ಟಿ20 ಕ್ರಿಕೆಟ್‌ನಲ್ಲಿ ಅಕ್ಷಯ್ ಕರ್ನೆವಾರ್ ವಿಶ್ವದಾಖಲೆ: 4 ಓವರ್ 4 ಮೇಡನ್
ವಿದರ್ಭದ ಎಡಗೈ ಸಾಂಪ್ರದಾಯಿಕ ಸ್ಪಿನ್ನರ್ ಅಕ್ಷಯ್ ಕರ್ನೆವರ್ ವಿಶ್ವದಾಖಲೆ ಮಾಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅಕ್ಷಯ್ ಕರ್ನೆವಾರ್ ಇದುವರೆಗೂ ಯಾರೂ ಮಾಡದ ಸಾಧನೆ ಗರಿ ಪಡೆದಿದ್ದಾರೆ.
ಹೌದು, ಸದ್ಯ ವಿದರ್ಭದಲ್ಲಿ ಅಕ್ಷಯ್ ಸಾಧನೆಯದ್ದೇ ಮಾತಾಗಿದೆ. ಸೋಮವಾರ ಅಂದರೆ ನಿನ್ನೆ ಅಕ್ಷಯ್ ಪುರುಷರ ಟಿ20 ಕ್ರಿಕೆಟ್‌ನಲ್ಲಿ ಹಿಂದೆಂದೂ ಕಾಣದ ಸಾಧನೆ ಮಾಡಿದ್ದು, ನಾಲ್ಕು ಓವರ್‌ಗಳಲ್ಲಿ ಯಾವುದೇ ರನ್ ನೀಡದೆ ನಾಲ್ಕು ಮೇಡನ್ ಓವರ್ ಮಾಡಿದ್ದಾರೆ.
ವಿಜಯವಾಡದ ಎಸಿಎ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಮಣಿಪುರ ವಿರುದ್ಧದ ರೌಂಡ್ 4 ಪ್ಲೇಟ್ ಪಂದ್ಯದಲ್ಲಿ ನಾಲ್ಕು ಮೇಡನ್ ಓವರ್‌ಗಳನ್ನು ಬೌಲಿಂಗ್ ಮಾಡುವ ಮೂಲಕ ಈ ಸಾಧನೆಯನ್ನು ಸಾಧಿಸಿದರು. ನಾಲ್ಕು ಓವರ್ ಮೇಡನ್ ಮಾಡಿದ್ದಷ್ಟೇ ಅಲ್ಲದೆ ಎರಡು ವಿಕೆಟ್‌ಗಳನ್ನು ಸಹ ಕಬಳಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ಬೌಲರ್ ಇವರಾಗಿದ್ದಾರೆ.
ವಿದರ್ಭವು ತಮ್ಮ ಸೀಸನ್ ಆರಂಭಿಕ ಪಂದ್ಯದಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಉತ್ತಮ ಪ್ರದರ್ಶನ ತೋರಿತು. ಕರ್ನೆವಾರ್ ಅವರ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ 11 ರನ್‌ಗಳಿಗೆ ಒಂದೆರಡು ವಿಕೆಟ್‌ಗಳನ್ನು ಪಡೆದರು. ಆದಾಗ್ಯೂ, ನಾಗಾಲ್ಯಾಂಡ್ ವಿರುದ್ಧದ ತಂಡದ ಎರಡನೇ ಪಂದ್ಯದಲ್ಲಿ ಅವರು ಯಾವುದೇ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ರು.
ಕರ್ನೆವಾರ್ ನಂತರದ ಪಂದ್ಯದಲ್ಲಿ ಕಂಬ್ಯಾಕ್ ಮಾಡಿದರು ಮತ್ತು ಮೇಘಾಲಯ ವಿರುದ್ಧ ಎರಡು ವಿಕೆಟ್‌ಗಳನ್ನು ಉರುಳಿಸಿದರು. ನಂತರ ಅವರು ಮಣಿಪುರ ವಿರುದ್ಧ ತಮ್ಮ ಅಮೋಘ ಫಾರ್ಮ್ ಮುಂದುವರಿಸಿದ್ರು. ಕರ್ನೆವಾರ್ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ಒಂದೇ ಒಂದು ರನ್‌ಗಳನ್ನು ಬಿಟ್ಟುಕೊಡದೆ ಇತಿಹಾಸವನ್ನು ಸೃಷ್ಟಿಸಿದರು.

ವಿದರ್ಭ ಗ್ರೂಪ್‌ನ ಅಗ್ರ ಸ್ಥಾನದಲ್ಲಿದೆ
ವಿದರ್ಭ ತಂಡವು ಇಲ್ಲಿಯವರೆಗೆ ಆಡಿದ ಎಲ್ಲಾ ಐದು ಪಂದ್ಯಗಳನ್ನು ಗೆದ್ದು, ಪ್ಲೇಟ್ ಗ್ರೂಪ್ ಪಾಯಿಂಟ್ಸ್ ಟೇಬಲ್‌ನಲ್ಲಿ ಲೀಗ್ ಹಂತವನ್ನು ಮುಗಿಸಿದರು. ನವೆಂಬರ್ 16 ರಂದು ನಡೆಯುವ ಮೊದಲ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.

ಅಕ್ಷಯ್ ಕರ್ನೆವಾರ್ ಯಾರು?
ಮಹಾರಾಷ್ಟ್ರದ ವಾಘೋಲಿಯಲ್ಲಿ ಅಕ್ಟೋಬರ್ 12, 1992ರಲ್ಲಿ ಜನಿಸಿದ ಅಕ್ಷಯ್ ಕರ್ನೆವಾರ್ ಇಂದಿನ ದಿನಕ್ಕೆ 29 ವರ್ಷ 28 ದಿನಗಳ ವಯಸ್ಸಿನವರಾಗಿದ್ದಾರೆ. ಅಂದಾಜು ಆರು ಅಡಿ ಎತ್ತರವಿರುವ ಈತ ಸಾಂಪ್ರದಾಯಿಕ ಎಡಗೈ ಸ್ಪಿನ್ನರ್ ಆಗಿದ್ದಾರೆ.

ಅಕ್ಷಯ್ ಕುಮಾರ್ ಟಿ20 ಕೆರಿಯರ್
ಅಕ್ಷಯ್ 2016 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಆವೃತ್ತಿಯಲ್ಲಿ ಗುಜರಾತ್ ವಿರುದ್ಧ ವಿದರ್ಭ ಪರ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ನಾಗ್ಪುರದ ಜಮ್ತಾದಲ್ಲಿರುವ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಿತು. ಅವರು ತಮ್ಮ ಎರಡು ಓವರ್‌ಗಳ ಸ್ಪೆಲ್‌ನಲ್ಲಿ 26 ರನ್‌ಗಳನ್ನು ಬಿಟ್ಟುಕೊಟ್ಟ ಕಾರಣ ಅವರ ವೃತ್ತಿಜೀವನದ ಆರಂಭ ಪಡೆಯಲಿಲ್ಲ. ಇನ್ನು ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್‌ನಲ್ಲಿ ಕೇವಲ ಎರಡು ರನ್‌ಗಳಿಗೆ ಔಟಾದರು. ಅಕ್ಷಯ್ ಕರ್ನೆವಾರ್ ಇಲ್ಲಿಯವರೆಗಿನ 43 ಇನ್ನಿಂಗ್ಸ್‌ಗಳಲ್ಲಿ 43 ವಿಕೆಟ್‌ಗಳನ್ನು ಪಡೆದಿದ್ದಾರೆ. ನವೆಂಬರ್ 9 ರಂದು ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2021 ರ ಸಮಯದಲ್ಲಿ ಸಿಕ್ಕಿಂ ವಿರುದ್ಧ 4/5 ರ ಅತ್ಯುತ್ತಮ ಸ್ಪೆಲ್ ಆಗಿತ್ತು.

ಆರ್‌ಸಿಬಿ ತಂಡದಲ್ಲಿದ್ದ ಅಕ್ಷಯ್ ಕರ್ನೆವಾರ್
ಕಳೆದ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿದ್ದ ವಿದರ್ಭ ಸ್ಪಿನ್ನರ್ ಅಕ್ಷಯ್ ಕರ್ನೆವಾರ್ ಯಾವುದೇ ಪಂದ್ಯದಲ್ಲಿ ಅವಕಾಶ ಪಡೆಯದೇ ಬೆಂಚ್ ಕಾದಿದ್ದಾರೆ. ಇದೀಗ ಇಡೀ ಕ್ರಿಕೆಟ್ ಲೋಕವೇ ಒಮ್ಮೆ ಇವರತ್ತ ತಿರುಗಿ ನೋಡುವಂತಹ ಸಾಧನೆಯನ್ನ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications