ಭಾರತ ಹಾಗೂ ಇಂಗ್ಲೆಂಡ್ ನಡುವಣ ಆಂಡರ್ಸನ್, ತೆಂಡುಲ್ಕರ್ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿಯ ಕೊನೆಯ ಟೆಸ್ಟ್ ಪಂದ್ಯ ಓವಲ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ಕನಸು ಕಾಣುತ್ತಿದೆ. ಓವಲ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಟೀಮ್ ಇಂಡಿಯಾದ ಆಕಾಶ್ ದೀಪ್ ಭರ್ಜರಿ ಪ್ರದರ್ಶನ ನೀಡಿಯಾದ ಅಮೋಘ ಬ್ಯಾಟಿಂಗ್ ನಡೆಸಿ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದಾರೆ. ಈ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಟೀಮ್ ಇಂಡಿಯಾ ಪರ ಬೌಲರ್ ಆಕಾಶ್ ದೀಪ್ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರಾಗಿದ್ದಾರೆ. ಇವರು ಇನಿಂಗ್ಸ್‌ನಲ್ಲಿ 94 ಎಸೆತಗಳಲ್ಲಿ 12 ಬೌಂಡರಿ ನೆರವಿನಿಂದ 66 ರನ್ ಬಾರಿಸಿದರು. ತಮ್ಮ ಟೆಸ್ಟ್ ಕ್ರಿಕೆಟನ 10ನೇ ಪಂದ್ಯವನ್ನು ಆಡಿರುವ ಆಕಾಶ್ ದೀಪ್ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಮಾಡದ ದಾಖಲೆ ಮಾಡಿದ್ದಾರೆ. ಈ ಮೂಲಕ ಇಂಗ್ಲೆಂಡ್ ನೆಲದಲ್ಲಿ 50ಕ್ಕೂ ಹೆಚ್ಚು ರನ್ ಬಾರಿಸಿದ ದಾಖಲೆ ಬರೆದರು.

ಆಕಾಶ್ ದೀಪ್ ಈ ಸೊಗಸಾದ ಇನಿಂಗ್ಸ್ ನಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಈ ಮೂಲಕ ಇಂಗ್ಲೆಂಡ್ ನೆಲದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಮಾಡದ ಸಾಧನೆಯನ್ನು ಮಾಡಿ ಅಬ್ಬರಿಸಿದರು. ಸದ್ಯ ಭಾರತ ತಂಡದ ಕೋಚ್ ಆಗಿರುವ ಗೌತಮ್ ಗಂಭೀರ್ ಒಟ್ಟು 58 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 41ರ ಸರಾಸರಿಯಲ್ಲಿ 4154 ರನ್ ಬಾರಿಸಿದ್ದಾರೆ. ಅಲ್ಲದೆ 22 ಅರ್ಧಶತಕ ಹಾಗೂ 9 ಶತಕ ಸಿಡಿಸಿದ್ದಾರೆ. ಆದರೆ ಇವರು ಇಂಗ್ಲೆಂಡ್‌ನಲ್ಲಿ ಇವರು 5 ಟೆಸ್ಟ್ ಪಂದ್ಯಗಳ 10 ಇನಿಂಗ್ಸ್‌ನಲ್ಲಿ ಒಂದೂ ಅರ್ಧಶತಕ ಬಾರಿಸಿಲ್ಲ. ಗೌತಮ್ ಇಂಗ್ಲೆಂಡ್ ನೆಲದಲ್ಲಿ 38 ರನ್ ಬಾರಿಸಿದ್ದೇ ಗರಿಷ್ಠ ರನ್ ಆಗಿದೆ.
ಇನ್ನು ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ಶಿಖರ್ ಧವನ್ 34 ಟೆಸ್ಟ್ ಪಂದ್ಯಗಳನ್ನು ತಮ್ಮ ವೃತ್ತಿ ಜೀವನದಲ್ಲಿ ಆಡಿದ್ದಾರೆ. ಈ ವೇಳೆ ಇವರು 40ರ ಸರಾಸರಿಯಲ್ಲಿ 2315 ರನ್ ಕಲೆ ಹಾಕಿದ್ದಾರೆ. ಈ ವೇಳೆ 7 ಶತಕ, 5 ಅರ್ಧಶತಕ ಬಾರಿಸಿದ್ದಾರೆ. ಇವರು ಸಹ ಇಂಗ್ಲೆಂಡ್‌ನಲ್ಲಿ ಒಟ್ಟು 7 ಟೆಸ್ಟ್ ಪಂದ್ಯಗಳ 14 ಇನಿಂಗ್ಸ್‌ನಲ್ಲಿ ಆಡಿದ್ದಾರೆ. ಈ ವೇಳೆ ಇವರು 284 ರನ್ ಬಾರಿಸಿದ್ದಾರೆ. ಆದರೆ ಒಮ್ಮೆಯೂ ಇವರು ಅರ್ಧಶತಕ ಬಾರಿಸಿಲ್ಲ. ಇವರ ಗರಿಷ್ಠ ರನ 44 ಆಗಿದೆ.

ಭಾರತ ತಂಡದ ಪರ 106 ಟೆಸ್ಟ್ ಆಡಿ 25ರ ಸರಾಸರಿಯಲಲಿ 3503 ರನ್ ಸಿಡಿಸಿದ್ದಾರೆ. ಈ ವೇಳೆ ಇವರು 6 ಶತಕ ಹಾಗೂ 14 ಅರ್ಧಶತಕ ಬಾರಿಸಿದ್ದಾರೆ. ಇವರು ಇಂಗ್ಲೆಂಡ್‌ನಲ್ಲಿ ಒಟ್ಟು 7 ಟೆಸ್ಟ್ ಪಂದ್ಯಗಳ 14 ಇನಿಂಗ್ಸ್‌ನಲ್ಲಿ ಆಡಿದ್ದಾರೆ. ಈ ವೇಳೆ ಇವರು ಒಮ್ಮೆಯೂ ಅರ್ಧಶತಕ ಬಾರಿಸಿಲ್ಲ.