ಐಪಿಎಲ್ 2020: ತಂಡ ಬಿಟ್ಟು ಮತ್ತೊಂದು ತಂಡ ಸೇರಿದ ಎಲ್ಲಾ ಆಟಗಾರ ಪಟ್ಟಿ!

ಬೆಂಗಳೂರು, ನವೆಂಬರ್ 14: ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್, ಟೆಸ್ಟ್ ತಂಡದ ಉಪ ನಾಯಕ ಅಜಿಂಕ್ಯ ರಹಾನೆ, ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಬಿಟ್ಟು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡ ಸೇರಿಕೊಂಡಿದ್ದಾರೆ. ಮುಂದಿನ ಸೀಸನ್‌ನಲ್ಲಿ ರಹಾನೆ ಡೆಲ್ಲಿ ಪರ ಬ್ಯಾಟ್ ಬೀಸಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ರಹಾನೆಗೆ ವೆಲ್‌ಕಮ್ ಟ್ವೀಟ್ ಮಾಡುವ ಮೂಲಕ ರಹಾನೆ, ಡೆಲ್ಲಿ ಫ್ರಾಂಚೈಸಿ ಸೇರಿಕೊಂಡಿರುವುದನ್ನು ಖಾತರಿಪಡಿಸಿದೆ. ಭಾರತ ಪ್ರವಾಸದಲ್ಲಿರುವ ಬಾಂಗ್ಲಾ ತಂಡ ಭಾರತದ ವಿರುದ್ಧ ಟೆಸ್ಟ್ ಸರಣಿ ಆಡುತ್ತಿದ್ದು, ರಹಾನೆ ಸರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
2020ರ ಐಪಿಎಲ್ ಸೀಸನ್‌ಗಾಗಿ ತಂಡ ಬಿಟ್ಟು ಮತ್ತೊಂದು ತಂಡ ಸೇರಿಕೊಂಡಿರುವ ಆಟಗಾರರ ಮಾಹಿತಿ ಇಲ್ಲಿದೆ.

10 ಆಟಗಾರರು ತಂಡ ಬದಲಾವಣೆ
ಐಪಿಎಲ್ ಫ್ರಾಂಚೈಸಿಗಳಲ್ಲಿನ ಆಟಗಾರರ ಬದಲಾವಣೆಗೆ ಗುರುವಾರ (ನವೆಂಬರ್ 14) ಕಡೆಯ ದಿನವಾಗಿತ್ತು. ಅಂತಿಮ ದಿನದ ವೇಳೆಗೆ ಒಟ್ಟು 10 ಮಂದಿ ಆಟಗಾರರು ಹಳೆ ಫ್ರಾಂಚೈಸಿಯಿಂದ ಹೊಸ ಫ್ರಾಂಚೈಸಿಗೆ ಬದಲಾಗಿದ್ದಾರೆ. ಒಟ್ಟು 4 ತಂಡಗಳು ಆಟಗಾರರನ್ನು ಬದಲಾಯಿಸಿಕೊಂಡಿವೆ.

ಮುಂಬೈ ಸೇರಿದ ಬೌಲ್ಟ್
ಸ್ಪಿನ್ನರ್ ಆರ್ ಅಶ್ವಿನ್ ಕಿಂಗ್ಸ್ XI ಪಂಜಾಬ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ ಸೇರಿಕೊಂಡಿದ್ದಾರೆ. ಕರ್ನಾಟಕದ ಆಲ್ ರೌಂಡರ್ ಕೃಷ್ಣಪ್ಪ ಗೌತಮ್ ರಾಜಸ್ಥಾನ್ ರಾಯಲ್ಸ್ ತೊರೆದು ಕಿಂಗ್ಸ್ XI ಪಂಜಾಬ್ ಸೇರಿದ್ದರೆ, ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಮುಂಬೈ ಇಂಡಿಯನ್ಸ್‌ಗೆ ಬಂದಿದ್ದಾರೆ.

ಡೆಲ್ಲಿಗೆ ಬಂದ ರುದರ್ಫೋರ್ಡ್
ಇನ್ನು ಯುವ ಬ್ಯಾಟ್ಸ್‌ಮನ್ ಮಯಾಂಕ್ ಮಾರ್ಕಂಡೆ ಮುಂಬೈ ಇಂಡಿಯನ್ಸ್‌ನಿಂದ ರಾಜಸ್ಥಾನ್ ರಾಯಲ್ಸ್ ಸೇರಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಆಟಗಾರ ಶೆರ್ಫೇನ್ ರುದರ್ಫೋರ್ಡ್ ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಮುಂಬೈ ಇಂಡಿಯನ್ಸ್‌ಗೆ ತಂಡ ಬದಲಿಸಿದ್ದಾರೆ. ಧವಳ್ ಕುಲಕರ್ಣಿ ರಾಜಸ್ಥಾನ್‌ನಿಂದ ಮುಂಬೈ ಇಂಡಿಯನ್ಸ್‌ಗೆ ಬದಲಾಗಿದ್ದಾರೆ.

ಪಂಜಾಬ್ ತೊರೆದ ಅಂಕಿತ್
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿದ್ದ ಅಂಕಿತ್ ರಜಪೂತ್ ರಾಜಸ್ಥಾನ್ ರಾಯಲ್ಸ್‌ಗೆ, ಯುವ ಆಟಗಾರ ಜಗದೀಶ್ ಸುಚಿತ್ ಡೆಲ್ಲಿ ಕ್ಯಾಪಿಟಲ್ಸ್ ಬಿಟ್ಟು ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ, ಡೆಲ್ಲಿ ಕ್ಯಾಪಿಟಲ್ಸ್‌ನ ರಾಹುಲ್ ತೆವಾಟಿಯಾ ರಾಜಸ್ಥಾನ್‌ಗೆ ಮತ್ತು ಅಜಿಂಕ್ಯ ರಹಾನೆ ರಾಜಸ್ಥಾನ್ ರಾಯಲ್ಸ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್‌ಗೆ ತಂಡ ಬದಲಾಯಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications