Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತನ್ನ ನೆಚ್ಚಿನ 3 ಬ್ಯಾಟರ್, 3 ಬೌಲರ್‌ಗಳನ್ನು ಆಯ್ಕೆ ಮಾಡಿದ ಮೊಹಮ್ಮದ್ ಅಮೀರ್; ಅದರಲ್ಲಿ ಇಬ್ಬರು ಭಾರತೀಯರು

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಮೊಹಮ್ಮದ್ ಅಮೀರ್ ತಮ್ಮ ತಂಡದ ಪರವಾಗಿ 36 ಟೆಸ್ಟ್, 61 ಏಕದಿನ ಮತ್ತು 50 ಟಿ20 ಪಂದ್ಯಗಳನ್ನು ವಿವಾದಗಳಿಂದಲೇ ತುಂಬಿದ ವೃತ್ತಿಜೀವನದಲ್ಲಿ ಆಡಿದ್ದಾರೆ.

ಪಾಕಿಸ್ತಾನ ಟೀಮ್ ಮ್ಯಾನೇಜ್‌ಮೆಂಟ್ ತನಗೆ ಮಾನಸಿಕ ಹಿಂಸೆ ನೀಡಿದೆ ಎಂದು ಆರೋಪಿಸಿ ಎಡಗೈ ವೇಗಿ ಮೊಹಮ್ಮದ್ ಅಮೀರ್ 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದರು.

Mohammad Amir Picked His Favorite 3 Batters, 3 Bowlers; Two Of Them Are Indians

2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಗೆಲ್ಲಲು ಮೊಹಮ್ಮದ್ ಅಮೀರ್ 16 ರನ್‌ಗೆ 3 ವಿಕೆಟ್‌ಗಳ ಅದ್ಭುತ ಸ್ಪೆಲ್‌ನೊಂದಿಗೆ ಸಹಾಯ ಮಾಡಿದರು.

ಇದೀಗ ತಮ್ಮ ನೆಚ್ಚಿನ ಮೂರು ಬ್ಯಾಟರ್‌ಗಳು ಮತ್ತು ಮೂರು ಬೌಲರ್‌ಗಳನ್ನು ಹೆಸರಿಸಿದ್ದಾರೆ. ಇವರು ವಿಶ್ವ ಕ್ರಿಕೆಟ್‌ನ ಪ್ರಸ್ತುತ ಆಟಗಾರರಲ್ಲಿ ಮೊಹಮ್ಮದ್ ಅಮೀರ್ ಅವರ ನೆಚ್ಚಿನ ಆಟಗಾರರಾಗಿದ್ದಾರೆ.

ಭಾನುವಾರ, ಜೂನ್ 26ರಂದು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ, ಮೊಹಮ್ಮದ್ ಅಮೀರ್ ಅವರು ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಂ ಅವರನ್ನು ಶ್ಲಾಘಿಸಿದ್ದು, ಇದೇ ವೇಳೆ ಶುಭ್ಮನ್ ಗಿಲ್‌ಗೆ ಉಜ್ವಲ ಭವಿಷ್ಯವಿದೆ ಎಂದು ನುಡಿದರು.

Mohammad Amir Picked His Favorite 3 Batters, 3 Bowlers; Two Of Them Are Indians

"ವಿರಾಟ್ ಕೊಹ್ಲಿ, ಬಾಬರ್ ಅಜಂ ಟಿ20 ಹೊರತುಪಡಿಸಿ ನನ್ನ ಅಚ್ಚುಮೆಚ್ಚಿನ ಬ್ಯಾಟ್ಸ್‌ಮನ್‌ಗಳು. ಇವರು ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ನನ್ನ ನೆಚ್ಚಿನ ಆಟಗಾರರಾಗಿದ್ದಾರೆ. ಇನ್ನು ಶುಭ್ಮನ್ ಗಿಲ್ ಅವರು ಭವಿಷ್ಯದಲ್ಲಿ ಭಾರತಕ್ಕೆ ಮುಂದಿನ ದೊಡ್ಡ ಆಟಗಾರನಾಗುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದು ಮೊಹಮ್ಮದ್ ಅಮೀರ್ ಹೇಳಿದರು.

ಇದೇ ವೇಳೆ ಮೊಹಮ್ಮದ್ ಅಮೀರ್ ತನ್ನ ಮೂರು ನೆಚ್ಚಿನ ಬೌಲರ್‌ಗಳನ್ನು ಆಯ್ಕೆ ಮಾಡಿದ್ದಾರೆ. ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ನಂ.1 ಸ್ಥಾನವನ್ನು ಪಡೆದರೆ, 20ರ ಹರೆಯದ ಪಾಕಿಸ್ತಾನದ ವೇಗಿ ನಸೀಮ್ ಶಾ ಎರಡನೇ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರಿಗೆ ಮೂರನೇ ಸ್ಥಾನ ನೀಡಿದ್ದಾರೆ.

"ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ನನಗೆ ನಂಬರ್ ಒನ್ ಬೌಲರ್ ಆಗಿದ್ದರೆ, ನಂತರದ ಸ್ಥಾನದಲ್ಲಿ ಪಾಕಿಸ್ತಾನ ತಂಡದ ನಸೀಮ್ ಶಾ ಇದ್ದಾರೆ ಮತ್ತು ಮೂರನೆಯದಾಗಿ ಮಿಚೆಲ್ ಸ್ಟಾರ್ಕ್. ಇವರು ಸಂಪೂರ್ಣ ಬೌಲರ್‌ಗಳು ಮತ್ತು ಎಲ್ಲಾ ಸ್ವರೂಪಗಳನ್ನು ಆಡಬಲ್ಲವರಾಗಿದ್ದಾರೆ," ಎಂದು ಮೊಹಮ್ಮದ್ ಅಮೀರ್ ತಿಳಿಸಿದರು.

Mohammad Amir Picked His Favorite 3 Batters, 3 Bowlers; Two Of Them Are Indians

2023ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್ ತಲುಪಲಿದೆ ಎಂದ ಮೊಹಮ್ಮದ್ ಅಮೀರ್

ಇದೇ ಮೊದಲ ಬಾರಿಗೆ ಸಂಪೂರ್ಣ ಭಾರತದಲ್ಲಿಯೇ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂದು ಪಾಕ್ ಮಾಜಿ ವೇಗಿ ಮೊಹಮ್ಮದ್ ಅಮೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

31 ವರ್ಷದ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ಐಸಿಸಿ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಹೋಗುತ್ತದೆ ಎಂದು ಹೇಳಿದ್ದು, ಏಷ್ಯಾದ ಪರಿಸ್ಥಿತಿಗಳಲ್ಲಿ ಮಾಜಿ ಚಾಂಪಿಯನ್ ತಂಡವನ್ನು ಕಡಿಮೆ ಅಂದಾಜು ಮಾಡದಂತೆ ಇತರ ತಂಡಗಳಿಗೆ ಎಚ್ಚರಿಕೆ ನೀಡಿದ್ದಾರೆ.

"ಪಾಕಿಸ್ತಾನ ತಂಡವು ಮೊದಲ ನಾಲ್ಕು ಸ್ಥಾನದಲ್ಲಿರುತ್ತದೆ ಮತ್ತು ಏಷ್ಯಾದ ಪರಿಸ್ಥಿತಿಗಳಲ್ಲಿ ನೀವು ಬಾಬರ್ ಅಜಂ ತಂಡವನ್ನು ಅಂದಾಜಿಸಲು ಸಾಧ್ಯವಿಲ್ಲ," ಎಂದರು.

ಇನ್ನು ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ ಎಂದು ಮೊಹಮ್ಮದ್ ಅಮೀರ್ ಭವಿಷ್ಯ ನುಡಿದ್ದಾರೆ. ಮಿಕ್ಕಿ ಆರ್ಥರ್ ತಮ್ಮ ನೆಚ್ಚಿನ ಕೋಚ್ ಎಂದು ಆಯ್ಕೆ ಮಾಡಿದ್ದಾರೆ. ಪಾಕಿಸ್ತಾನ ತಂಡದ ಕೋಚ್ ದಿನಗಳಲ್ಲಿ ದಕ್ಷಿಣ ಆಫ್ರಿಕಾದ ಅವರ ಪ್ರಭಾವಕ್ಕಾಗಿ ಮೊಹಮ್ಮದ್ ಅಮೀರ್ ಶ್ಲಾಘಿಸಿದರು.

Story first published: Monday, June 26, 2023, 21:55 [IST]
Other articles published on Jun 26, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+