ಸ್ಟೀವಾ ಆಟ ಮತ್ತು ನೋಟವನ್ನು ನಾವು ಒಂದು ರೌಂಡ್ ನೋಡಿಕೊಂಡು ಬರೋಣ....

ಕ್ರಿಕೆಟ್ ಜಂಟಲ್ ಮೆನ್ ಗಳ ಆಟ
ವಿರಾಟ್ ಕೊಹ್ಲಿ ಶ್ರೇಷ್ಠ ಬ್ಯಾಟ್ಸ ಮನ್ ಎಂಬುದನ್ನು ಸಾಬೀತು ಮಾಡಿದ್ದಾರೆ. ಆಟದಲ್ಲಿ ಆಕ್ರಮಣಶೀಲತೆ ಒಳ್ಳೆಯದೇ ಆದರೆ ಎಲ್ಲಿ ಬೇಕೋ ಅಲ್ಲಿ ಮಾತ್ರ ಬಳಸಬೇಕು. ಆಗ ಮಾತ್ರ ಆದರೆ ನಾಯಕತ್ವದ ಪ್ರಭೆ ಹೆಚ್ಚುತ್ತದೆ ಎಂದು ಕೊಹ್ಲಿಗೆ ಸ್ಟೀವ್ ವಾ ಸಲಹೆ ನೀಡಿದರು.

ಸೌರವ್ ಗಂಗೂಲಿ ನೆನಪು
ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಂದ ಯವ ಆಟಗಾರರು ಕಲಿಯಬೇಕಾದದದ್ದು ಸಾಕಷ್ಟಿದೆ. ಅವರ ಸಂಘಟನಾ ಶಕ್ತಿಯನ್ನು ಮೆಚ್ಚಲೇಬೇಕು. ದ್ರಾವಿಡ್-ಲಕ್ಷಣ್ ಅಂಥ ಆಟಗಾರನ್ನು ಹೊಂದಿದ್ದ ಭಾರತ ತಂಡ ಸದಾ ನೆನಪಲ್ಲಿ ಉಳಿಯುತ್ತದೆ ಎಂದು ಹೇಳಿದರು.

ಮೈದಾನಕ್ಕಿಳಿದ ವಾ
ಒಂದು ತಂಡದ ಪರ ನಾಯಕತ್ವ ವಹಿಸಿಕೊಂಡ ಸ್ಟೀವ್ ವಾ ಬೌಲಿಂಗ್ ಸಹ ಮಾಡಿದರು. ಎರಡು ವಿಕೆಟ್ ಗಳನ್ನು ಕಬಳಿಸಿದ್ದು ವಿಶೇಷ. ಅಲ್ಲದೇ ಕ್ರಿಕೆಟ್ ನ ವಿವಿಧ ಆಯಾಮಗಳ ಪರಿಚಯ ಮಾಡಿಕೊಡುತ್ತಲೇ ಆಟಗಾರರನ್ನು ಹುರಿದುಂಬಿಸಿದರು.

ಬೆಂಗಳೂರಿಗೆ ಬಂದಿದ್ದೇಕೆ?
ದೇವನಹಳ್ಳಿಯ ಬ್ರಿಗೇಡ್ ಆಕಾ೯ಡ್ಸ್ ನ ಟೌನ್ ಶಿಪ್ ನಲ್ಲಿ ನಿರ್ಮಾಣವಾಗಿರುವ ಸ್ಫೋರ್ಟ್ಸ್ ಅರೇನಾ ಉದ್ಘಾಟಿಸಲು ಸ್ಟೀವ್ ವಾ ಜತೆ ಆಡಂ ಗಿಲ್ ಕ್ರಿಸ್ಟ್ ಸಹೋದರ ಸಹ ಆಗಮಿಸಿದ್ದರು. ಬ್ರಿಗೇಡ್ ಸಂಸ್ಥೆಯೊಂದಿಗೆ ಸ್ಟೀವ್ ವಾ ಪಾಲುದಾರಿಕೆಯಲ್ಲಿ ಭಾಗಿಯಾಗಿದ್ದಾರೆ.

ಅತ್ತುತ್ತಮ ಪ್ರಯತ್ನ
ಮಕ್ಕಳಿಗೆ ಬಾಲ್ಯದಿಂದಲೇ ಕ್ರೀಡಾ ಸಾಮಗ್ರಿ ಮತ್ತು ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಸಿದ್ಧಮಾಡಿರುವ ಮೈದಾನ ಯಾವ ಅಂತಾರಾಷ್ಟ್ರೀಯ ಮೈದಾನಕ್ಕೂ ಕಡಿಮೆಯಿಲ್ಲ ಎಂದು ಸ್ಟೀವ್ ವಾ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications