ಬ್ಯಾಟಿಂಗ್ ವಿಡಿಯೋ ಹಂಚಿಕೊಂಡ ಅಜಿಂಕ್ಯ ರಹಾನೆ ಕಾಲೆಳೆದ ಧವನ್

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಸದ್ಯ ಸಿಡ್ನಿಯಲ್ಲಿರುವ ಟೀಮ್ ಇಂಡಿಯಾ ಏಕದಿನ ಸರಣಿಗಾಗಿ ತಯಾರಿ ನಡೆಸುತ್ತಿದೆ. ನವೆಂಬರ್ 27ರಿಂದ ಇತ್ತಂಡಗಳ ಕುತೂಹಲಕಾರಿ ಸರಣಿ ಆರಂಭಗೊಳ್ಳಲಿದೆ. ಸರಣಿಯೆಡೆಗಿನ ತಯಾರಿ, ಉತ್ಸುಕತೆ ಕುರಿತು ಅಜಿಂಕ್ಯ ರಹಾನೆ ವಿಡಿಯೋ ಶೇರ್ ಮಾಡಿದ್ದಾರೆ.
ಸರಣಿಗೂ ಮುನ್ನ ಭಾರತದ ಆಟಗಾರರು ಕ್ವಾರಂಟೈನ್ ಪಾಲಿಸಿದ್ದಾರೆ. ಸದ್ಯ ಕ್ವಾರಂಟೈನ್ ಕೊನೇ ಕ್ಷಣಗಳಲ್ಲಿದ್ದಾರೆ. ಹೀಗಾಗಿ ಕ್ವಾರಂಟೈನ್ ದಿನಗಳ ವೇಳೆಯ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಜಿಂಕ್ಯ ರಹಾನೆ ಕೂಡ ವಿಡಿಯೋ ಶೇರ್ ಮಾಡಿದ್ದಾರೆ.
ಹೋಟೆಲ್ ರೂಮ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ರಹಾನೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಜೊತೆಗೆ 'ಅಭ್ಯಾಸ ಇಲ್ಲದ ದಿನವೆಂದರೆ ನಾನು ಅಭ್ಯಾಸಕ್ಕೆ ಇನ್ನೊಂದು ದಾರಿ ಹುಡುಕುತ್ತೇನೆ. ಬ್ಯಾಟನ್ನು ಬಿಟ್ಟಿರಕ್ಕಾಗ್ತಿಲ್ಲ. ತೊಂದರೆಯಾದರೆ ಪಕ್ಕದ ರೂಮಿನವರು ಕ್ಷಮಿಸಿ' ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. 'ಭಯ್ಯಾ, ನಾವು ಒಂದು ದಿನಕ್ಕೆ ಮುಂಚೆ ಅಭ್ಯಾಸ ಪಂದ್ಯ ಆಡಿದ್ದೆವು. ನೀನಿದರಲ್ಲಿ ಅರ್ಧ ಶತಕ ಬಾರಿಸಿದೆ. ಈ ಅಭ್ಯಾಸದ ಉಪಯೋಗ ಏನಿದೆ?' ಎಂದು ಧವನ್ ಕಾಮೆಂಟ್ ಮಾಡಿದ್ದಾರೆ. ಭಾರತ ಟೆಸ್ಟ್ ತಂಡಕ್ಕೆ ರಹಾನೆ ಉಪನಾಯಕರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications