ಅಬುಧಾಬಿ, ಅಕ್ಟೋಬರ್, 17: ಇಂಗ್ಲೆಂಡ್ ನಾಯಕ ಅಲಿಸ್ಟರ್ ಕುಕ್ 836 ನಿಮಿಷ ಕಾಲ (14 ಗಂಟೆಗೆ 4 ನಿಮಿಷ ಕಡಿಮೆ) ಕ್ರೀಸ್ ನಲ್ಲಿ ನಿಂತು 263(528 ಚೆಂಡು) ರನ್ ಗಳಿಸಿ ಸಾಧನೆ ಮೆರೆದಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೂರನೆಯ ಅತಿದೊಡ್ಡ ಇನಿಂಗ್ಸ್ ಎಂಬ ಹೆಗ್ಗಳಿಕೆಯನ್ನು ಕುಕ್ ಆಟ ಪಡೆದುಕೊಂಡಿತು.
ಪಾಕಿಸ್ತಾನದ ಹನೀಫ್ ಮೊಹಮದ್ , ದಕ್ಷಿಣ ಆಫ್ರಿಕಾದ ಗ್ಯಾರಿ ಕ್ರಸ್ಟನ್ ಸಾಲಿಗೆ ಕುಕ್ ಸೇರ್ಪಡೆಯಾದರು. 2011 ರಲ್ಲಿ 773 ನಿಮಿಷ ಕಾಲ ಕ್ರೀಸ್ ನಲ್ಲಿ ನಿಂತಿದ್ದ ಕುಕ್ ಜೀವನಶ್ರೇಷ್ಠ 294 ರನ್ ಗಳಿಸಿದ್ದರು. ಅಲ್ಲದೇ ಅಲಸ್ಟೇರ್ ಕುಕ್ ಈವರೆಗೆ ಆಡಿದ ಎಲ್ಲ 9 ದೇಶಗಳಲ್ಲಿ ಶತಕ ಹೊಡೆದ ವಿಶ್ವದ ದ್ವಿತೀಯ ಕ್ರಿಕೆಟಿಗ ಎಂಬ ಸಾಧನೆಯನ್ನು ತಮ್ಮದಾಗಿಸಿಕೊಂಡರು.

ಏಷ್ಯಾ ಖಂಡದಲ್ಲಿ ಅತೀ ಹೆಚ್ಚು 4 ಸಲ 150 ಪ್ಲಸ್ ರನ್ ಬಾರಿಸಿದ ಹೊರಗಿನ ಬ್ಯಾಟ್ಸ್‌ಮನ್ ಎಮಭ ದಾಖಲೆಯೂ ಕುಕ್ ಪಾಲಾಯಿತು. ಬಾರ್ಡರ್, ಲಾಯ್ಡ, ಲಾರಾ, ಫ್ಲೆಮಿಂಗ್, ಡಿ ವಿಲಿಯರ್ ತಲಾ 3 ಸಲ 150 ಪ್ಲಸ್ ರನ್ ಬಾರಿಸಿದ್ದಾರೆ. 2015ರಲ್ಲಿ ಸರ್ವಾಧಿಕ ರನ್ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಕುಕ್ ಪಾತ್ರರಾದರು.
ಟೆಸ್ಟ್ ಕ್ರಿಕೆಟ್ ನ ಟಾಪ್ 5 ಲಾಂಗೆಸ್ಟ್ ಇನಿಂಗ್ಸ್
* 970 ನಿಮಿಷ, ಹನೀಪ್ ಮೊಹಮದ್(337 ರನ್)(ಪಾಕಿಸ್ತಾನ) ವೆಸ್ಟ್ ಇಂಡೀಸ್ ವಿರುದ್ಧ, 1958
* 878 ನಿಮಿಷ, ಗ್ಯಾರಿ ಕ್ರಸ್ಟನ್(275 ರನ್)(ದಕ್ಷಿಣ ಆಫ್ರಿಕಾ), ಇಂಗ್ಲೆಂಡ್, 1990
* 836 ನಿಮಿಷ ಅಲಿಸ್ಟರ್ ಕುಕ್ (263)(ಇಂಗ್ಲೆಂಡ್) ಪಾಕಿಸ್ತಾನದ ವಿರುದ್ಧ, 2015
* 799 ಸನತ್ ಜಯಸೂರ್ಯ(340 ರನ್) (ಶ್ರೀಲಂಕಾ) ಭಾರತದ ವಿರುದ್ಧ, 1997
* 797 ನಿಮಿಷ(364 ರನ್) ಲೆನ್ ಹಟನ್(ಇಂಗ್ಲೆಂಡ್) ಆಸ್ಟ್ರೇಲಿಯಾ ವಿರುದ್ಧ, 1938