Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ ತಂಡದ ಮುಖ್ಯ ಆಯ್ಕೆಗಾರ ರೇಸ್‌ನಲ್ಲಿ ಅಜಿತ್ ಅಗರ್ಕರ್; ಮಹಿಳಾ ತಂಡದ ಕೋಚ್‌ಗೆ ಇಬ್ಬರ ಹೆಸರು ಚಾಲ್ತಿ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಭಾರತೀಯ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕಾಗಿ ಗುರುವಾರ, ಜೂನ್ 22ರಂದು ಅರ್ಜಿಗಳನ್ನು ಆಹ್ವಾನಿಸಿತ್ತು.

ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥನ ಹುದ್ದೆಗೆ ಅರ್ಜಿಗಳನ್ನು ಜೂನ್ 30, 2023ರಂದು ಭಾರತೀಯ ಕಾಲಮಾನ 6 ಗಂಟೆಯ ಒಳಗೆ ಸಲ್ಲಿಸಬೇಕು ಎಂದು ಉಲ್ಲೇಖಿಸಿದೆ.

ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೆ ಸಂಬಂಧ ಹೊಂದಿರುವ ಮಾಜಿ ಭಾರತೀಯ ವೇಗದ ಬೌಲರ್ ಅಜಿತ್ ಅಗರ್ಕರ್ ಅವರು ಪುರುಷರ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದ ರೇಸ್‌ನಲ್ಲಿದ್ದಾರೆ ಮತ್ತು ಅಜಿತ್ ಅಗರ್ಕರ್ ಅವರು ಮುಖ್ಯ ಆಯ್ಕೆಗಾರನ ಪಾತ್ರವನ್ನು ಅಲಂಕರಿಸಲು ಇಷ್ಟಪಡುತ್ತಾರೆ.

Indian Cricket Team Chief Selector

ಮಾಜಿ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಅವರನ್ನು ವಿವಾದಾತ್ಮಕ ಹೇಳಿಕೆಯಿಂದ ವಜಾಗೊಳಿಸಿದ ನಂತರ, ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸಂಭಾವ್ಯ ಆಯ್ಕೆ ಸಮಿತಿ ಮುಖ್ಯಸ್ಥ ಅಭ್ಯರ್ಥಿಗಳನ್ನು ಹುಡುಕುತ್ತಿದೆ. ಮುಖ್ಯ ಆಯ್ಕೆಗಾರರ ​​ಹುದ್ದೆಗೆ ಜುಲೈ 1ರಂದು ಸಂದರ್ಶನ ನಡೆಯುವ ಸಾಧ್ಯತೆ ಇದೆ.

ಮಹಿಳಾ ತಂಡದ ಕೋಚ್‌ಗೆ ಇಬ್ಬರ ಹೆಸರು ಮುಂಚೂಣಿಯಲ್ಲಿದೆ

ಮುಂದಿನ ತಿಂಗಳು ಬಾಂಗ್ಲಾದೇಶ ವಿರುದ್ಧದ ಸರಣಿಗಾಗಿ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಬೇಕಿದೆ. ಇದಕ್ಕೂ ಮುನ್ನ ಮುಖ್ಯ ಕೋಚ್ ಹುದ್ದೆಗಾಗಿ ರೇಸ್‌ನಲ್ಲಿರುವ ಸಂಭಾವ್ಯ ಇಬ್ಬರು ಅಭ್ಯರ್ಥಿಗಳಲ್ಲಿ ಒಬ್ಬರನ್ನು ಪರಿಗಣಿಸಲಾಗುತ್ತದೆ.

ಕಳೆದ ವರ್ಷ ಮಾಜಿ ಕ್ರಿಕೆಟಿಗ ರಮೇಶ್ ಪೊವಾರ್ ಅವರಿಂದ ತೆರವಾದ ಮುಖ್ಯ ಕೋಚ್ ಪಾತ್ರವನ್ನು ವಹಿಸಿಕೊಳ್ಳಲು ಮಾಜಿ ಕ್ರಿಕೆಟಿಗರಾದ ಅಮೋಲ್ ಮುಜುಂದಾರ್ ಮತ್ತು ತುಷಾರ್ ಅರೋಥೆ ಇಬ್ಬರು ಮುಂಚೂಣಿಯಲ್ಲಿರುವ ಅಭ್ಯರ್ಥಿಗಳಾಗಿದ್ದಾರೆ.

ತನ್ನ ನೆಚ್ಚಿನ 3 ಬ್ಯಾಟರ್, 3 ಬೌಲರ್‌ಗಳನ್ನು ಆಯ್ಕೆ ಮಾಡಿದ ಮೊಹಮ್ಮದ್ ಅಮೀರ್; ಅದರಲ್ಲಿ ಇಬ್ಬರು ಭಾರತೀಯರು

ಕಳೆದ ವರ್ಷ ಡಿಸೆಂಬರ್‌ನಲ್ಲಿ ರಮೇಶ್ ಪೊವಾರ್ ಅವರನ್ನು ವಜಾಗೊಳಿಸಿದ ನಂತರ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಖಾಯಂ ಮುಖ್ಯ ಕೋಚ್ ಇಲ್ಲದಂತಾಗಿದೆ.

ಈ ವರ್ಷದ ಆರಂಭದಲ್ಲಿ ಟಿ20 ವಿಶ್ವಕಪ್‌ಗಾಗಿ ಬ್ಯಾಟಿಂಗ್ ಕೋಚ್ ಹೃಷಿಕೇಶ್ ಕಾನಿಟ್ಕರ್ ಮುಖ್ಯ ಕೋಚ್ ಪಾತ್ರವನ್ನು ವಹಿಸಿಕೊಂಡಿದ್ದರು. ಇದೀಗ ಅಮೋಲ್ ಮುಜುಂದಾರ್ ಮತ್ತು ತುಷಾರ್ ಅರೋಥೆ ಅವರಲ್ಲಿ ಒಬ್ಬರು ಮುಂದಿನ ದಿನಗಳಲ್ಲಿ ಮುಖ್ಯ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ.

ತಮ್ಮ ಕ್ರಿಕೆಟ್ ವೃತ್ತಿಜೀವನದ ಸಮಯದಲ್ಲಿ ಭಾರತೀಯ ದೇಶೀಯ ಟೂರ್ನಿಯಲ್ಲಿ ಮನೆಮಾತಾಗಿದ್ದ ಅಮೋಲ್ ಮುಜುಂದಾರ್, ಭಾರತ ಪ್ರವಾಸದ ಸಮಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಹಂಗಾಮಿ ಬ್ಯಾಟಿಂಗ್ ಕೋಚ್ ಆಗಿದ್ದರು. ಮುಜುಂದಾರ್ ಅವರು ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಮೂರು ಋತುಗಳಿಗೆ ಸೇವೆ ಸಲ್ಲಿಸಿದರು.

ಇದೇ ವೇಳೆ ಬರೋಡಾದ ಮಾಜಿ ಕ್ರಿಕೆಟಿಗ ತುಷಾರ್ ಅರೋಥೆ ಅವರು ಕೋಚ್ ಪಾತ್ರಕ್ಕೆ ಹೊಸ ಮುಖವೇನಲ್ಲ. ಈ ಹಿಂದೆ ಎರಡು ಬಾರಿ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಮಾಜಿ ಡರ್ಹಾಮ್ ಕೋಚ್ ಜಾನ್ ಲೆವಿಸ್ ಕೂಡ ಪಾತ್ರಕ್ಕಾಗಿ ಅರ್ಜಿ ಸಲ್ಲಿಸಿದ ನಂತರ ಹೆಸರು ಚಾಲ್ತಿಯಲ್ಲಿದೆ ಎಂದು ತಿಳಿದುಬಂದಿದೆ.

Story first published: Thursday, June 29, 2023, 13:18 [IST]
Other articles published on Jun 29, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+