Akash Deep: ಮುಂಬೈನಲ್ಲಿ ವಿಶ್ವ ದಾಖಲೆ ಬರೆದ ಆಕಾಶ್ ದೀಪ್: ಏನದು?
ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಟೆಸ್ಟ್ ಸರಣಿಯಲ್ಲಿ ಆತಿಥೇಯ ತಂಡ ಸೋಲು ಕಂಡಿದೆ. ತವರಿನಲ್ಲಿ ರೋಹಿತ್ ಪಡೆ ಈ ರಿತಿಯಾಗಿ ಸೋಲು ಕಾಣುತ್ತದೆ ಎಂದು ಯಾರು ಊಹಿಸರಲು ಸಹ ಸಾಧ್ಯವಿಲ್ಲ. ಟೀಮ್ ಇಂಡಿಯಾ ಬೆಂಗಳೂರಿನಲ್ಲಿ 8 ವಿಕೆಟ್ ಸೋಲು, ಪುಣೆಯಲ್ಲಿ 113 ರನ್ ಸೋಲು ಕಂಡ ಬಳಿಕ, ಟೀಮ್ ಇಂಡಿಯಾ ಮುಂಬೈನಲ್ಲೂ ಆಘಾತ ಅನುಭವಿಸಿದೆ.
ಟೀಮ್ ಇಂಡಿಯಾದ ವೇಗದ ಬೌಲರ್ ಆಕಾಶ್ ದೀಪ್ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಅಬ್ಬಾ ಅವರು ಬೌಲಿಂಗ್‌ನಲ್ಲಿ ಯಾವ ದಾಖಲೆ ಬರೆದಿದ್ದಾರೆ ಎಂಬ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಓಡುತ್ತಲೇ ಇರಬಹುದು. ಅಸಲಿಗೆ ಅವರು ವಿಶ್ವ ದಾಖಲೆ ಬರೆದಿದ್ದು, ಬೌಲಿಂಗ್‌ನಲ್ಲಿ ಅಲ್ಲ. ಬ್ಯಾಟಿಂಗ್ ನಲ್ಲಿ. ಈ ಮೊದಲು ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವೊಬ್ಬ ಬ್ಯಾಟರ್ ಮಾಡದ ದಾಖಲೆಯನ್ನು ಆಕಾಶ ದೀಪ್ ನಿರ್ಮಿಸಿದ್ದಾರೆ.

ಆಕಾಶ್ ದೀಪ್ ಬರೆದ ವಿಶ್ವ ದಾಖಲೆ ಏನು?
ಆಕಾಶ್ ದೀಪ್ ಬೌಲಿಂಗ್ ಜೊತೆಗೆ ತಂಡಕ್ಕೆ ಬ್ಯಾಟಿಂಗ್‌ನಲ್ಲೂ ನೆರವಾಗಬಲ್ಲ ಪ್ಲೇಯರ್. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಗೋಲ್ಡನ್ ಡಕ್ ಮತ್ತು ಡೈಮಂಡ್ ಡಕ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡದ ಮೊದಲ ಇನಿಂಗ್ಸ್ ವೇಳೆ ಆಕಾಶ್ ದೀಪ್ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದಾಗ ಯಾವುದೇ ಬಾಲ್ ಆಡದೇ ರನ್ ಔಟ್ ಆಗಿದ್ದರು.
ಮೂರನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಅವರು 8 ರನ್ ಗಳಿಸಿ ಔಟ್ ಆದರು. ಇವರು ಔಟ್ ಆಗುತ್ತಿದ್ದಂತೆ ಆಕಾಶ್ ದೀಪ್ ಅಂಗಳ ಪ್ರವೇಶಿಸಿದರು. ಆದರೆ ತಾವು ಎದುರಿಸಿದ ಮೊದಲ ಎಸೆತದಲ್ಲಿ ಗ್ಲೇನ್ ಫಿಲಿಪ್ಸ್ ತೋಡಿದ ಖೆಡ್ಡಾಗೆ ಬಲಿಯಾದರು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಡೈಮಂಡ್ ಡಕ್‌ಗೆ ಔಟಾದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಗೋಲ್ಡನ್ ಡಕ್‌ಗೆ ಔಟಾದರು.
ಡೈಮಂಡ್ ಡಕ್, ಗೋಲ್ಡನ್ ಡಕ್ ಎಂದರೇನು?
ಬ್ಯಾಟ್ಸ್‌ಮನ್ ಯಾವುದೇ ಚೆಂಡನ್ನು ಆಡದೆ ಔಟಾದರೆ ಅದನ್ನು ಡೈಮಂಡ್ ಎಂದು ಕರೆಯಲಾಗುತ್ತದೆ. ಬ್ಯಾಟ್ಸ್‌ಮನ್ ತನ್ನ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ಔಟಾದರೆ ಅದನ್ನು ಗೋಲ್ಡನ್ ಡಕ್ ಎಂದು ಕರೆಯುತ್ತಾರೆ.
ಆಕಾಶ್ ದೀಪ್ ನ್ಯೂಜಿಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡುವ ಅವಕಾಶವನ್ನು ಪಡೆದರು. ಆದರೆ ಯಾವುದೇ ಮ್ಯಾಜಿಕ್ ತೋರಿಸಲು ಸಾಧ್ಯವಾಗಲಿಲ್ಲ. ಇವರು ಆಡಿದ ಎರಡು ಪಂದ್ಯಗಳಲ್ಲಿ ಕೇವಲ 2 ವಿಕೆಟ್ ಮಾತ್ರ ಪಡೆದಿದ್ದಾರೆ. ಈ ವೇಳೆ ಅವರ ಬೌಲಿಂಗ್ ಸರಾಸರಿ 36.50 ಆಗಿತ್ತು. ಆಕಾಶ್ ಆಸ್ಟ್ರೇಲಿಯಾ ಪ್ರವಾಸ ಬೆಳೆಸಲಿರುವ ಟೀಮ್ ಇಂಡಿಯಾದ ಭಾಗವಾಗಿದ್ದಾರೆ. ಇವರ ಫಾರ್ಮ್ ನಿಜಕ್ಕೂ ಟೀಮ್ ಮ್ಯಾನೇಜ್ಮೆಂಟ್ ಟೆನ್ಷನ್ ಹೆಚ್ಚು ಮಾಡಿರುತ್ತದೆ. ಆಸೀಸ್ ಪ್ರವಾಸದಲ್ಲಿ ಮೊನಚಾದ ದಾಳಿ ಸಂಘಟಿಸಲಿ ಎಂಬುದೇ ಅಭಿಮಾನಿಗಳ ಆಶಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications